ಇಂದು ಸಾಕಷ್ಟು ಬಿಸಿಲು ಬಿಡಿದರಿಂದಲೋ ಏನೋ, ಚಿತ್ರದ ಕೆಲಸದಲ್ಲಿ
ಉತ್ಸಾಹವೆನಿಸ ತೊಡಗಿದೆ. ಇದನ್ನು ನೋಡಿದರೆ ಒಮ್ಮೆ ತೆಗೆದ ಚಿತ್ರವನೇ ರಿಪೇರಿ
ಮಾಡಿದ ಹಾಗೆ ಅನಿಸುವುದಿಲ್ಲ. ಅವನ ಬಟ್ಟೆಯಂತೂ ಒಮ್ಮೆ
ತೊಯಿಡ್ತ್ಯಂಬುದರ ಗುರುತೇ ಇಲ್ಲ. ಇದಕ್ಕಾಗಿ ರಾತ್ರಿ ಯಿಡೀ ಕಣ್ಣಲಿ ಕಣ್ಣಟ್ಟು
ಶ್ರಮಿಸಬೇಕಾಯಿತು. ಈ ಚಿತ್ರವನ್ನು ಹಿಂದೆ ಆಯಿಲ್ ಪೈಂಟ್ ಮಾಡದೆ
ವಾಟರ್ ಪೈಂಟ್ ಮಾಡಿದ್ದು ಈಗ ಎಷ್ಟು ಅನುಕೂಲವಾಯಿತು ! ಇನ್ನು
ಹಿನ್ನಲೆಯಲ್ಲಿನ ಗಿಡ -ಗುಡ್ಡ ರಸ್ತೆಯ ಮೇಲಿನ ಮಳೆಯ ಗುರುತು ಅಳಿಸಿ,
ಮುಗಿಲ ಲೊಬ್ಬ ಸೂರ್ಯನನ್ನು ಮುಡಿಸಿ , ಮತ್ತೆ ಸ್ವಲ್ಪ ನೆರಳು-ಬೆಳಕನ್ನು
ಚಿತ್ರಿಸಿದರಾಯಿತು . ಕೊನೆಗೆ ಮುಖ - ತಲೆಯನ್ನು ಸ್ವಲ್ಪ ಟಚ್ ಮಾಡಬಹುದು.....
-"ಏನಂತೀರಿ ಆರ್ಟಿಸ್ಟ್ ಬಾಯಿಯವರು, ಊಟಾ, ಸುದ್ದಾ, ನೆಟ್ಟಗೆ
ಮಾಡಲಿಲ್ಲ ಇವತ್ತು. ಹಿಂಗಾದರ ನಿನ್ನ ಪ್ರಕೃತಿ ಕೆಟಿತು ಅಂತ ಅಂಜಿಕೆ ನನಗ ... ಅರೆರೆ,
ಎಷ್ಟು ಪ್ರೋಗ್ರೆಸ್ ಆಗೇದಲ್ಲ ಸಹನಾ ನಿನ್ನ ಚಿತ್ರದಾಗ ! ಈ ಮನುಷ್ಯನ ತಲಿ ಒಂದು
ಬಿಟು ಉಳದದ್ದೆಲ್ಲ ಬದಲಾಗಿ ಬಿಟ್ಟದಿದೆ . ಇದೆಂಥ ಜಾದು ಆದ ನಿನ್ನ
ಕೈ ಯೊಳಗೆ ! ನಿನ್ನ ಪ್ಲಾನ್ ಕೇಳಿದಾಗ ಎಷ್ಟು ಇದು ನ್ಯಾಚುರಲ್ ಆಗಬಹುದು
ಅನಿಸಿದ್ದಿಲ್ಲ. ನನಗೆ ಖರೇನ ಸಹನಾ. ಎಂಥಾದೋ ಹೊಸಾ ಜೀವ ತುಂಬಿಧಾಂಗ
ಅನಸ್ತದ ಅವನ ಮೈಯೊಳಗೆ."
"ನಿನ್ನ ಗಂಡ ನೀ ಸಿಟ್ಟಗೆದ್ದಾಗ ನಿನ್ನ ಸುಳ್ಳು ಹೊಗಳೂಹಾಂಗ ನನ್ನ
ಹೊಗಳಬ್ಯಾಡ ಸರೋಜ . ನೀ ಹೇಳಿದಷ್ಟು ಛಲೋ ಆಗಿತ್ತಂದ್ರ ನನಗೆ ಈಗ
ಒಂದು ಕಪ್ ಕಾಫಿ ಮಾಡಿಕೊಡು ನೋಡೋಣ. ಯಾಕೋ ಕೆಟ್ಟ ತಲೆನೋವು
ಬಂದದ."
"ಓ, ಯಸ್ ! ಆದರೆ ಅಮೂಲ್ಯ ನನಗೆ ನೀನು ಅವತ್ತು ಅರ್ಧಕ್ಕೆ ಬಿಟ್ಟು
ಹುಚ್ಚನ
ಕಥಿ ಹೇಳಬೇಕು "
"ನೀ ಅವನಿಗೆ ಹುಚ್ಚ ಅಂತ ಹೆಸರೇ ಇಟ್ಟುಬಿಟ್ಟೇನು ? ಒಳ್ಳೇದು ಹೇಳತೀನಂತ
ಹೋಗು."
'ಹುಚ್ಚನ ಕಥೆ' ಅಂದಿದ್ದಳು ಸರೋಜ. ಅವನು ಹುಚ್ಚನೇ? ಅವನು ಏನು
ಎಂತು ಎಂಬುದು ಡಾಕ್ಟರ್ ದೇಶಮುಖರಂಥವಾರಿಗೂ ಗೊತ್ತಾಗಿರಲ್ಲಿಲ . ಅವನೊಬ್ಬ
ಮಾನಸಿಕ ರೋಗಿ ಆಷ್ಟ ಅವರ ಪಾಲಿಗೆ.
-ತನ್ನ ಪಾಲಿಗೆ ?
ತನ್ನ ಪಾಲಿಗೂ ಅಷ್ಟೇ. ಏನೋ ಕುತೂಹಲವೆನಿಸಿ ಅವನ ವಿಷಯದಲ್ಲಿ ಆಸಕ್ತಿ
ಪುಟ:ನಡೆದದ್ದೇ ದಾರಿ.pdf/೧೦೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೦
ನಡೆದದ್ದೇ ದಾರಿ