ಕಿರುಕಾದಂಬರಿಗಳು/ಗಂಡಸರು
ಕರಕೊಂಡು ಹೋಗ್ಯಾನ,ಇನ್ನ ಮೂರು ತಿಂಗಳು ಬರೋದಿಲ್ಲ ಆಂತ."
"ಓ,ಹಿಂಗಾತೇನು?"-ಶಾಂತಿಗೆ ಏನು ಹೇಳಲೂ ತೋಚಲಿಲ್ಲ.
ಮುದ್ದೆಯಾಗಿದ್ದ ಜಯಶ್ರೀಯ ಕಾಲಬದಿಯಲ್ಲಿ ಬಿದ್ದ ಕಾಗದವನ್ನೆತ್ತಿನ ಬಿಡಿಸಿ ನೋಡಿದಳು ಆಕೆ.ಕೈ ಬರಹ ಪರಿಚಿತವೆನಿಸಿತು.ಹ,ಹೌದು,ಎಷ್ಟು ಪರಿಚಿತ...
"ಗುರಿ ತಲುಪಬೇಕೆನ್ನುವ ಛಲ.ಏನು ಬಂದರು ಎದುರಿಸಿಯೇನೆಂಬ ಧೈರ್ಯ,
ಹಿದಡಿತ ತತ್ವಗಲನ್ನು ಎಂದಿಗೂ ಬಿಡಲಾರನೆಂಬ ವಿಶ್ವಾಸ ಎಂದಿಗೂ ನನ್ನಲ್ಲಿದೆ.... ಏನು ಇರಲಿಲ್ಲ ಅನ್ನುವುದು ನಿಮ್ಮನ್ನು ಕಂಡ ಕ್ಷಣ ತಿಳಿಯಿತು...ನನ್ನ ಆದರ್ಶ,ನನ್ನ ಜೀವನ ಎಲ್ಲದರ ಕೇಂದ್ರ ಬಿಂದು ನೀವು...ನಿಮ್ಮ ಎಲ್ಲ ದುಃಖ ನನಗೆ ಕೊಡಿ, ಅಪ್ಪಿಕೊಳ್ಳುತ್ತೇನೆ.ಪ್ರತಿಯಾಗಿ ನಿಮ್ಮದೊಂದು ಕಿರುನಗೆ ಸಾಕು ನನಗೆ.... ನನಗೆನಿಸುತ್ತಿದೆ,ನಾನು ಇಷ್ಟು ದಿನ ನಿಮ್ಮನ್ನು ಹುಡುಕುತಿದ್ದೆ....ನನ್ನ ಶೋಧನೆ ಪೂರ್ಣವಾಯಿತು..."
ಎಷ್ಟು ಪರಿಚಿತ! ಜಯಶ್ರೀಯನ್ನು ಆಳುವುದಕ್ಕೆ ಬಿಟ್ಟು ಶಾಂತಿ ಎದ್ದು ಟೇಬಲ್ ಬಳಿಗೆ
ಹೋದಳು.ಪುಟ್ತ ಗುಲಾಬಿ ಬಣ್ಣದ ಕವರ್ನಲ್ಲಿ ಹಾಕಿಟಿದ್ದ "Take all,give all" ಹೊರಗೆ ತೆಗೆದಳು.ಸಣ್ಣ ಸಣ್ಣ ಚೂರುಗಳಾಗಿ ಹರಿದು ಕಿಟಕಿಯಲ್ಲಿ ಗಾಳಿಗೆ ತೂರಿದಳು.ಕಾಗದದ ಚೂರುಗಳು ದಿಕ್ಕೆಟ್ಟು ಮಹಡಿಯ ಎತ್ತರದಿಂದ ಕೆಳಗೆ ಹುಲ್ಲ ಮೇಲೆ,ಕಲ್ಲ ಮೇಲೆ,ಕೆಸರಿನಲ್ಲಿ,ಮಣ್ಣಿನಲ್ಲಿ ಬೀಳುತಿದ್ದಾಗ ಕಿಟಕಿಯ ಸರಳುಗಲನ್ನು ಬಿಗಿಯಾಗಿ ಹಿಡಿದುಕೊಂಡು ಹಾಗೆ ನಿಂತು ಕಣ್ಣು ಮುಚ್ಚಿದಳು.