ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ

ಎಂತಹ ಸ್ವಾಮಿನಿಷ್ಠರಾದ ಸಂಗಡಿಗರಿದ್ದರು ವೀರರಾಜನಿಗೆ!ಚಿಕ್ಕದಾಗಿದ್ದರೂ ಎಷ್ಟೊಂದು ಸುಸಜ್ಜಿತವಾಗಿತ್ತು ಆತನ ಸೇನೆ!
ಆದರೇನು? ಗದ್ದುಗೆಯ ಮೇಲೆ ಕಣ್ಣಿದ್ದವರು ಒಬ್ಬರೆ, ಇಬ್ಬರೆ? ದೇವಮ್ಮಾಜಿ ಗಂಡನೊಡನೆ ಶ್ರೀರಂಗಪಟ್ಟಣ್ಣಕ್ಕೆ ಓಡಿಹೋಗಿ ಆಂಗ್ಲ ರೆಸಿಡೆಂಟನ ಮುಂದೆ ಕುರ್ನೀಸು ಮಾಡಿದಳು:
"ನನ್ನ ಚಿಕ್ಕಪ್ಪನ ಮಗ ತುಂಬಾ ಕೆಟ್ಟೋನು. ಅವನನ್ನು ಸೋಲಿಸಿ ನನ್ನನ್ನೇ ರಾಣಿಯಾಗಿ ನೇಮಿಸಿ ಖಾವಂದರೇ."