బ 46 ಪಂಚತಂತ್ರ ಕಥೆಗಳು. ಎಂದು ಅವರು ಕೇಳಿದರು. ಒಬ್ಬ ಬಡಗಿಯು ನಿತ್ಯವೂ ನನಗೆ ಅನ್ನ ಪಾನಾದಿಗಳನ್ನು ತಂದು ಕೊಡುತ್ತಾನೆ-ಎಂದು ಸಿಂಹವು ಹೇಳಿತು. ನಮಗೆ ಅವನನ್ನು ತೋರಿಸಿರಿ ಎಂದು ಕಾಗೆ ಜಂಬುಕಗಳು ನುಡಿ ದುವು. ಮಾರನೆಯ ದಿನ ಬೆಳಿಗ್ಗೆ ಎಲ್ಲರೂ ಕಾಡಿನಲ್ಲಿ ಒಂದು ಕಡೆ ಯಲ್ಲಿ ಸೇರಿಯಿದ್ದರು. ಬಡಗಿಯು ಪರಿವಾರದೊಂದಿಗೆ ಕೂಡಿರುವ ನಿಂಹವನ್ನು ನೋಡಿ ಮರವನ್ನು ಹತ್ತಿದನು. ಸಿಂಹವು ಅವನ ಹತ್ತಿ ರಕ್ಕೆ ಹೋಗಿ-ಸ್ನೇಹಿತನೇ, ಏಕೆ ಮರವೇರಿದೆ ?-ಎಂದು ಕೇಳಿತು. ನರಿಯೂ ಕಾಗೆಯ ನಿನ್ನ ಮಗ್ಗುಲಲ್ಲಿದ್ದಾರೆ; ಆದುದರಿಂದ ಮರವೇ ರಿದೆನು. ನಿನ್ನ ಪರಿವಾರವು ಒಳ್ಳೆಯದಲ್ಲ ಎಂದು ಹೇಳಿ, ಅವನು ಮರದಿಂದ ಇಳಿಯದೆ ಇದ್ದನು, ಅನೇಕರಾದ ದುರ ಬಳಿಯಲ್ಲಿ ಒಬ್ಬ ಸಜ್ಜನನಿದ್ದರೆ ಅವನಿಗೆ ದುಮ್ಮನೆಂಬ ಹೆಸರು ಬರುವುದು. ಊರ ಹತ್ತಿರ ಸ್ಮಶಾನಭೂಮಿಯ ಲ್ಲಿರುವ ಹದ್ದುಗಳ ಸಂಗಡ ಒಂದು ಹಂಸವಿದ್ದರೆ, ನೋಡುವವರು ಅದನ್ನು ಹದ್ದೆಂದುಕೊಳ್ಳುವರೇ ಹೊರತು ಹಂಸವೆಂದು ತಿಳಿದುಕೊಳ್ಳಿ ಲಾರರು. ಅರಸನ ಬಳಿಯಲ್ಲಿ ಯೋಗ್ಯರಿದ್ದರೆ ಅಲ್ಲಿಗೆ ಬಂದವನು ಅಲ್ಪ ನಾದರೂ ಗುಣವಂತನಾಗುವನು. ಹಂಸಗಳ ಗುಂಪಿನಲ್ಲಿ ಒಂದು ಹದ್ದಿ ದ್ದರೆ ಅದನ್ನು ನೋಡುವವರು ಹಂಸವೆಂದುಕೊಳ್ಳುವರೇ ಅಲ್ಲದೆ ಹದ್ದೆಂದೆ ನಸರು. ಅರಸನ ಹತ್ತಿರ ಯಾವನೋ ದುರಾತ್ಮನು ಸೇರಿ ನಿಜವನ್ನು ಸುಳ್ಳಾಗಿಯೂ ಸುಳ್ಳನ್ನು ನಿಜವಾಗಿಯೂ ಹೇಳಿ ನನ್ನಲ್ಲಿ ಭೇದವನ್ನು ಹುಟ್ಟಿಸಿದನು. ಕೆಲಸ ಮಿಾರಿ ಹೋಯಿತು, ಏನುಮಾಡುವೆನು? ಭೂಮಿ ಯಲ್ಲಿ ಸಿಡಿಲೂ ರಾಜಪರಾಕ್ರಮವೂ ಅತಿ ಭಯಂಕರವಾದುವುಗಳು. ಅವುಗಳಲ್ಲಿ ಸಿಡಿಲು ಒಂದು ಕಡೆಯಲ್ಲಿ ಬೀಳುತ್ತದೆ; ರಾಜಪರಾಕ್ರಮವಾ ದರೋ ಹಗೆಗಾರನ ರಾಜ್ಯದಲ್ಲೆಲ್ಲಾ ವ್ಯಾಪಿಸುತ್ತದೆ. ಈಗ ನಾನು ಆತನೊಂದಿಗೆ ಸಾಯುವುದು ಮೇಲೇ ಹೊರತು ಆತನ ಆಜ್ಞೆಯಲ್ಲಿರು ವುದು ಯುಕ್ತವಲ್ಲ, ಕಾರಾಕಾರಗಳನ್ನರಿಯದೆ ಗರ್ವಿಸಿ ದುರ್ಮಾರ್ಗ ದಲ್ಲಿ ಪ್ರವರ್ತಿಸುವ ಗುರುವನ್ನಾದರೂ ಬಿಡಬೇಕು. ಒಳ್ಳಯ ಯಜ್ಞಗ
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೬
ಗೋಚರ