ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೨
ಕರ್ನಾಟಕ ಗತವೈಭವ

ಪ್ರತಿಕ್ಷಣಕ್ಕೆ ಬೆಳೆಯುತ್ತ ಹೋಗುತ್ತವೆ. ಈ ದೇವಾಲಯದಲ್ಲಿ ಒಳಗಡೆ ಮೇಲ್ಬದಿಯಲ್ಲಿ ಅಲ್ಲಲ್ಲಿಗೆ ಸುಂದರವಾದ ಬಣ್ಣವು ಇಂದಿಗೂ ಅಚ್ಚಳಿಯದೆ ಉಳಿದಿರುತ್ತದೆ!ಈ ಗುಡಿಯು ಹುಟ್ಟಿ ಈಗ ಸುಮಾರು ೧೨೦೦ ವರ್ಷಗಳಾದುವು. ಎಂದ ಮೇಲೆ ಅಷ್ಟು ಹಿಂದಿನ ಬಣ್ಣವನ್ನು ನೋಡಿ ಕರ್ನಾಟಕರಿಗೆ ಆನಂದವಾಗಲಿಕ್ಕಿಲ್ಲವೋ ? ಮನೆಯಲ್ಲಿ ಕುಳಿತು ನೀವು ಎಷ್ಟೇ ಅದ್ಭುತ ದೇವಾಲಯವನ್ನು ಹುಟ್ಟಿಸಬೇಕೆಂದು ಮನಸ್ಸಿನಲ್ಲಿ ಮಂಡಿಗೆ ಮಾಡಿದರೂ, ಇಂಥ ಅದ್ಭುತ ಮಂಡಿಗೆಯನ್ನು ಮಾಡಲಾರಿರಿ. ಒಬ್ಬ ಗಣಿತಜ್ಞನು ಈ ಕೈಲಾಸ ಮತ್ತು ಅದರ ಹತ್ತರಿರುವ ಗುಡಿಗಳನ್ನು ನೋಡಿ ಲೆಕ್ಕ ಹಾಕಿ, ಈ ಗುಡಿಗಳನ್ನು ಕೊರೆಯಲಿಕ್ಕೆ ೪೮ ಲಕ್ಷ ಜನರು ಒಂದೇ ಸಮನಾಗಿ ೨೧ ವರುಷಗಳ ವರೆಗೆ ಕೆಲಸ ಮಾಡಬೇಕಾದೀತು ಎಂದೆನ್ನುತ್ತಾನೆ! ಇರಲಿ.
ಕೃಷ್ಣರಾಜನು ಸ್ವತಃ ತಾನೇ ಅಲ್ಲಿಯ ಲಿಂಗವನ್ನು ಮಾಣಿಕ-ರತ್ನ ಮುಂತಾದ ಅಸಂಖ್ಯಾತವಾದ ಆಭರಣಗಳಿಂದ ಅಲಂಕರಿಸಿದನಂತೆ, ಸಾರಾಂಶ:- ಈ ಗುಡಿಯ ವರ್ಣನೆಯನ್ನು ಬಾಯಿಯಿಂದ ಹೇಳುವುದು ಅಥವಾ ಲೆಕ್ಕಣಿಕೆಯಿಂದ ವರ್ಣಿಸುವುದು ಶಕ್ಯವಿಲ್ಲ, ಅದನ್ನು ಕಣ್ಣಿನಿಂದ ನೋಡಬೇಕು. ಎಷ್ಟು ನೋಡಿದರೂ ಕಣ್ಣುಗಳಿಗೆ ತೃಪ್ತಿಯಾಗುವುದಿಲ್ಲ ! ಇದೇ ಗುಡಿಯನ್ನು ನೋಡಲಿಕ್ಕೆ ಹೋದಾಗ, ಈ ಗುಡಿಗಳ ಸಾಲಿನಲ್ಲಿರುವ ಒಂದು ಗುಡಿಯಲ್ಲಿ ನನ್ನ ಕಣ್ಣಿಗೆ ಕನ್ನಡ ಶಿಲಾಲೇಖವೊಂದು ದೃಷ್ಟಿಗೆ ಬಿದ್ದಿರುವ ಸಂಗತಿಯನ್ನು ಹಿಂದ ಉಲ್ಲೇಖಿಸಿದ್ದೇವೆ. ಕನ್ನಡಿಗರೇ, ಈ ಕೈಲಾಸವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಾರದೇ?
ದೇ ಮೇರೆಗೆ ಅಜ೦ತೆಯಲ್ಲಿಯ ಗುಡಿಗಳೂ ನೋಡತಕ್ಕವಾಗಿವೆ. ಆದರೆ ನಾವು ಇನ್ನೂ ಅವುಗಳನ್ನು ನೋಡಿಲ್ಲ. ಆದುದರಿಂದ ಆ ವಿಷಯಕ್ಕೆ ಹೆಚ್ಚಿಗೆ ಹೇಳುವುದಿಲ್ಲ. ಈ ವಿಷಯವಾಗಿ ಹೇಳಿರುವುದೇನೆಂದರೆ -

"In the architecture of the various caves is to be read a remarkably extended record of the history of the development of the art, during a period of from five to eight centuries."