ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರಾಕರಣೆ

ಹೌದೆ? ಇದು ನಿಜವೆ? ಆರ್ಯಪುತ್ರನು ನಿಜವಾಗಿಯೂ ನಾನಿದ್ದಲ್ಲಿಗೆ ಬಂದಿರುವನೆ? ನನ್ನನ್ನು ಕಾಣಲೆಂದು, ತನ್ನೊಂದಿಗೆ ಕರೆದೊಯ್ಯಲೆಂದು ಬಂದಿರುವನೆ? ಬಂದಿರುವವನು ನಿಜವಾಗಿಯೂ ಮಹಾರಾಜ ದುಷ್ಯಂತನೆ? ಅಥವಾ- -ಅಥವಾ ಹಲವು ವರ್ಷಗಳಿಂದ ರಾತ್ರಿ-ಹಗಲೆನ್ನದೆ ಅವಮಾನದ ಅಗ್ನಿಯಲ್ಲಿ ಬೇಯುತ್ತಿರುವ, ನಿರೀಕ್ಷೆಯ ನೋವಿನಲ್ಲಿ ನಲುಗುತ್ತಿರುವ, ತನ್ನದೇ ತಪ್ತ ಮನಸ್ಸಿನ ಹಳವಂಡವೇ ಇದು?- ಇದ್ದರೂ ಇದ್ದೀತು.ಅಂದು ರಾಜಸಭೆಯಲ್ಲಿ ಎಲ್ಲರೆದುರು ದುಷ್ಯಂತನಿಂದ ತಿರಸ್ಕೃತಳಾಗಿ ಹೊರಟು ಬಂದಂದಿನಿಂದ ಇಲ್ಲಿಯ ವರೆಗೆ ತಾನು ಅನುಭವಿಸಿದ ಯಾತನೆಗೆ ಎಣೆಯುಂಟೆ? ಅನೇಕ ಸಲ