ವಿಷಯಕ್ಕೆ ಹೋಗು

ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

27 ದೇಶದ ಪ್ರಭುವ, ಇವನ ಮಂತ್ರಿಗಳೂ, ಇವನ ನೃತ್ಯರೂ, ಸಲ್ವರೂ ವಿವೇಕ ಶಾಲಿಗಳಾಗಿ ಇರಬೇಕೆಂದು ಹೇಳಬಹುದು. ಈ ಪ್ರಭುವೂ, ಅವನ ನೌಕರರೂ ಕೂಡ ಪುಣ್ಯಶಾಲಿಗಳು, ಹಾಗಿಲ್ಲದಿದ್ದರೆ, ಪ್ರಜೆಗಳ ಸೌ ವೇ ತಮ್ಮ ಸೌಖ್ಯ ಬೆಂದು ಅವರು ಭಾವಿಸುತ್ತಿರಲಿಲ್ಲ, ಹಾಗೆ ಅವರು ಭಾವಿಸಿದ ಹೊರತು, ಪ್ರಜೆ ಗಳು ಸೌಖ್ಯವಾಗಿರುವುದಕ್ಕೆ ಅವಕಾಶವಾಗುತ್ತಿರಲಿಲ್ಲ. ಮಹಾತ್ಮರಾದ ಭುಗಳಿಗೆ ವಿಷಯೊ° ಪಭೋಗಗಳಿಗಿಂತ ಪ್ರಚಾರಂಜನೆಯು ದೊಡ್ಡದೆಂದು ತೋ ರುವುದು, ಅಂಥಾ ಪ್ರಭುಗಳ ದರ್ಸವು ಅಪ್ರತಿಹತವಾಗಿರುವುದು, ಆವರ ದರ್ಪಕ್ಕೆ ಭಯವು ಕಾರಣವಾಗಿರುವುದಿಲ್ಲ. ವಿಶ್ವಾಸವು ಕಾರಣವಾಗಿರುತ್ತದೆ. ಅವರ ಆಜ್ಞೆಗಳು ವೇದವಾಕ್ಕುಗಳಂತೆ ಅಂಗೀಕರಿಸಲ್ಪಡುವುವು, ಮನಃಪೂರ್ತಿ ಯಾಗಿ ವಿಶ್ವಾಸದಿಂದ ಅವರ ಆಜ್ಞೆಗಳು ನಡೆಸಲ್ಪಡುವುವು, ಅಂಧಾ ಪ್ರಭುವಿನ ರಾಜ್ಯಭಾರವು ಶಾಶ್ವತವಾಗಿರಲೆಂದು ಜನಗಳು ಅಪೇಕ್ಷಿಸುವರು. ಅವನಿಗೆ ವಿಪತ್ತು ಬಂದರೆ, ಅಂಥಾ ವಿಪತ್ತನ್ನು ತಪ್ಪಿಸುವುದಕ್ಕೆ ಜನಗಳು ಮನಃಪೂರ್ತಿಯಾ ಗಿ ತಮ್ಮ ಪ್ರಾಣಗಳನ್ನೂ ಕೂಡ ಒಪ್ಪಿಸುವುದಕ್ಕೆ ಸಿದ್ಧರಾಗುವರು. ಇಂಥಾ ಅಕೃತ್ರಿಮವಾದ ಪ್ರೀತಿಗೆ ಈ ಪ್ರಭುವು ಪಾತ್ರನಾಗಿರುತ್ತಾನೆ. ಅವನ ಮೇಲ್ಬಂ ಗ್ರಿಯು ನಿನಗೂ ಅನುಷ್ಠಿ ನಲ್ಪಡುವುದಕ್ಕೆ ಅರ್ಹವಾಗಿರುವುದು. ಎಂದು ಮೆಂಟ ರನು ಹೇಳಿದನು. ಈ ಹಿತೋಕ್ತಿಗಳನ್ನು ನಾನು ಸಾವಧಾನವಾಗಿ ಕೇಳಿದೆನು. ತಕ್ಷಣದ ಲ್ಲಿಯೇ ಸರಿಯಾದ ಪ್ರಯತ್ನವನ್ನು ಮಾಡಿದರೆ, ಈ ದೊರೆಯಂತೆ ನಾನು ಕೂಡ ಏತಕ್ಕೆ ಪ್ರಚಾರಂಜಕನಾಗಕೂಡದೆಂದು ನನಗೆ ತೋರಿತು, ಹೀಗೆ ಮಾತನಾಡು ತಾ ಹೋಗುವಾಗ್ಗೆ, ಮೆಂಫಿಸ್‌ ಪಟ್ಟಣದ ಬಳಿಗೆ ಬಂದೆವು. ಈ ಪಟ್ಟಣವು ಮಹಾ ಇಶ್ವರದಿಂದಲೂ, ಅನೇಕ ಮುಖವಾದ ಸಂಪತ್ತುಗಳಿಂದಲೂ ಚಾಜ್ವಲ್ಪ ಮಾನವಾಗಿತ್ತು, ಅಲ್ಲಿನ ಅಧಿಪತಿಯು ನಮ್ಮನ್ನು ಥೀಭಿ ಸ್ಪಟ್ಟಣಕ್ಕೆ ಕಳುಹಿ ಸಿದನು. . ಈ ದೇಶದ ದೊರೆಯಾದ ಸಸಾಟಿಸ್ಟಿಗೆ ಆದು ರಾಜಧಾನಿಯಾಗಿತ್ತು' ಈ ಪಟ್ಟಣವು ನೂರು ಕೋಟೆಬಾಗಿಲುಗಳುಳ್ಳದ್ದಾಗಿತ್ತು, ಇಷ್ಟು ದೊಡ್ಡ ಪಟ್ಟಿ ಇವು ಗ್ರೀಸ್ ದೇಶದಲ್ಲಿ ಒಂದೂ ಇರಲಿಲ್ಲ. ಈ ಪಟ್ಟಣವು ಬಹಳ ಜನಭರಿತವಾ ಗಿಯೂ, ಅತ್ಯಂತ ಶೋಭಾಯವನವಾಗಿಯೂ ಇತ್ತು. ಜಲಯಂತ್ರಗಳು ಕೃತ್ರಿಮ ವಾದ ಬುಗ್ಗಿ ಗಳಿಂದ ನೀರನ್ನು ಆಕಾಶಕ್ಕೆ ಹಾರಿಸುತ್ತಿದ್ದವು, ಎಲ್ಲೆಲ್ಲಿಯೂ ರಮ ಣೀಯವಾದ ಸರೋವರಗಳಿದ್ದವು, ಉಪವನಗಳೂ ವಿಹಾರಸ್ಥಾನಗಳೂ, ಲತಾ ಗ್ರಹಗಳೂ ಎಲ್ಲೆಲ್ಲಿಯೂ ಶೋಭಿಸುತ್ತಿದ್ದವು, ಎಲ್ಲೆಲ್ಲಿಯೂ ಮನೋಹರವಾದ ಗಾನವು ಶೋತೃಗಳಿಗೆ ಅನಂದವನ್ನುಂಟುಮಾಡುತ್ತಿದ್ದಿತು, ಎಲ್ಲಿಯೂ ಸ್ತ್ರೀ