ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು


    ಹಾಗೂ ಕುತೂಹಲ ಸನ್ನಿವೇಶಗಳಲ್ಲಿ.ಕತ್ತರಿ,ಚಾಕುಗಳ ಬಳಕೆಯಲ್ಲಿ 
    ನಿಷ್ಣಾತರಾಗಿದ್ದ  ಕ್ಷೌರಿಕರೇ           ಈ ವೃತ್ತಿಯ ಮೂಲ  ಪುರುಷರೆಂದರೆ
    ಅಚ್ಚರಿಯಾಗಬಹುದು. ಬಾವು,ಕುರುಗಳನ್ನು ಕತ್ತರಿಸಿ ಕೀವನ್ನು ಹೊರಬಿಡುವಷ್ಟು
    ಧೈರ್ಯ ಆಗ ಅವರಿಲ್ಲದೆ ಬೇರಾರಿಗೂ ಇದ್ದಂತಿರಲಿಲ್ಲ . ಮುಂದೆ ಅವರು 
    "  ಕ್ಷೌರಿಕ           ಶಸ್ತ್ರವೈದ್ಯರೆಂದೇ" ಹೆಸರಾದರು!ರಕ್ತ , ಕೀವುಗಳಂಥ
    ಗಲೀಜು ಮುಟ್ಟಬೇಕಾಗುತ್ತಿದ್ದ ಈ ವೈದ್ಯರಿಗೆ ಇತರ ಕಾಯಿಲೆಗಳನ್ನು ಆರೈಕೆ
    ಮಾಡುವ ವೈದ್ಯರಿಗಿದ್ದ ಶ್ರೇಷ್ಠ ಸ್ಥಾನ - ಮಾನಗಳಿರಲಿಲ್ಲ. ಆದರೆ ವೈದ್ಯಕೀಯದ 
    ಇತಿಹಾಸದಲ್ಲೇ ಚಿರಸ್ಥಾಯಿಯಾದ ಹೆಸರಿರುವ ಅಂಬ್ರೋಯಿಸ್ ಪಾರೆ(೧೫೧೦-೯೦) 
    ಅಂಥ  ಕ್ಶೌರಿಕನೊಬ್ಬನ ಪುತ್ರನೆಂಬುದನ್ನು ಮರೆಯಲಾಗದು. ಕ್ರಿ.ಶ. ೧೩೦೦ರ 
    ಸಮಯಕ್ಕೆ ಕ್ಷೌರಿಕ ಶಸ್ತ್ರ ವೈದ್ಯರ ಸಂಘವೂಂದು ಅಸ್ತಿತ್ವಕ್ಕೆ ಬಂದಿತ್ತು. ವ್ರತ್ತಿ
    ಕಲಿಯುವ ಅಭಿಲಾಷೆ ಇರುವವರಿಗೆ ಈ ಸಂಘದವರು ತರಬೇತಿ ನೀಡುತ್ತಿದ್ದರು.
    ಮುಂದೆ ಕೆಲವರು ಕ್ಷೌರಿಕ ವೃತ್ತಿಯನ್ನು ತ್ಯಜಿಸಿದರು. ಶಸ್ತ್ರ ಚಿಕಿತ್ಸೆ ನಡೆಸುವವರೇ
    ಪ್ರತ್ಯೇಕ ಸಂಘಟನೆಯನ್ನು ಮಾಡಿಕೊಂಡರು(೧೭೪೫).ಇನ್ನರ್ಧ ಶತಮಾನದಲ್ಲಿ
    ಇಂಗ್ಲೆಂಡಿನ ರಾಜಮಾನ್ಯತೆ ಪದೆದ ಶಸ್ತ್ರ ವೈದ್ಯರ ರಾಯಲ್ ಕಾಲೇಜು(೧೮೦೦)
    ಅಸ್ತಿತ್ವಕ್ಕೆ ಬಂದಿತು.ಅಂದಿನಿಂದ ಶಸ್ತ್ರ ಚಿಕಿತ್ಸೆಯಲ್ಲಿ ತೊಡಗುವವರಿಗೆ ಕ್ರಮಬದ್ದ
    ಶಿಕ್ಷಣ ಮತ್ತು ತರಬೇತಿಯ ಹೊಸ ಯುಗ ಆರಂಭವಾಯಿತು. ಪ್ರಸ್ತುತ ಸಮಯದಲ್ಲಿ
    ವೈದ್ಯಕೀಯ ಕ್ಷೇತ್ರದ ಮಿಕ್ಕೆಲ್ಲಾ ವಿಭಾಗಗಳಿಗಿಂತ ಶಸ್ತ್ರಚಿಕಿತ್ಸಾ ಪದ್ದತಿ ಉಚ್ಫ್ರಾಯ
    ಸ್ಥಿತಿಯಲ್ಲಿದೆ. ಈ ಮಟ್ಟವನ್ನು ತಲುಪುವಲ್ಲಿ ಅದು ಎದುರಿಸಿದ ಕೆಲವು ಎರಡು 
    ತೊಡರುಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
          ಮಾನವ ದೇಹದ ಅಂಗರಚನೆಯ ವಿವರಗಳ ಪರಿ‍‍‌ ನವಿಲ್ಲದೆ
   ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲು ಸಾದ್ಯವಾಗುವುದಿಲ್ಲ. ಶವಗಳನ್ನು ಕತ್ತರಿಸಿ,ಪರೀಕ್ಷೆ
   ಮಾಡಿ ಅಂತಹ   ನವನ್ನು ಪಡೆದುಕೊಳ್ಳಬೇಕಾಗುತ್ತದೆ. ಗತಿಸಿದವರ
   ಕಳೇಬರವನ್ನು ಗೌರವ ಮತ್ತು ಪೂಜ್ಯ ಭಾವನೆಯಿಂದ ನೋಡುವ ಸಂಪ್ರದಯ
   ಎಲ್ಲಾ ಜನಾಂಗಗಳಲ್ಲೂ ಹಿಂದಿನಿಂದಲೂ ಇದೆ. ಈಗಲೂ ಕಳೇಬರವನ್ನು
  ಅವಮಾನಗೊಳಿಸುವುದಾಗಲೀ,ಯಾವುದೇ ರೀತಿಯಿಂದ ವಿಕಾರ
  ಗೊಳಿಸುವುದಾಗಲೀ ನಿಷಿದ್ಧ.  ನ ಸಂಪಾದನೆಗಾಗಿ ಶವವೊಂದನ್ನು ಕತ್ತರಿಸಿ
  ಪರೀಕ್ಷೆ ನಡೆಸಿದ ವ್ಯಕ್ತಿಯೊಬ್ಬನನ್ನು ರೊಚ್ಚಿಗೆದ್ದ ಜನ ಸುಟ್ಟು ಹಾಕಿದ್ದರೆಂದರೆ,
  ಮಾನವನ ಅಂಗರಚನೆಯನ್ನರಿಯಲು ಎಷ್ಟು ಕಷ್ಟವಾಗಿತ್ತೆಂಬುದರ
   ಅರಿವಾಗಬಹುದು. ಯುರೋಪಿನಲ್ಲಿ ಹದಿನಾರನೆಯ ಶತಮಾನದಲ್ಲಿ ಜರುಗಿದ