4೪ ಮಿಂಚಿನಬಳ್ಳಿ ಬಾವಿಗಳಿಗೆ ಪವನಚಕ್ಕಿಯನ್ನು ಜೋಡಿಸಿದರು, ಅವುಗಳಲ್ಲಿ ಕೆಲವು ಈಗಲೂ ನೋಡಲು ಸಿಗುತ್ತವೆ. ಗುಣಗ್ರಾಹಕರೂ ಇಚಲಕರಂಜಿಯ ಅಧಿಪತಿಗಳೂ ಆದ ಬಾಬಾಸಾಹೇಬ ಘೋರ್ಪಡೆಯವರ ಪರಿಚಯವು ಕೆಲ ಕಾರಣಗಳಿಂದ ಉಂಟಾಗಿದ್ದಿತು. ಅವರ ಆಮಂತ್ರಣದ ಮೇರೆಗೆ ಲಕ್ಷ್ಮಣರಾವ, ರಾಮರಾವ ಹಾಗೂ ನಾಜೀರಾವ ಗುಕರ ಇವರು ಸಾಯಕಲ್ಲಿನ ಮೇಲೆ ೭೪ ಮೈಲು ಪ್ರವಾಸವನ್ನು ಮಾಡಿ ಮಾಧವಗಿರಿಗೆ ಹೋದರು, ಅಜರೆಯ ಹತ್ತಿರವಿರುವ ಮಾಧವಗಿರಿಯು ಬಾಬಾಸಾಹೇಬರ ಬೇಸಿಗೆಯ ವಿಶ್ರಾಂತಿಧಾಮ, ಇದೇ ಅವರ ಮಹಾಬಳೇಶ್ವರ, ಈ ಸಮಯದಲ್ಲಿ ಇಚಲಕರಂಜಿಯ ಊರಿಗೂ ಅರಮನೆಗೂ ಪವನಚಕ್ಕಿಯಿಂದ ನೀರು ಪೂರೈಸುವ ಯೋಜನೆಯು ರೂಪಿಸಲ್ಪಟ್ಟಿತು, ಲಕ್ಷ್ಮಣರಾಯರು ಇದ ಕ್ಯಾಗಿ ಇಚಲಕರಂಜಿಗೆ ಹೋಗಿ ನಿಂತರು. ಊರಿಗೆ ನೀರು ಪೂರೈಯಿಸಲು ಬೇಕಾಗುವ ದೊಡ್ಡ ಪವನಚಕ್ಕಿಯನ್ನು ತರಿಸಿ, ನದಿಯಲ್ಲಿ ಬುರುಜನ್ನು ಕಟ್ಟಿಸಿ, ಅದರ ಮೇಲೆ ಚಕ್ಕಿಯನ್ನು ಕೂಡಿಸಿ, ಈ ದೊಡ್ಡ ಕಾರವನ್ನು ಪೂರ್ಣ ಮಾಡಿದರು. ಊರಲ್ಲೆಲ್ಲ ನೀರೇ ನೀರು, ಎಲ್ಲರಿಗೂ ಆನಂದ. ಸಾಯಕಲ್ಲಿನ ಉದ್ಯೋಗಕ್ಕೆ ಪವನಚಕ್ಕಿಯ ಸಹಾಯ ದೊರೆತು, ಉದ್ಯೋಗವು ಬಲಿಯುವಷ್ಟರಲ್ಲಿ ಪ್ಲೇಗವು ಬೆಳಗಾವಿಗೂ ಕಾಲುಚಾಚಿತು. ಮೊದಲನೆಯ ತುತ್ತಿಗೆ ರಾಮರಾಯರ ಮಗನೇ ಬಲಿಯಾದನು. ಜನರು ಊರ ಹೊರಗೆ ಗುಡಿಸಲಗಳನ್ನು ಕಟ್ಟಿ ವಾಸಿಸಹತ್ತಿದರು, ಪ್ರತಿ ವರ್ಷ ಹೀಗೆ ಸ್ಥಳಾಂತರಿಸುವದಕ್ಕಿಂತ ಊರ ಹೊರಗೇ ಸ್ಥಿರವಾಗಿ ನಿಲ್ಲಬೇಕೆಂದು ಇಬ್ಬರೂ ಬಂಧುಗಳು ನಿಶ್ಚಯಿಸಿದರು, ಬೆಳಗಾವಿಯ ದಕ್ಷಿಣಕ್ಕೆ ಮೂರು ಮೈಲು ದೂರ ವಿರುವ ಶ್ರೀ ಸದಾಶಿವರಾವ ನರಗುಂದಕರರ ನಾಗಝರಿ ಎಂಬ, ಬೈಲು ಪ್ರದೇಶವು ವಾಸಕ್ಕೆ ಯೋಗ್ಯವೆಂದು ನಿಶ್ಚಯಿಸಿ ಈ ಬೈಲುಪ್ರದೇಶದಲ್ಲಿ ಮೊದ ಲಿಗೆ ನಾಲ್ಕಾರು ಗುಡಿಸಲುಗಳನ್ನು ಮಾತ್ರ ಕಟ್ಟಿಸಿದರು. ಲಕ್ಷಣರಾಯರು ರಾಮರಾಯರು ಹಾಗೂ ಅವರ ಸೋದರ ಅಳಿಯನಾದ ಬನ್ಯಾಬಾಪೂ ಚಾಂಭೀಕರ ಹಾಗೂ ಮದತಸೀಸ, ಕೆ, ಕೆ, ಕುಲಕರ್ಣಿ ಈ ಕುಟುಂಬಗಳು ಅಲ್ಲಿ ವಾಸಿಸಹತ್ತಿದವು, ನೀರಿಗಾಗಿ ಎರಡು ಭಾವಿಗಳು ತೋಡಲ್ಪಟ್ಟವು, ಸುದೈವ ದಿಂದ ಸೀನೀರು ಬಿದ್ದವು, ಒಂದು ಬಾವಿಗೆ ಪವನಚಕ್ಕಿಯನ್ನು ಜೋಡಿಸಿದ್ದ ರಿಂದ ನೀರಿನ ಸೌಕರ್ಯವು ಚನ್ನಾಗಿ ಆಯಿತು, ನರಗುಂದಕರರೂ ತಮಗಾಗಿ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೩
ಗೋಚರ