೧೨ ಮಿ೦ಚಿನಬಳ್ಳಿ ಏಷ್ಯಗಳಿದ್ದವ. ನಕ್ಷFಶಾಪಿನಲ್ಲಿ ಹೋಗಿ ಕೂಲಿಕಾರರಿ೦ತಿ ಕಾರ್ಯ ಮಾಡು ವದು ನಿಮ್ಮ ಮರ್ಯಾದೆಗೆ ಶೋಭಿಸುವದಿಲ್ಲೆಂದು ಸಹೋದ್ಯೋಗಿಗಳು ಎಚ್ಚರಿ ನುತ್ತಿದ್ದರು, ಒಂದುವೇಳೆ ಒಳಗೆ ಪ್ರವೇಶ ದೊರೆತರೂ ಯಂತ್ರಗಳ ಜ್ಞಾನ ವಾಗುವದೆಂತು ? ಎಂಬುದು ಎರಡನೆಯ ಪ್ರಶ್ನೆಯಾಗಿದ್ದಿತು. ಮನವಿದ್ದಲ್ಲಿ ಮಾರ್ಗವಿದೆ. ಈ ಖಾತೆಯಲ್ಲಿ ವೇಲಜಿ ಮೇಸ್ತ್ರಿ ಎಂಬುವವ ರಿದ್ದರು. ಲಕ್ಷ್ಮಣರಾಯರು ಮೆಲ್ಲನೆ ಅವರ ಗೆಳೆತನ ಬೆಳೆಸಿದರು. ಅದರಿಂದ ವರ್ಕಶಾಪಿನಲ್ಲಿ ಕಾರ್ಯಮಾಡುವ ಬಗ್ಗೆ ಅಪ್ಪಣೆ ದೊರೆಯಿತು. ಅಲ್ಲದೆ ಗೆಳೆಯರಾದ ಮೇಸ್ತ್ರಿಗಳು ಯಂತ್ರಗಳ ಜ್ಞಾನಮಾಡಿಕೊಡಲೂ ಒಪ್ಪಿದರು. ಹೀಗೆ ಈ ಮಾರ್ಗದಲ್ಲಿದ್ದ ತೊಂದರೆಗಳೆಲ್ಲ ದೂರವಾದೊಡನೆ, ಲಕ್ಷ್ಮಣರಾಯರು ಶಾಲೆಯಲ್ಲಿಯ ತಮ್ಮ ಶಿಕ್ಷಣದ ಕಾರ್ಯವು ಮುಗಿದೊಡನೆ ಉಳಿದ ಸಮಯ ನನ್ನೆಲ್ಲ ವರ್ಕ್ಷಶಾಸಿನಲ್ಲಿಯೇ ಕಳೆಯಹತ್ತಿ ದರು. ಎಣ್ಣೆ, ಮುಶಿಗಳಿಂದ ಕಪ್ಪಾದ ಮೈ ಹಾಗೂ ಅರಿವೆಗಳನ್ನು ಕಂಡು ಉಳಿದ ಶಿಕ್ಷಕರು ಕುಚೇಷ್ಟೆಯನ್ನು ಮಾಡಿದರೂ ಅದನ್ನು ಲಕ್ಷಕ್ಕೆ ತಾರದೆ ಲಕ್ಷಣರಾಯರು ಯಂತ್ರದೇನಿಯ ಉಪಾಸನೆಯನ್ನು ಕೈಕೊಂಡರು. - ಯಂತ್ರಗಳ ಬಗೆಗಿರುವ ಲಕ್ಷ್ಮಣರಾಯರ ವಿಲಕ್ಷಣ ಪ್ರೇಮವು ಅವರಿಗೆ ಅಂತಹ ಗೆಳೆಯರನ್ನು ದೊರಕಿಸಿಕೊಟ್ಟಿತು, ನೂರಖಾನ ಇಬ್ರಾಹೀಮ ಎಂಬ ಮಾಲವಣ ಕಡೆಯ ಒಬ್ಬ ಟನ್‌ನನ್ನನ ಗೆಳೆತನವಾಗಲು ಇದೇ ಕಾರಣ. ನೂರಖಾನನು ಮುಸಲ್ಮಾನನಿದ್ದರೂ ಮರಾಠಿಯನ್ನು ಚನ್ನಾಗಿ ಮಾತಾಡು ತಿದ್ದನು, ಮನಸ್ಸಿನಿಂದಲೂ ಬಹು ಉದಾರ, ತನ್ನ ಕೆಲಸದಲ್ಲಿ ಬುದ್ದಿವಂತ. ಆದುದರಿಂದ ಬೇರೆ ಬೇರೆ ಗಿರಣಿಗಳಿಂದ ಅವನಿಗೆ ಕರೆಬರುತ್ತಿತ್ತು. ಅದರ ಉಪಯೋಗವನ್ನು ಅಕ್ಷಣರಾಯರಿಗೂ ಮಾಡಿಕೊಟ್ಟನು, ಮುಂಬಯಿಯ ಲ್ಲಿಯ ಗ್ರಾಂಡಈಸ್ಸರ್ನಮಿಲ್ಲಿನ ಮ್ಯಾನೇಜರರಿಗೆ ಯಂತ್ರಗಳ ಅನೇಕ ಡ್ರಾಯಿಂಗುಗಳು ಬೇಕಾಗಿವೆ ಎಂಬ ಸಂಗತಿ ತಿಳಿದೊಡನೆ ಆ ಕೆಲಸವನ್ನು ಲಕ್ಷ್ಮಣರಾಯರಿಗೆ ನೂರಖಾನನು ದೊರಕಿಸಿಕೊಟ್ಟನು. ಇಂತಹ ಕೆಲಸ ಗಳಿಂದ ರಾಯರಿಗೆ ಅಲ್ಪ ಸ್ವಲ್ಪ ಪ್ರಾಪ್ತಿಯೂ ಆಗಹತ್ತಿತು, ಇವನ ಸ್ನೇಹದಿಂದ ೧೮೯೨ ರಲ್ಲಿ ಒಂದು ಮುದ್ರಣಯಂತ್ರವನ್ನು ಕೂಡಿಸಿಕೊಡುವ ಕೆಲಸವನ್ನು ರಾಯರು ಹಿಡಿದರು, ಈ ಸಂಗತಿಯು ಸ್ವಲ್ಪ ಕೇಳುವಂತಹದಿದೆ. ನೂರಖಾನನು ವಾಸಿಸುವ ವಸತಿಯಲ್ಲಿ ಕರಿಮಾ ಲಿಥೋಪ್ರೆಸ್ ಎಂಬ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೯
ಗೋಚರ