ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಗೌಡನ ನಡೆಯಷ್ಟೇ ಸ್ಪಷ್ಟವಾಗಿತ್ತು ನುಡಿ ಕೂಡಾ. ಆತ ಪುಟ್ಟಬಸವನನ್ನುದ್ದೇಶಿಸಿ ಹೇಳಿದ:

   ಸ್ವಾಮಿಯವರು ಅಪ್ಪಣೆ ಕೊಡಿಸ್ಬೇಕು. ನಾಳೆ ಬೆಳಗಿನ ಜಾವ ನಾನೂ ಮಾಚಯ್ಯನವರೂ ಹೊರಡ್ತೇವೆ. ಕುದುರೆಗಳು ಸಿಗೋದು ಸಾದ್ಯವಾದರೆ...
    ಕೊಡಿಸೋಣ,ಕುದುರೆಗಳು ಸಿಗ್ತವೆ, ಎಂದ ನಂಜಯ್ಯ.
    ಹಾಗಾದರೆ ಕುದುರೆ ಸವಾರರಾಗಿಯೇ ಹೋಗ್ತೇವೆ. ನೀವೆಲ್ಲಾ ಬರುವುದಕ್ಕೆ ಎರಡು ದಿವಸ ಮೊದಲೇ ನಾವು ಊರು ಸೇರ್ಬೇಕು. ಒಳ್ಳೆಯ ಮೂಹೂರ್ತ ನೋಡ್ಕೊಂಡು....
    ಇನ್ನು ನಾಲ್ಕೈದು ದಿವಸ ಬಿಟ್ಕೊಂಡು ನಾವೆಲ್ಲಾ ಹೊರಡೋದು ಸಾದ್ಯವಾದೀತು, ಎಂದು ಸೋಮಯ್ಯನೆಂದ.
   ಹಾಗೇ ಮಾಡಿ. ಅಷ್ಟರಲ್ಲಿ ಕೊಡಗಿನ ಬೇರೆ ಬೇರೆ ಊರುಗಳಿಗೆ ಆದೇಶ ಕಳಿಸೋದೂಂತು ಇದ್ದೇ ಇದೆ. ಸರಿಯೋ?
    ಆಗಲಿ ಗೌಡರೆ.         
    ಹೆಚ್ಛಿಂದರೆ ಎರಡು ದಿವಸದ ಪ್ರಯಾಣ. ನೀವೆಲ್ಲಾ ಬರುವಾಗಲೂ ಬೆಳಗಿನ ಜಾವ ಸ್ವಲ್ಪ ಹೊತ್ತು ತಿಂಗಳ ಬೆಳಕು ಇರ್ತದೆ. ಅಷ್ಟು ಸಾಕು.
     ಸರಿ, ಎಂದ ಕರಿಯಪ್ಪ.
     ರಾಮಗೌಡ ಮುಗುಳುನಕ್ಕು,ಪುಟ್ಟಬಸವನ ಮುಖವನ್ನೆ ನೋಡಿದ.
     ಏನು? ಎಂದ ಪುಟ್ಟಬಸವ, ತಾನೂ ಪ್ರತಿಯಾಗಿ ಮುಗುಳುನಗುತ್ತ.
     ಏನಿಲ್ಲ. ಚಂದ್ರನ ಬೆಳಕಿನ ವಿಷಯ ಯೋಚನೆ ಮಾಡ್ದೆ. ಬರೋದು ಅಮಾವಾಸ್ಯೆ. ಆನಂತರದ ಹುಣ್ಣಿಮೆ ರಾತ್ರಿ ನಾವು ಕಡಲ ದಂಡೆಯ ಮೇಲಿರ್ತೇವೆ, ಹೌದೋ?
      ಓಹೋ! ಎಂದ ಪುಟ್ಟಬಸವ.