RE#gi ತ17xರ್ಗ: ಈ ".: : : : 1
ಹೆಣ್ಣಿಗೆ:- ತ: - ೨೯ ನವ ಚಾರ್ಲಿ + -1, 62, ಅನುಚಿತ ವತಕದಯ 2... ಪ್ರೇಮಕ್ಕೆ ಕಣ್ಣಿಲ್ಲ ಅದನ್ನು ನೋಡಿದ್ದಳು : “ಅದೇನೇ ?” ಎಂದು ಕೇಳಿರಲಿಲ್ಲ, ಅಷ್ಟೆ: ವಿಶಾಲಾಕ್ಷಿ ಎದ್ದು ಮಗುವಿನ ಬಳಿಸಾರಿ, ಕೈಗಳನ್ನು ಮುಂದಕ್ಕೆ ಚಾಚಿದಳು ಅನಿರ್ಧಾರದ ನೋಟದಿಂದ, ಕನ್ನಡಕವಿದ್ದ ಆ ಮುಖವನ್ನು, ಒಂದು ಕ್ಷಣ ಮಗು ನೋಡಿತು... “ಅತ್ತೆ ಕಣೋ, ಹೋಗೋ” ಎಂದು ಉತ್ತೇಜನವಿತ್ತಳು ನರ್ಮದಾ .. ಮುರಲಿ 'ಗುರುತು ಸಿಕ್ಕಿತೆನ್ನುವಂತೆ ನಕ್ಕ. ಅವನನ್ನೆತ್ತಿಕೊಂಡು ವಿಶಾಲಾಕ್ಷಿ ಮುದ್ದಾಡಿದಳು, ತಾನು ಇರುವುದೇ ಅಂತಹ ಮುದ್ದಾಟಕ್ಕೆನ್ನುವಂತೆ, ಮುರಲೀಧರ ಆ ಒಲವನ್ನೆಲ್ಲ ಸ್ವೀಕರಿಸಿದ. ಮನಸ್ಸಿನಲ್ಲೇ ಲೆಕ್ಕ ಹಾಕಿ ವಿಶಾಲಾಕ್ಷಿ ಅಂದಳು: “ಒಂದೂವರೆ ವರ್ಷ ಆಗಿಹೋಯ್ತು, ಅಲ್ವೇನೇ ?” “ಗಣಿತದಲ್ಲಿ ಯಾವತ್ತು ನಿನಗೆ ಪೂರ್ತಿ ಮಾರ್ಕು ಬಂದಿರಲಿಲ್ಲ, ಹೇಳು” ಮುರಲಿ ಆಗಲೇ ಅತ್ತೆಯ ಕನ್ನಡಕಕ್ಕೆ ಕೈ ಹಾಕಿದ್ದ. ಅಜ್ಜನಲ್ಲಿಯೂ ಒಂದಿತ್ತು, ಇದು ಅದೇ ಇದ್ದರೂ ಇರಬಹುದು ಎಂಬ ಶಂಕೆ ಅವನಿಗೆ. “ಮುಟ್ಟ ಬಾರದಪ್ಪಾ ಅದನ್ನ” ಎಂದು ತಾಯಿ ಮಗುವಿಗೆ ಆದೇಶವಿತ್ತಳು. “ಹುಂ ?” ಎಂದು ಮುರಲಿ ಹುಬ್ಬೇರಿಸಿ ಅಬ್ಬರಿಸಿದ, ಅಂತಹ ಆಜ್ಞೆ ತನಗೆ ಅಪ್ರಿಯವೆನ್ನುವಂತೆ. “ಕೆಟ್ಟ ಹುಡುಗ ! ಕನ್ನಡಕ ಕೊಡಲೇನೋ ನಿಂಗೆ ?” ಎಂದು, ತನ್ನ : ಮುಖದಿಂದ ಕನ್ನಡಕವನ್ನು ತೆಗೆದು, ವಿಶಾಲಾಕ್ಷಿ ಅದನ್ನು ಕೈಯಲ್ಲಿ ಹಿಡಿದಳು. , ಬಾಲ್ಯದಿಂದಲೂ ತನ್ನ ಗೆಳತಿಯಾಗಿದ್ದ ವಿಶಾಲ್ಲಿಯ ಮುಖವನ್ನು ಒಂದು ಕ್ಷಣ ನರ್ಮದಾ ದಿಟ್ಟಿಸಿ ನೋಡಿದಳು, ಕನ್ನಡಕ ತೆಗೆದಾಗ, ಬೆಳಕನ್ನು ಇದಿರಿ ಸುವುದು ತಮಗೆ ಅಭ್ಯಾಸವೇ ಇಲ್ಲವೇನೋ ಎನ್ನುವಂತೆ ಎಷ್ಟೊಂದು ಕಿರಿದಾಗಿ ಕಣ್ಣುಗಳು ಕಂಡುವು! ಮುರಲಿಯ ಗಲ್ಲವನ್ನು ಚುಂಬಿಸಿದ್ದ ತುಟಿಗಳು ಮಾತ್ರ, ಹಿಂದಿನಂತೆ ಒಣಗಿರಲಿಲ್ಲ, ಸಾಕಷ್ಟು ಮೋಹಕವೂ ಆಗಿತ್ತು ಮುಗುಳುನಗೆ. ವಕ್ಷಸ್ಥಲವೂ ತುಂಬಿಕೊಂಡಿತ್ತು ಸ್ವಲ್ಪಮಟ್ಟಿಗೆ
- “ಅತ್ತೆಗೊಂದು ಉಮ್ಮ ಕೊಡು ಮರೀ.”
ಮುರಲಿ ಬಲು ಉದಾರಿ, ಕಣ್ಣು ಮುಚ್ಚಿ ವಿಶಾಲಿಯ ಮೂಗಿಗೇ ಆತ ಮುತ್ತಿಟ್ಟ, ಕಣ್ಣು ತೆರೆದು, 'ಸಾಕೇ?” ಎನ್ನುವಂತೆ ನಕ್ಕ, ಬಾಯಲ್ಲಿ ಬೆಳ್ಳಗಿನ ೨ ಇತಿ
- {{ಭkj74xij!!
ಮಹಕಸಖನುಷಕೊಂಡು ಸಂಚಾರ ..' '... ::: ::: • '-Put+' -ಡ!* - -'.?• °