ನಡೆದದ್ದೇ ದಾರಿ
ಲಕ್ಷ್ಮಿ ಪ್ರತಿಸಲ ಹಾಗನ್ನುತ್ತಾಳೆ. ಪ್ರತಿಸಲ ಅದನ್ನು ಕೇಳಿ ಹಮೀದಾಬಾನು ತಲೆತಗ್ಗಿಸಿ ನಿಲ್ಲುತಾಳೆ. ಆಕೆಯ ಮುಖದಲ್ಲಿ ನೋವಿನ ಗೆರೆಗಳು ಮೂಡುತ್ತವೆ. ಯಾರು ಏನೇ ಅಂದರೂ ಈ ಪಾಪದ ಹೆಂಗಸಿಗೆ ಆ ನೀಚ ಗಂಡನನ್ನು ಮಾಡುವುದು ಶಕ್ಯವಿಲ್ಲವೆಂದು ಇತ್ತೀಚಿಗೆ ಲಕ್ಷ್ಮಿಗೂ ಚೆನ್ನಾಗಿ ಗೊತ್ತಾಗಿದೆ .ಆದರೂ ಆಕೆ ಮತ್ತೆ ಹಮೀದಾಬಾನು ಜೋಲು ಮುಖ ಹಾಕಿಕೊಂಡು ಲಕ್ಷ್ಮಿಯ ಅಮ್ಮನ ಹಳೆಯ ಸಿಇರೆಯನ್ನೋ ,ಮಕ್ಕಳ ಹಳೆಯ ಬಟ್ಟೆಯನ್ನೋ ,ಲಕ್ಷ್ಮಿಯ ಅಜ್ಜಿ ಬಸಿರಿಯರಿಗೆ ಮಾಡಿ ಕೊಡುವ ಕಷಾಯವನ್ನೋ ಕೇಳಲೆಂದು ಬಂದಾಗ ಲಕ್ಷ್ಮಿ ಅಂದೇ ಅನ್ನುತ್ತಾಳೆ,-'ನೀನ್ಯಾಕೆ ಆತನನ್ನು ಒದ್ದು ಕಲಿಸುವುದಿಲ್ಲ ಹಮೀದಾ ?' - ಹಮೀದಾ ಸುಮ್ಮನೆ ತಲೆತಗ್ಗಿಸುತ್ತಾಳೆ . ಆಕೆಯ ಮುಖದಲ್ಲಿನ ನೋವಿನ ಗೆರೆಗಳು ಆಳವಾಗುತ್ತವೆ .
***
ಲಕ್ಶ್ಮಿಗೆ ಎಮ್ .ಕಾಮ್.ಪರೀಕ್ಷೆಯಲ್ಲಿ ಫರ್ಸ್ಟ್ಕ್ಲಾಸ್ ಬಂಧ ಕೆಲವೇ ದಿನಗಳಲ್ಲಿ ಮುಂಬಯಿಯ ಸ್ಟೇಟ್ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಪ್ರೊಬೆಷನರಿ ಆಫೀಸರ್ ಅಂತ ಕೆಲಸ ಸಿಕ್ಕಿತು . ಅಷ್ಟು ದೂರ ಮಗಳಲನ್ನು ಕಳುಹಿಸಲು ಆಕೆಯ ಅಮ್ಮನಿಗೆ ಇಷ್ಟವಿರಲಿಲ್ಲ . ಆದರೆ ಹೇಗೂ ಅಲ್ಲಿ ಚಿಕ್ಕಪ್ಪನ ಮನೆಯಿದೆ , ಹೋಗುತ್ತೇನೆ , ಈಗಿನ ದಿನಗಳಲ್ಲಿ ಸಿಕ್ಕ ಒಳ್ಳೆಯ ಕೆಲಸ ಬಿಡಬಾರದು -ಅಂದಳು ಲಕ್ಷ್ಮಿ . ಅಪ್ಪ ಅನುಮೋದಿಸಿದರು . ಬೆಳೆದ ಮಗಳನ್ನು ಮಾಡುವೆ ಮಾಡದೇ ಬೇರೆ ಊರಿಗೆ ಕಳಿಸುವುದು ಚಂದವಲ್ಲ ಅಂತ ಅಮ್ಮ ಗೊಣಗಿದರು . ಅವಳ ನಶೀಬ ಚೆನ್ನಾಗಿದ್ದರೆ ಅಲ್ಲೇ ಒಳ್ಳೆಯ ಗಂಡು ಸಿಕ್ಕೀತು ಅಂತ ಅಪ್ಪ . ನಾಮಧಾನ ಪಡಿಸಿದರು .ಅದು ಆದದ್ದು ಹಾಗೆಯೆ . ಬ್ಯಾಂಕಿನ ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ಲಕ್ಷ್ಮಿಗೆ ಆಕೆಯ ಸಹೋದ್ಯೋಯೋಗಿಯೆ ಆಗಿದ್ದ ಲಕ್ಷ್ಮಿಯ ಗಂಡನನ್ನು ನೋಡಿ ನೆಟಿಕೆ ಮುರಿದು ಇಮಾಮ್ ಬೀ 'ಅಲ್ಲ ನಿನ್ನನ್ನ ಸುಖವಾಗಿಡ್ಲಿ ಬೇಟಿ' ಅಂದಳು . ಆತ್ಮವಿಶ್ವಾಸ ತುಂಬಿದ ದ್ವನಿಯಲ್ಲಿ ಲಕ್ಷ್ಮಿ ಅಂದಿದ್ದಳು . 'ನಮ್ಮ ಸುಖ ನಮ್ಮ ಕೈಯಾಗಿರ್ತದ ಇಮಾಮಜ್ಜೀ,ನಮ್ಮ ತಪ್ಪಿನಿಂದ -ಮೂರ್ಖತನದಿಂದ ನಮ್ಮ ಕಲಮಲ್ಯಾ ನಾವೇ ಕಲ್ಲು ಹಾಕ್ಕೊಂಡು ಅಲ್ಲಾನ ಬೈದರೆ ಅಲ್ಲ ಎನ್ಮಾಡಿಯಾನು ?'ಆ ಮಾತಿನ ಒಳಗಿನ ಅರ್ಥ ಸೂಕ್ಷಮತಿಯಾದ ಮುದುಕಿಗೆ ತಿಳಿದಿತ್ತು . ಎಂದಿನಂತೆ ಆಕೆ ಮೊಮ್ಮಗಳನ್ನು ಅಸಹಾಯಕತೆ -ದುಃಖದಿಂದ ಟೀಕಿಸಿದಳು :'ಹಿಮೀದಾಗೆ ಎಷ್ಟು ಹೇಳಿದರು ಆ