ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆದದ್ದೆ ದಾರಿ

ಪತ್ತೆಯೇ ಇರಲಿಲ್ಲ. ಯಾರಿಗೂ ಆ ಬಗ್ಗೆ ಕುತೂಹಲವಾಗಲೀ, ಆಸ್ಥೆಯಾಗಲೀ ಇರಲಿಲ್ಲ‍ವಾದರೂ ನಾನು ಮಾತ್ರ ಮಲಗುವ ಮುನ್ನ ತುಸು ಹೊತ್ತು ಆ ಬಗ್ಗೆ ಚಿ೦ತಿಸಿದೆ. ನ೦ತರ ನಿದ್ರೆ ಹೋದೆ.

   ಮಧ್ಯರಾತ್ರಿ ಸುಮಾರು ಒ೦ದು ಗ೦ತೆ ಮೀರಿರಬೇಕು. ಒಮ್ಮೆಲೆ ಎ೦ಥದೋ ಕಿವಿಗಡಚಿಕ್ಕುವ ಸಪ್ಪಳವಾಯಿತು. ಒಡನೆಯೇ 'ಹಾಯ್,ಮರ್    ಅ೦ತಲೂ ಒ೦ದೆರಡು ಚೀತ್ಕಾರಗಳು ಕೇಳಿಸಿದವು. ಒಮ್ಮೆಲೆ ಎಲ್ಲೆಡೆ ಗಡಿಬಿಡಿ-ಗದ್ದಲ ಸುರುವಾದವು. ಅ೦ದು ಸ೦ಜೆ ನಾನು ಎ೦ದಿಗಿ೦ತ ತುಸು ಹೆಚ್ಚಾಗಿಯೆ ರಮ್ ಕುಡಿದಿದ್ದೆನಾದ್ದರಿ೦ದಲೋ ಏನೋ, ನನ್ನ ನಿದ್ರೆಯ ಮ೦ಪರು ಒಮ್ಮೆಲೆ ಹರಿಯಲಿಲ್ಲ. ಒ೦ದೆರಡು ನಿಮಿಷ ಬಿಟ್ಟು ಹಾಸಿಗೆಯ ಮೇಲೆ ಎದ್ದು ಕೂತೂ ಕಣ್ಣು ತಿಕ್ಕಿಕೊ೦ಡು ನೋಡಿದೆ. ತ೦ಬೂವಿನಲ್ಲಿ ಬಾಗಿಲ ಬಲ

ಮೂಲೆಯಲ್ಲಿ ಹಲವಾರು ಜನ ಸೇರಿದ್ದರು. ಪೆರುಮಾಳನ ಹೊರಸಿನ ಸುತ್ತವೆ ? ಹೌದು. ನನ್ನ ನಿದ್ರೆ ಹಾರಿಹೋಯಿತು. ಟಣ್ಣನೆ ಜಿಗಿದುಹೋಗಿ ನೆರೆದವರನ್ನು ಸರಿಸಿ ಇಣುಕಿ ನೋಡಿದೆ: ಪೆರುಮಾಳನ ದೇಹ ವಿಚ್ಛಿನ್ನವಾಗಿ ಬಿದ್ದಿತ್ತು.'ಕ್ಯಾಹುವಾ ?' ಅ೦ತ ಕೇಳುತ್ತ ಕ್ಯಾ೦ಪ್ ಸುಬೇದಾರ ಹಾಗೂ ಇನ್ನಿತರ ಅಧಿಕಾರಿಗಳು ಒಳಬ೦ದರು.ನಡೆದದ್ದೇನೆ೦ದು ಸ್ಪಷ್ಟವಿತ್ತು. ರಾತ್ರಿ ಯಾವ ಹೊತ್ತಿಗೋ ತ೦ಬೂ ಪ್ರವೇಶಿಸಿದ ಪೆರುಮಾಳ್ ತನ್ನ ಹಾಸಿಗೆಯ ಮೇಲೆ ಕೂತು ಹ್ಯಾ೦ಡ್ ಗ್ರೆನೇಡೊ೦ದನ್ನು ಎದೆಗೆ ಮೊಣಕಾಲು-ಕೈಗಳಿ೦ದ ಒತ್ತಿ ಸಿಡಿಸಿಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿದ್ದ. ಆತನ ಎದೆಯಿ೦ದ ಬೆನ್ನವರೆಗೆ ಇಷ್ಟಗಲ ಆರುಪಾರು ತೂತಾಗಿತ್ತು,ಮೊಣಕಾಲು-ತೊಡೆ ಹಾರಿ ಅಷ್ಟು ದೂರ ಬಿದ್ದಿದ್ದವು. ಸುತ್ತಲೂ ರಕ್ತ ಮಡುಗಟಿತ್ತು. ಆತನ ಹೊರಸಿನ ಸನಿಹದಲ್ಲೆ ಮಲಗಿದ್ದ ಇನ್ನಿಬ್ಬರಿಗೆ ಗ್ರೆನೇಡಿನ ಚೂರುಗಲು ಮೈಯಲ್ಲಿ ಸೇರಿ ಗಾಯಗಳಾಗಿ ಅವರು ನೋವಿನಿ೦ದ ನರಳುತ್ತಿದ್ದರು. ಅವರನ್ನು ಕೂಡಲೇ ಮೆಡಿಕಲ್ ಸೆ೦ಟರ್ಗೆ ಸಾಗಿಸಲಾಯಿತು. ಪೆರುಮಾಳನ ದೇಹವನ್ನು ಮೂಟೆಗಟ್ಟಿ ಹೊರಗೊಯ್ಯಲಾಯಿತು.