ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೯೨
ನಡೆದದ್ದೇ ದಾರಿ

-ಒಮ್ಮೆಲೇ ಏಕವಚನದಲ್ಲಿ ಬದಲಾದ ಸಂಬೋಧನೆ, ಆ ಧ್ವನಿಯಲ್ಲಡಗಿದ
ಏಟು ತಿಂದು ಗಾಯಗೊಂಡಂತಹ ಉತ್ಕಂಠೆ - ಆತನನ್ನು ತಡೆದು ನಿಲ್ಲಿಸಿದವು. ಆತ
ನಿಂತು ತಿರುಗಿ ನೋಡಿದ.
ಶೋಭಾ ನಿಂತಲ್ಲೇ ನಿಂತು ಆತನೆಡೆ ಕಾತರದಿಂದ ನೋಡುತ್ತಿದ್ದಳು. ಅವಳ
ಕಣ್ಣು ತುಂಬಿ ಬಂದಿದ್ದವು. ದ್ವನಿ, ಅವಳ ದೇಹವೂ ಸಹ, ನೋವಿನಿಂದ ಕಂಪಿಸುತ್ತಿತ್ತು.
ಈ ಆಘಾತವನ್ನು ತಾಳಲಾರೆನೆಂಬಂತೆ ಆಧಾರಕ್ಕಾಗಿ ಪಕ್ಕದಲ್ಲಿದ್ದ ತೆಂಗಿನ ಮರವನ್ನು
ಆಕೆ ಬಲಗೈ ಯಿಂದ ಆಧರಿಸಿ ಹಿಡಿದಿದ್ದಳು. ಅವಳ ಮೊಂಡಾದ ಎಡಗೈ ನಿರ್ಜೀವವಾಗಿ
ಜೋತು ಬಿದ್ದಿತ್ತು. ಒಂದೇ ನಿಮಿಷ ಆತ ಆಕೆಯನ್ನು ನೊಡುತ್ತಲಿದ್ದ. ಎರಡನೇ
ನಿಮಿಷದಲ್ಲಿ ಆತ ಆಕೆಯ ಕಡೆ ಒಡಿ ಬಂದು ಆಕೆಯ ಭುಜಗಳ ಸುತ್ತ ಕೈ ಹಾಕಿ
ಆಕೆಯನ್ನು ತನ್ನ ಎದೆಗೆ ಗಟ್ಟಿಯಾಗಿ ಒತ್ತಿಕೊಂಡು ಬಡಬಡುಸಿದ: "ನಾನು ನಿನ್ನನ್ನು
ಪ್ರೀತಿಸುತ್ತೇನೆ ಶೋಭಾ, ಬಹಳ-ಬಹಳ-ಬಹಳ ಪ್ರೀತಿಸುತ್ತೇನೆ. ನಿನ್ನ ಬಿಟ್ಟು
ಹೋಗುವುದಿಲ್ಲ. ನನ್ನನ್ನು ನಂಬು ಶೋಭಾ.."
ತೆಂಗಿನ ಮರ ಆಧರಿಸಿ ಹಿಡಿದಿದ್ದ ಶೋಭಾ ಅದನ್ನು ಬಿಟ್ಟು ಸತೀಶನ
ಎದೆಯಲ್ಲಿ ತಲೆಯಿಟ್ಟು ಆತನ ಮಾತುಗಳನ್ನು ಕೇಳುತ್ತಾ ಕಣ್ಣೀರು ಹರಿಸುತ್ತಾ
ಆನಂದಪಟ್ಟಳು.
(ಆಂಗ್ಲ ಸಾಹಿತಿ ಎಚ್.ಇ.ಬೇಟ್ಸ್ ನ ವಿಚಾರಗಳಿಂದ ಪ್ರೇರಿತ)

(೧೯೮೮)