ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ... 425


           "ನೋ ಅಬ್ಜೆಕ್ಷನ್" ಅಂತ ನಗುತ್ತ ಉತ್ತರಿಸಿದ ಶಿಶಿಯ ಕೈಹಿಡಿದುಕೊಂಡು ಆತ ಜನಸಾಗರದ ಮಧ್ಯ ದಾರಿ ಮಾಡಿಕೊಂಡು ತನ್ನ ಕಾರು ಪಾರ್ಕ್ ಮಾಡಿದ್ದಲ್ಲಿಗೆ ನಡೆದ.
            ಮುಂದಿನ ಸುಮಾರು ಅರ್ಧ ತಾಸಿನವರೆಗೆ ಒಬ್ಬನೇ ಆಡಿದ ಆತನ ಮಾತುಗಳನ್ನು ಶಶಿ ಆಕಳಿಸುತ್ತಾ ಕೂತು ಕೇಳಿದಳು. ಶಶಿಯ ಬಗೆಗಿನ ಆತನ ಹಲವಾರು ವರ್ಷಗಳ ಪ್ರೇಮ ; ಆಕೆಯ ನಿರಾಕರಣೆಯಿಂದ ಅದು ಕಡಿಮೆಯಾಗಿಲ್ಲ ; ಆಕೆ ಹಲವಾರು ಸಲ ಉದ್ದೇಶಪೂರ್ವಕವಾಗಿ ಬೇರೆಯವರ ಸಂಗ ಮಾಡಿದ್ದರೂ ಆತ ಅದ್ದನ್ನು ಕಡೆಗಣಿಸಿದ್ದಾನೆ ; ಆಕೆ ಇಲ್ಲದೆ ಜೀವನ ಅಪೂರ್ಣ ಅಂತ ಆತನಿಗೆ ಈಗಲೂ ಅನಿಸುತ್ತದೆ. ಅದಕ್ಕೇ ಇಷ್ಟು ವರ್ಷ ಆತ ಮದುವೆಯಾಗದೆ ಉಳಿದದ್ದು ; ಆದರೆ ಊರಿನಲ್ಲಿ ಆತನಿಗೆ ವೃದ್ಧ ತಾಯಿಯೊಬ್ಬಳಿದ್ದಾಳೆ, ಮಗನ ಲಗ್ನ ನೋಡಿ ಸಾಯುವ ಎಚ್ಛೆ ಮೂದುಕಿಯದು ; ಈ ಸಲ ರಜೆಯಲ್ಲಿ ಈ ಕಾರ್ಯ ಆಗಲೇಬೇಕೆಂಬ ಆಕೆಯ ಹಟ, ವಿನಂತಿ, ಕೊನೆಯ ಆಸೆ ; ಮಗಣದವನು ಅಷ್ಟಾನ್ನದರೂ ನಡೆಸಿಕೊಡದಿದ್ದರೆ ಹೇಗೆ? ಶಶಿ ದೊಡ್ಡ ಮನಸ್ಸು ಮಾಡಿ ಒಪ್ಪುತಳೆಯೇ ಅಂತ ಕೊನೆಯ ಸಲ ಕೇಳುತ್ತಿದ್ದಾನೆ ಆತ ; ಇಲ್ಲವೆಂದಾದರೆ ತಾಯಿ ಹೇಳಿದ ಯಾವ ಹೆಣ್ಣಿಗಾದರೂ ಕಣ್ಣುಮುಚ್ಚಿ ತಳಿ ಕಟ್ಟುವುದೊಂದೇ ಆಟನಿಗುಳಿದಿರುವ ದಾರಿ ; ಇದಕ್ಕೆ ಶಶಿ ಏನನ್ನುತ್ತಾಳೆ?
              "ಕೇಳಿದ್ದನ್ನು ಎಷ್ಟು ಸಲ ಕೇಳ್ತಿ ಸತೀಶ್ ? ಹೇಳಿದ್ದನ್ನ ಎಷ್ಟು ಸಲ ಹೇಳಬೇಕು?"
               ಹಿಂದಿನ ರಾತ್ರಿ ಓದಿದ್ದ ಕಮಲಾನ ಡಾಯರಿಯ ಪರಿಣಾಮವೋ ಏನೋ, ಶಶಿಗೆ ಗಂಡಸು ಜಾತಿಯ ಬಗೆಗೇ ಎಲ್ಲಿಲ್ಲದ ಅಸಹನೆ-ಅಸಡ್ಡೆ ಅನಿಸತೊಡಗಿತ್ತು. ಅದನ್ನು ಮುಚ್ಚಿಡುವ ಪ್ರಾಯತ್ನ ಮಾಡದೆ ಆಕೆ ಅಂದಳು. "ಈ ಜನ್ಮದಾಗ ನಾ ಲಗ್ನ ಆಗಿ ಒಬ್ಬ ಗಂಡಸಿನ ಗುಲಾಮಳಾಗೋದಿಲ್ಲ."
               ಗುಲಾಮ ಯಾಕಾಗ್ತಿ ಶಶಿ ? ಮಹಾರಾಣಿ ಹಾಂಗ ಇರು. ನಾನು ನಿನ್ನ ಗುಲಾಮ ಆಗ್ತೀನಿ ಬೇಕಾದರ. ನಿನಗ ಎಷ್ಟ ಸರೆ ಹೇಳೀನಿ..."
               ನನಗ ಏನೂ ಹೇಳಬ್ಯಾಡ ಸತೀಶ, ಅದರಿಂದ ಏನೂ ಉಪಯೋಗ ಆಗೊದಿಲ್ಲ. ಥಣ್ಣಗ ಊರಿಗೆ ಹೋಗಿ ನಿಮ್ಮವ್ವ (ತೋರಿಸಿದ) ಹುಡುಗಿನ್ನ ಲಗ್ನಾಗಿ ಸುಖದಿಂದಿರು." -- ಶಾಶಿ ತಣ್ಣಗೆ ಹೇಳಿದಳು.
               ಸತೀಶ್ ಗಂಭೀರವಾಗಿ ಕಾರನ್ನು ಹಾಸ್ಪಿಟಲಿನ ರಸ್ತೆಗೆ ತಿರುಗಿಸಿದ. ಟ್ರ್ಯಾಫಿಕ್ ಸಿಗ್ನಲ್ ಗಳ  ಕಡೆ ಆತನ ಗಮನವಿಲ್ಲದ್ದನ್ನು ಗಮನಿಸಿದ ಶಶಿ ಆತನ ಹೆಗಲು ಮುಟ್ಟಿ