ವಿಷಯಕ್ಕೆ ಹೋಗು

ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಮ್ಮ ತಾಯಿಯ ಆಜ್ಞೆಯನ್ನು ನೀನು ನೆರವೇರಿಸುವಂತೆ ತೋರುವುದಿಲ್ಲ, ಈ ವರುಷವು ಮುಗಿಯುವುದರೊಳಗಾಗಿ ನಿಮ್ಮ ತಂದೆಯನ್ನು ಕರೆದುಕೊಂಡು ಹೋಗುವುದು ಅಸಾಧ್ಯವಾಗುವುದು, ನಿಮ್ಮ ತಾಯಿಯು ಆತ್ಮ ಹತ್ತ್ವವನ್ನು ಮಾಡಿಕೊಳ್ಳುವಳು. ನಿನ್ನ ದೇಶವು ಪರಾಧೀನವಾಗುವುದು. ನೀನು ಅಜಿತೆ೦ ಪ್ರಿಯನೆಂದು ತಿಳಿದ ಕೂಡಲೆ, ನಿಮ್ಮ ತಂದೆಯ ಮಾತ್ರವೇ ಅಲ್ಲದೆ, ಸಜ್ಜನರೆ ಲ್ಲರೂ ನಿನ್ನನ್ನು ತಿರಸ್ಕರಿಸುವರು, ನನ್ನ ಹಡಗು ಮುಳುಗಿಹೋದದ್ದು ಒಂದು ಏಪತ್ತೆಂದು ಭಾವಿಸಲ್ಪಟ್ಟಿತ್ತು. ಈ ಕಿನ್ನರಿಯ ಬಲೆಗೆ ಸಿನು ಬಿದ್ದಿರುವುದು ಅದ ಕ್ಕಿಂತಲೂ ದೊಡ್ಡ ವಿಪತ್ತು, ಮನುಷ್ಯನಿಗೆ ಅರಿಷಡ್ವರ್ಗಗಳು ಬಲವಾದ ಶತ್ರು ಗಳೆಂದು ಹೇಳುತ್ತಾರೆ. ಇವುಗಳಲ್ಲಿ ಮೋಹವು ಅತ್ಯಂತ ಬಲವಾದ ಶತ್ರುವು. ನೀನು ಮೋಹವೆಂಬ ಪಾಶಕ್ಕೆ ಸಿಕ್ಕಿರುತ್ತೀಯೆ. ವಿ .ಕವನ್ನು ತಂದುಕೊಂಡು, ಜಿತೇಂದ್ರಿಯನಾಗಿದ್ದರೆ, ನಿನಗೆ ಇಷ್ಟಾರ್ಧಸಿದ್ಧಿಯಾಗುವುದು. ಹಾಗಿಲ್ಲದಿದ್ದರೆ, ನಿನಗೆ ಇಹಪರಗಳೆರಡೂ ತಪ್ಪು ವುವು, ಎಚ್ಚರಿಕೆಯಾಗಿರು. ಇವಳು ಎಷಕ ನ್ನಿಕೆಯೆಂದು ತಿಳಿದುಕೊ.. ಅವಳ ನಾಲಕ್ಕೆ ಬೀಳಬೆ°ಡ ” ಎಂದು ಹೇಳಿದನು. ನಿಟ್ಟ ಸುರನ್ನು ಬಿಟ್ಟು, ಟೆಲಮಾಕಸ್ಸನು ಹ॰ಳಿದ್ದೇ ನಂದರೆ :- ಎಲೈ ಗುರವಾದ ಮೆಂಟರನೆ, ಭೋಗದಲ್ಲಿ ಆಸಕ್ತನಾಗಿ, ನನ್ನ ಕರ್ತ ವ್ಯದಲ್ಲಿ ಪರಾಲ್ಕು .ನಾಗಿ, ಇವಳ ವಾಶ ಕೈ ಬೀಳದಂತೆ ನೀನೂ ಮತ್ತು ಜಗದೀ ಶ್ವರನೂ ನನ್ನನ್ನು ರಕ್ಷಿಸಬೇಕು, ಯಸಸ್ಸನ ಪುತ್ರನಾಗಿ, ಈ ಕಿನ್ನರಿಯ ಪಾಶಕ್ಕೆ ಬೀಳುವುದು ನನಗೆ ಯೋಗ್ಯವಾದುದಲ್ಲ. ನನ್ನ ಹಡಗು ಮುಳುಗಿ, ನಮಗೆ ಮಹಾ ವಿಪತ್ತು ಉಂಟಾಯಿತು. ಅದನ್ನು ತಪ್ಪಿಸಿಕೊಂಡು ಈ ದ್ವೀಪಕ್ಕೆ ಬಂದೆವು, ದೇವರು ನಮಗೆ ಪ್ರಸನ್ನನಾಗಿರುವನು. ನಾನು ಕರ್ತವ್ಯವನ್ನು ಮರ ಯುವುದಿಲ್ಲ. ನಾನು ಇವಳ ಪಾಶಕ್ಕೆ ಬಳುವಲ್ಲ. ಜಿತೇಂJಯನಾಗಿರುತ್ತೇನೆ. ಸಂದೇಹಪಡ ಬೆ೦ದ '” ಎಂದು ಹೇಳಿದನು. ಅದಕ್ಕೆ ಮೆಂಟರನು :- ( ಇಂದ್ರಿಯ ಗ್ರಾಮಗಳ ವ್ಯಾಪಾರವು ಅಪ್ರತಿಹತವಾದದ್ದು , ಸಾರಾಸಾರ ವಿಚಾರಜ್ಞರಾದ ಪಂಡಿತೋತ್ತಮರೂ ಕೂಡ ಇಂದ್ರಿಯಪರವರಾಗಿ, ಇಹಪರ ಗಳನ್ನು ಕೆಡಿಸಿಕೊಳ್ಳುವರು. ಈ ಕಿನ್ನರಿಯು ಬಹಳ ರೂಪವತಿ, ಇವಳ ಮಾತು ಗಳಲ್ಲಿ ಅಮ್ಮತವು ಧಾರಾಕಾರವಾಗಿ ಸುರಿಯುತ್ತಿರುವುದು, ಇವಳ ನೋಟವೂ, ಇವಳ ಮಾತುಗಳೂ, ಇವಳ ಹಾವಭಾವಗಳೂ, ಇವಳ ಇ೦ದ್ರಯಾಲ ಮಹೇಂದ್ರ ಚಾಲ ವಿದ್ಯೆಗಳೂ, ನಿಜವಾದ ಸನ್ಯಾಸಿಗಳ ಮನಸ್ಸನ್ನೂ ಕೂಡ ಆಡಿಸುವಂತಿರು ವುವು, ನಿನ್ನ ಮನಸ್ಸಿನಲ್ಲಿ ವಿಕಲ್ಪವು ಹುಟ್ಟಿರುವುದು, ದೌರ್ಬಲ್ಯವನ್ನು ತೋರಿ ಸುವುದಕ್ಕೆ ನೀನು ಉಪಕ್ರಮ ಮಾಡಿರುವಿ, ಇವಳಿಂದ ನಿನ್ನ ಧರ್ಮಬುದ್ಧಿಯು