ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಪಂಚತಂತ್ರ ಕಥೆಗಳು, ನಾವು ನಿಮ್ಮ ಸೇವೆ ಮಾಡಿಕೊಂಡು ನೀವು ಭಕ್ಷಿಸಿದ ಬಳಿಕ ಉಳಿದು ದನ್ನು ತಿಂದು ಜೀವಿಸುತ್ತಿದ್ದೇವೆ. ನಾವೆಷ್ಟುಮಾತ್ರದವರು ? ಎಂದು ನುಡಿದರು. ಆಗ ಸಿಂಹವು ಅವರನ್ನು ನೋಡಿ... ಎಷ್ಟುಮಾತ್ರ ಆಹಾರ ಸಿಕ್ಕಿದರೂ ಸಾಕು, ಆ ಸ್ಪಲ್ಪದೊಂದಿಗೆ ಹೊತ್ತು ಕಳೆಯುತ್ತಿರುವೆನು ; ನಾನೇನುಮಾಡಲಿ ? ನನಗೀಗ ರೋಗ ಸಂಭವಿಸಿತು. ಆದುದರಿಂದ ತಾಮಸಪಡಿಸದೆ ಗಿಡಕ್ಕೆ ಹೋಗಿ ಯಾವ ಮಾಂಸವನ್ನಾದರೂ ಎಷ್ಟುಮಾ ತ್ರವನ್ನಾದರೂ ತೆಗೆದುಕೊಂಡು ಬನ್ನಿರಿ ಎಂದು ಅವರನ್ನು ಕಳುಹಿಸಿ ತು. ಆಮೇಲೆ ಅವರು ಅಡವಿಗೆ ಹೋಗಿ ಹೊದರುಗಳಲ್ಲ ಗಿಡಗಳಲ್ಲೂ ಬೆಟ್ಟಗಳಲ್ಲಿ ಜಗುಗಳಲ್ಲಿ ಗುಹೆಗಳಲ್ಲಿ ಒಂದು ಮೃಗವನ್ನಾದರೂ ಕಾಣದೆ, ತರುವಾಯ ನಾಲ್ವರೂ ನಾಲ್ಕು ದಿಕ್ಕುಗಳಿಗೆ ಚದರಿ ಹೋಗಿ ಹುಡುಕುತ್ತಿರಲಾಗಿ, ಕಾಗೆ ಹುಲಿನರಿಗಳು ಒಂದು ಕಡೆಯಲ್ಲಿ ಸೇರಿ ಕೊಂಡುವು. ಆಗ ಕಾಗೆಯು ಹುರಿನರಿಗಳನ್ನು ನೋಡಿ ನಾವು ಸ್ವಾಮಿಯ ಕೆಲಸಕ್ಕಾಗಿ ಬಂದುದಕ್ಕೆ ಅರಣ್ಯದಲ್ಲಿ ಏನೂ ಸಿಕ್ಕಲಿಲ್ಲ. ಈ ಕಥನಕನನ್ನು ಕೊಂದು ತೆಗೆದುಕೊಂಡು ಹೋಗಿ ಆತನಿಗೆ ಆಹಾರ ವಾಗಿ ಮಾಡಿದರೆ ಒಳ್ಳೆಯದಲ್ಲವೋ ? ಮಿಕ್ಸ್ ಮಾಂಸ ನಮಗೆ ಕೆಲವು ದಿನಕ್ಕೆ ಉದರಪೋಷಣೆಗೆ ಸಾಕು. ಈವರೆಗೆ ಸಂದ ಕಾಲದಲ್ಲಿ ಅನೇಕ ಮೃಗಮಾಂಸಗಳಿಂದ ನಮ್ಮನ್ನು ಸೇವಿಸಿದ ಅರಸನಿಗೆ ನಾವೀಗ ಬಂದ ಸಂಕಟವನ್ನು ಹೋಗಲಾಡಿಸಬೇಕು ಎಂದು ನುಡಿಯಲು, ಕಾಗೆಗೆ ಹುಲಿ ನರಿಗಳಿಂತೆಂದುವು ; ಬಹಳ ದಯೆಯಿಂದ ಒಂಟೆಗೆ ಅಭಯಪ್ಪ, ದಾನಮಾಡಿ ಎಲ್ಲರಿಗಿಂತ ಹೆಚ್ಚಾಗಿ ಮನ್ನಿಸುತ್ತಿರುವ ಅರಸನಿಗೆ ತಿಳಿಸದೆ ನಾವು ಅದನ್ನು ಕೆಂದರೆ ಆ ಮೇಲೆ ಆ ಸಂಗತಿ ಅರಸನಿಗೆ ತಿಳಿದಲ್ಲಿ ನಮ್ಮ ಮೇಲೆ ಕೋಪಿಸಿ ನಮಗೆ ಶಿಕ್ಷೆಯನ್ನು ವಿಧಿಸುವನು. ಆದುದ ರಿಂದ ನಮ್ಮ ಸ್ವಾಮಿ ಅರಿಯದ ಹಾಗೆ ಅದನ್ನು ಕೊಲ್ಲುವುದು ಯುಕ್ತ ವಲ್ಲ-ಎಂದವು. ಅದಕ್ಕೆ ಕಾಗೆಯು ಅತಿ ಹಸಿವಿನಿಂದ ಪೀಡಿತನಾದ ಮನುಷ್ಯನು ತನ್ನ ಹೆಂಡತಿ ಮಕ್ಕಳನ್ನೊಲ್ಲನು. ಹಾವು ತಾನಿಟ್ಟ ಮೊಟ್ಟೆಗಳನ್ನು ಹಸಿವಿನಿಂದ ತಾನೇ ತಿನ್ನುವುದು ತೀರದೆ ಮಾರಿ ಬಂದಾಗ ಹನಿಗೊಂಡವನು ಪಾಪಮಾಡದೆ ಇರುವನೋ ? ನಮ್ಮ ಹಸಿ