ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಲಕ್ಷ್ಮೀಶ 896 ನಾಚಿ ಬೆಳೋದಳೊ ರಾತ್ರಿವಧು ಚೆಲ್ಲಿದನೋ | ಭೂಚಕ್ರಕಂಗಜಂ ಬೇಳುವೆಯ ಬದಿಯಂ | ವಾಚಿಸುವೊಡರಿದೆನಲ್ ಪಸರಿಸಿತು ಚಂದ್ರಕಿರಣಂಗಳೆಲ್ಲಾ ದೆಸೆಯೊಳು | ಸಮುದ್ರ | ಚಿಪ್ಲೊಡೆದು ಸಿಡಿನ ಮುತ್ತುಗಳಲ್ಲದಿವು ಮಗು | ಎಪ್ಪರಿಸುವಳರ್ಮೀ ಬಿದರ್ವ ಶಿಕರಮಲ್ಲ | ಮೊಪ್ಪುವ ಸುಲಲಿತಶಂಖದ ಸರಿಗಳಲ್ಲದಿವು ಬೆಳೊರೆಗಳೊಟ್ಟಿಲಲ್ಲಿ || ತಪ್ಪದೊಳಗಣ ರನ್ನ ವೆಳಗಲ್ಲದಿವು ತೊಡ | ರ್ದಿಷ್ಟ ಕೆಂಬವಳಮಲ್ಲಿವು ಪಯೋನಿಧಿಯ ಕೆನೆ | ಯೊಪ್ಪಮಲ್ಲದೆ ನೀರ್ವೊಗೆಯಲಿವ ಮೇಘಂಗಳಲ್ಲೆನಿಸಿದುವು ಕಡಲೊಳು || ಸಂಜೆ ರಂಜಿಸುವ ಪಶ್ಚಿಮಾಚಲಕಿರಾತಂ ತೊಟ್ಟ | ಗುಂಜಾಭರಣಮೊ ಮೇಣ್ ಗಗನಾಂಬುಧಿಯ ತಡಿಯ | ಮಂಜುವಿದ್ರುಮಲತೆಯೊ ವೇಣಪರದಿಗೃಧುವಿನಂಗಕುಂಕುಮಲೇಪವೋ | ಅಂಜನೇಭದ ಹಿಂದುರಿ ಶಿವನ ಕೇಶಗಳ | ಕೆಂಜಡೆಯೊ ವಿಷ್ಣು ಪದಸಂಕರುಹದರುಣತೆಯೊ | ಸಂಜೆವೆಣ್ಣುಟ್ಟ ರಕ್ತಾಂಬರವೊ ಸೇವನಲ್ಲಾ ಬೈಗುಕೆಂಸೆಸೆದುದು | ಸುಧನ್ವನ ಹೆಂಡತಿ ಪ್ರಭಾವತಿ ವ.ರಿಯ ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ | ನುಡಿಯ ಬಾಯ್ದೆ ವಯ ಹೊಳೆಹೊಳೆವ ದಶನದ ಮಿಸುವ | ಕಡೆಗಣ್ಣ ತೊಳಗುವ ನಖಾವಳಿಯ ಧಳಧಳಿಪ ಕರಮಾಲೆಯ ಮುತ್ತಿನ | ತೊಡವುಗಳ ಘನಸಾರದನುಲೇಪನದ ಸಣ್ಣ || ಮಡಿದುಕೊಂದ ಬೆಳೊಗ ಕೋಮಲಾಂಗದೊಳ್ | ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿವೊಲವಳೆಸೆದಳು || ಧರ್ಮರಾಜನ ಕೀರ್ತಿ ನಾಗೇಂದ್ರನಂ ಬಿಡದೆ ತಲೆವಾಗಿ 4.ತಮರ | ನಾಗೇಂದ್ರನಂ ಬುದ್ಧಿ ದೊಳಿಸಿತ್ತು ಪುರಮರ್ದ |