ಮು೦ದಿನ ವರ್ಷ,ಇಲ್ಲ೦ನದ್ರ ಅದರ ಮು೦ನದಿನ ವರ್ಷ, ಮತ್ತ ಬರತಲಳ೦ತ ಕರಿಯ,
ನಮ್ಮಪ್ಪಗ ಹೆಳ್ರಿ ಅ೦ದ್ಳು.ವಿಲಾಯ್ತೀ ಕಾರು ತಗೊ೦ಡೂ ಜುಮ್ ಅ೦ತ ಇಲ್ಲೇ
ತಿಮ್ಮಾಪುರದಕ್ಕೆ ನಿನ್ನ ಹಟ್ಟಿ ಬಾಗಿಲಿಗೇ ಬರತಾಳು,ನೋಡೀವ೦ಯತಿ.'
'ಹೌದರಯ್ಯ ಯಪ್ಪ? ನಮ್ಮಪ್ಪಗ ಹೇಳ್ರಿ ಅಂತ ನನ್ಮಗಳು ಹೆಳಿದರ್ಯ್
ಯಪ್ಪಾ? ಆಕೀ ನನ್ನ ಮರತಿಲ್ಲ ಅಂದಂಗಾತು.ನನ್ನ ಲಚ್ಚುಮಿ ಕರೆವಂದ್ರೂ
ಕಾರಗಾದಿ ತಗೊಂಡು ನನ್ಮ್ನೀಗ ಬರತಾಳ ಅಂದಾಂಗಾತು!'ಅಂತ ಖುಷಿಪಟ್ಟ.
***
ಇತ್ತೀಚಿನ ದಿನಗಳಲ್ಲಿ ಕರ್ಯ ತೀರ ಮುಪ್ಪಾಗಿದ್ದಾನೆ.ಕಣ್ಣು ಮಂಜಾಗಿ
ಬೆನ್ನುಬಾಗಿ ಕೈಕಾಲಿನಲ್ಲಿ ಶಕ್ತಿ ಸೋರಿ ಹೋಗಿದೆ.ಇಡೀ ಹಗಲನ್ನು ರಾತ್ರಿಯ
ಬಹುಪಾಲನ್ನೂ ಆತ ಊರ ಅಗಸಿಯ ಬಳಿಯ ಕರೆವ್ವನ ಗುಡಿಯ
ಮುಂಬಭಾಗದಲ್ಲಿರುವ ಬೇವಿನಮರದ ಕಟ್ಟೆಯ ಮೇಎ ಕಳಎಯುತ್ತಾನೆ.ಯಾರಾದರು
ಏನಾದರು ಕೊಟ್ಟರೆ ತಿನ್ನುತ್ತಾನೆ;ಇಲ್ಲದಿದ್ದರೆ ಇಲ್ಲ.ಯಾರಾದರು
ಮಾತಾಡಿಸಿದರೆ ಹೆಚ್ಚಾಗಿ ಸುಮ್ಮನೇ ಇರುತ್ತಾನೆ;ಒಮ್ಮೊಮ್ಮೆ ಏನೋ
ಉತ್ತರಿಸುತ್ತಾನೆ. ರಣಗುಡುವ ಬಿಸಿಲಾಗಲೀ,ಕೊರೆಯುವ ಚಳಿಯಾಗಲೀ,ಧೋಧೋ
ಸುರಿಯುವ ಮಳೆಯಾಗಲೀ ಆತನ ಮೇಲೆ ಪರಿಣಾಮ ಮಾಡುವುದಿಲ್ಲ.ಶೂನ್ಯದತ್ತ
ನೋಡುತ್ತ ಸದಾ ಸುಮ್ಮನೇ ಕೂತಿರುತ್ತಾನೆ.ಆದರೆ ಎಂದಾದರೋಮ್ಮೆ ಊರಿಗೆ
ಹೊಸದಾಗಿ ಮಾಡಿಸಿದ ಡಾಂಬರು ರಸ್ತೆಗುಂಟ ಯಾವುದಾದರೂ ಕಾರು ಬಂದರೆ ಆತ
ಒಡಿಓಡಿ ಅಗಸಿಗೆ ಬೌತ್ತಾನೆ.ಆಸೆಯಿಂದ ಹೆಣಕಿ ನೋದುತ್ತಾನೆ.ಯಾರಾದರು
'ಕರಿಯಜ್ಜಾ,ನಿನ್ಮಗಳು ಬಂದಿಲ್ಲಪೋ,ಮುಂದಿನ ಕಾರಿನ್ಯಾಗ ಬರ್ತಾಳಂತ'-ಅಂದರೆ
ಇರಬಹುದು ಅಂದುಕೊಂಡು ಮತ್ತೆ ತಿರುಗಿ ಬೇವಿನ ಕಟ್ಟೆಗೆ ಹೋಗುತ್ತಾನೆ....ಮತ್ತೆ
ಮುಂದಿನ ಕಾರು ಯಾವಾಗ ಬಂದೀತ್ತೆಂದು ಕಾಯುತ್ತಾನೆ...ಮತ್ತೆ....