ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ಬಿಡುಗಡೆ

ತಗದಿಡು. ಬೋನಸ್-ಗೀನಸ್ ಅಂತ ಈ ಸರೆ ಭಾಳ ಬಂದದ ನೋಡು, ಹತ್ತು ಸಾವಿರದ ಮ್ಯಾಲೆ ಇರಬೇಕು. ನನ್ನ ಸ್ಕೂಟರಿನ ಪೆಟ್ರೋಲ್ ಖರ್ಚಿಗಷ್ಟು ನೀ ಕೊಟ್ಟರ ಸಾಕು. ಉಳದದ್ದೆಲ್ಲಾ ನಿಂದೆ. ನಿನಗ ಹ್ಯಾಂಗ ಬೇಕೋ ಹಾಂಗ ಖರ್ಚು ಮಾಡು."

     ಮೊದಲು ಆತ ಪ್ರೊಬೇಶನರಿ ಆಫೀಸರ್ ಆಗಿದ್ದ. ಆಗ ಬರುತ್ತಿದ್ದ ಸಂಬಳ ಕಡಿಮೆಯಿತ್ತು ಇತ್ತು. ಆಗಲೂ ಆತ ಹೀಗೆಯೇ ಎಲ್ಲವನ್ನೂ ತಂದು ಆಕೆಯ ಕೈಯಲ್ಲಿಡುತಿದ್ದ. ಈಗ ಆತ ತನ್ನ ಡಿಪಾರ್ಟ್ಮೆಂಟಿನ ಅತ್ಯಂತ ಹಿರಿಯ ಅಧಿಕಾರಿ. ದೊಡ್ಡ ಸಂಬಳ ಬರುತ್ತದೆ. ಈಗಲೂ ಎಲ್ಲಾ ತಂದು ಆಕೆಯ ಕೈಗೆ ಹಾಕುತ್ತಾನೆ. ತನ್ನ ಸಂಬಳದೊಂದಿಗೆ ಆತನದನ್ನೂ  ಆಕೆ ಬ್ಯಾಂಕಿನಲ್ಲಿ ಜಾಯಿಂಟ್ ಅಕೌಂಟಿನಲ್ಲಿಡುತ್ತಾಳೆ. ಹೆಂಡತಿಗೆ ಬರುವ ಹಣವೆಷ್ಟು, ಎಲ್ಲಿದೆ, ಹೇಗೆ ಖರ್ಚು ಮಾಡುತ್ತಾಳೆ, ಅದೆಲ್ಲ ಆತ ಕೇಳಿದವನೇ ಅಲ್ಲ.
                                ***
         "ಸರೂ, ನೀ ಕೂಸಿಗೆ ಹಾಲು ಕುಡಿಸಿ ನನ್ನ ಕಡೆ ಕೊಟ್ಟಬಿಡು, ನಾ ನೋಡಿಕೋತೀನಿ. ನೀ ಬ್ಯಾರೆ ರೂಮಿನೊಳಗ ಹೋಗಿ ಆರಾಮ ಮಲಕೋ. ಎರಡು ತಿಂಗಳ ಹಸಿ ಬಾಣಂತಿ. ಈ ನಮ್ಮ ರಾಜಕುಮಾರ ಹಗಲೆಲ್ಲಾ ಮಲಗಿ ರಾತ್ರಿಯೆಲ್ಲಾ ಎಚ್ಚರಿರ್ತಾನೆ. ಅವನ ಜೋಡಿ ನೀನು ಜಾಗರಣಿ ಮಾಡಿದರ ನಿನಗೆ ತ್ರಾಸಾಗ್ತದ. ಇಂವಾ ದೊಡ್ಡಾoವ ಆಗೂತನಕಾ ರಾತ್ರಿಯೆಲ್ಲಾ ಇವನ್ನ ನೋಡಿಕೊಳ್ಳೋ ಡ್ಯೂಟಿ ನಾ ಮಾಡ್ತೀನಿ. ನಿನ್ನ ಆರೋಗ್ಯ ಮುಖ್ಯ." -ಆತನದು ಬಹಳ ನಿಷ್ಪಕ್ಷಪಾತ ದೃಷ್ಟಿ. ಮಗುವನ್ನು ನೋಡಿಕೊಳ್ಳುವ ಮತ್ತು ಬೆಳೆಸುವ ಜವಾಬ್ದಾರಿ ಕೇವಲ ತಾಯಿಯದು ಅಂತ ಆತ ಒಪ್ಪುತ್ತಿರಲಿಲ್ಲ. ಗಂಡ-ಹೆಂಡತಿ ಇಬ್ಬರೂ ಕೂಡಿ ಮಕ್ಕಳನ್ನು ಹಡೆದಿರುತ್ತಾರೆಂದ ಮೇಲೆ, ಅದರಲ್ಲೂ ಇಬ್ಬರೂ ಉದ್ಯೋಗಸ್ಥರಾಗುತ್ತಾರೆಂದ ಮೇಲೆ, ಮಕ್ಕಳ ಜವಾಬ್ದಾರಿ ಇಬ್ಬರಿಗೂ ಸೇರಬೇಕು ಅಂತ ಆತನ ವಾದ. ಅದಕ್ಕೇ ಆತ ಯಾವಾಗಲೂ ಹೇಳುತ್ತಿದ್ದ, 'ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ' ಅನ್ನುವ ಪದಪ್ರಯೋಗವೇ ತಪ್ಪು. ಅದನ್ನು 'ತಂದೆ-ತಾಯಿ ಮತ್ತು ಶಿಶು ಕಲ್ಯಾಣ ಇಲಾಖೆ' ಅಂತ ಬದಲಾಯಿಸಬೇಕು.
         "ಸರೂ, ನೀ ತಿಂಡಿ ರೆಡಿ ಮಾಡೂದ್ರಾಗ ನಾನು ರಾಜೂಗ ಸ್ನಾನ ಮಾಡಿಸಿ ಡ್ರೆಸ್ ಹಾಕಿ ಸ್ಕೂಲ್ ಬ್ಯಾಗ್ ತಯಾರು ಮಾಡಿರ್ತೀನಿ . ಅಥವಾ ನೀ ಅವನನ್ನ ತಯಾರು ಮಾಡತಿದ್ದರೆ ಮಾಡು. ನಾ ಅವನ ಟಿಫಿನ್ ರೆಡಿ ಮಾಡ್ತೀನಿ. The choice is yours."
          "ಸರೂ, ಬ್ಯಾಂಕಿನಿಂದ ದಣದು ಬಂದೀದಿ. ಈಗ ರಾತ್ರಿ ಆಡಿಗೀನೂ ನೀನs