ವಿಜ್ಞಾನಿಗಳು. ಪ್ರೋಫೆಸರುಗಳು ಎಲ್ಲರೂ ಪಡೆಯುತ್ತಿದರು. ಒಮ್ಮೆಲೆ ಆ ಲೈಬ್ರರಿಗೆ ಬೀಗ ಹಾಕಿ ಬೀಗದ ಕೈಯನ್ನು ಸೊoಟಕ್ಕೆ ಸಿಕ್ಕಿಸಿಕೊರಿಡಳು, ಪುಸ್ತಕಾಥಿ೯ಗಳಾಗಿ ಬoದವರಿಗೆಲ್ಲ "ಇದೇನು ಧರ್ಮಶಾಲೆಯೆ ? ಕಂಡವರೆಲ್ಲ ಬoದು ಬಿಟ್ಟ ಓದಬೇಕನ್ನುತ್ತೀರಲ್ಲ ? ಪುಸ್ತಕಗಳು ಕೆಟ್ವರೆ. ಹಾಳಾದರೆ. ಹರಿದು ಹೋದರೆ. ಕಳೆದು ಹೋದರೆ, ಯಾರು ಜವಬ್ಧಾರರು ? ಇಷ್ಟು ಕಷ್ಪಪಟ್ಟು ಕಲೆಕ್ಛ ಮಾಡಿದ ಪುಸ್ತಕಗಳನ್ನೆಲಾ ಬೇಕಾಬಿಟ್ಚೆಯಾಗಿ ಸಿಕ್ಕವರ ಕೈಗೆ ನಾನು ಕೊಡಲಾರೆ. ಡಿಪಾರ್ಟ್ಮೆಂಟಿನ ಆಸ್ತಿಯನ್ನು ಕಾಪಾಡುವುದು ನನ್ನ ಕರ್ತವ್ಯವೆಂಬ ತತ್ವಕ್ಕೆ ನಾನು ಬದ್ಧ ಳು" -ಅಂತ ದಬಾಯಿಸಿ ಕಳಿಸಿಬಿಡುತ್ತಿದ್ದ ಳು. ಪ್ರತಿದಿನ ಒಬ್ಬ ಪ್ಯೊನಿಂದ ಆ ಪುಸ್ತಕಗಳ ಧೂಳು ಝಾಡಿಸಿ ಲೈಬ್ರರಿಯನ್ನು ಸ್ವಚ್ಛ ಮಾಡಿಸುತ್ತಿದ್ದಳು. ತಾನು ಎಲ್ಲಾದರೂ ಭಾಷಣಕ್ಕೆ ಹೋಗುವಾಗ ಮಾತ್ರ ಅಲ್ಲಿನ ಪುಸ್ತಕಗಳ ನೆರವು ಪಡೆಯುವ ಅವಕಾಶವೇ ಇಲ್ಲವಾಗಿ ತನ್ನ ಭಾಷಣಗಳೇ ಎಲ್ಲರ ಭಾಷಣಗಳಿಗಿಂತ ಹೆಚ್ಚು ವಚಾರಪರಿಪ್ಲು ತವಾಗಿರಲು ಹೀಗೂಂದು ಅವಕಾಶವಾಯಿತಲ್ಲ ಎಂದು ಒಳಗೂಳಗೇ ಸಂತೋಷಪಡುತ್ತಿದ್ದಳು.ಹೀಗೆ ಆಫೀಸಿನ ಅತ್ಯಮೂಲ್ಯ ಆಸ್ತಿಯನ್ನು ಸಾವ್ ಸೊತ್ತಾಗಲು ಬಿಡಿದೆ ಜತನವಾಗಿ ಬೀಗಹಾಕಿ ನಾಗರಹಾವಿನಂತೆ ಕಾಯ್ದುಕೊಂಡು ನಡೆದಿರುವುದಕ್ಕಾಗಿ ಡಾ.ತಾರಾ ಪೋಕಳೆಗೆ ಸಾಹೇಬರಿಂದ ಶಾಭಾಸ್ ಗಿರಿ ಸಿಕ್ಕಿತೋ ಇಲ್ಲವೋ ಉಳಿದವರಿಗೆ ತಿಳಿಯಲಿಲ್ಲ.
"ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಶೋಷಣ ಹೆಣ್ಣುಮಕ್ಕಳಿಂದಲೇ ಆಗುತ್ತದೆ.ಉದಾಹರಣೆಗೆ ಹೆಣ್ಣು ಅತ್ತೆಯಾಗಿ ಸೊಸೆಯನ್ನು ಕಾಡುತಳೆ.