ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೪
ಕಾದಂಬರೀಸಂಗ್ರಹ

ಆಗ ವೇದವ್ಯಾಸರು ಆಚಾರ್ಯರನ್ನು ಕುರಿತು "ಯತಿಯೇ ! ನೀನು ನನಗೆ
ಸಮಾನನು; ನೀನು ನನ್ನ ತಾತ್ಪರ್ಯವನ್ನೇ ಚೆನ್ನಾಗಿ ಪ್ರಕಾಶಗೊಳಿಸಿದ್ದರಿಂದ ನನಗೆ
ಸಂತೋಷವಾಯಿತು; ಹರಿಪಾದದಿಂದುದ್ಭವಿಸಿದ ಗಂಗೆಯು ತನ್ನಲ್ಲಿ ಸ್ನಾನಮಾಡಿದ
ವರನ್ನು ಪರಿಶುದ್ಧಗೊಳಿಸುತ್ತದೆ; ನಿನ್ನ ಭಾಷ್ಯವು ತನ್ನನ್ನು ಕೇಳಿ ತಿಳಿದವರನ್ನು ಸಂರ
ಕ್ಷಿಸುತ್ತದೆ” ಎಂದು ಸಂತಸದಿಂದುತ್ತ ರವಿತ್ತರು.
ಅನಂತರ ಶಂಕರರು "ಗುರುಗಳೇ! ನನಗೆ ಇದು ಜನ್ಮಷೋಡಶವಾದ್ದರಿಂದ ಮಣಿ
ಕರ್ಣಿಕಾಘಟ್ಟದಲ್ಲಿ ತಮ್ಮ ಚರಣಗಳ ಸಾಮೀಪದಲ್ಲಿ ದೇಹೋಪಾಧಿಯನ್ನು ಕಳೆಯಲು
ಯತ್ನಿಸಿರುವೆನು” ಎನ್ನಲು ವ್ಯಾಸರು ಬ್ರಹ್ಮನನ್ನು ಧ್ಯಾನಿಸಿ ಪ್ರತ್ಯಕ್ಷನಾದ ಬ್ರಹ್ಮದೇ
ವನನ್ನು ಶಂಕರಯತಿಯು ಮಾಡಬೇಕಾದ ಕೆಲಸಗಳು ಬಹಳವಾಗಿವೆಯಾಗಿ ಮತ್ತಷ್ಟು
ಆಯುಸ್ಸನ್ನು ಕೊಡಬೇಕು ” ಎಂದು ಪ್ರಾರ್ಥಿಸಲು ಬ್ರಹ್ಮನು ಇನ್ನೂ ಹದಿನಾರುವರುಷ
ಆಯುಸ್ಸನ್ನು ಕೊಟ್ಟು, ಅವರ ಭಾಷ್ಯವಂಕೇಳಿ ಸಂತುಷ್ಟನಾಗಿ ಅಂತರ್ಹಿತನಾದನು.
ಅನಂತರ ಶಂಕರರು ತಮ್ಮ ಭಾಷ್ಯಗಳಿಗೆ ಭಟ್ಟಪಾದರಿಂದ ವಾರ್ತಿಕವನ್ನು
ಮಾಡಿಸಬೇಕೆಂದು ರುದ್ದ ಪುರಕ್ಕೆ ಪ್ರಯಾಣಮಾಡಿ ಅವರು ತುಷಾಗ್ನಿ ಪ್ರವೇಶಮಾಡಿ
ರುವರೆಂದು ಕರ್ಣಾಕರ್ಣಿಕೆಯಾಗಿ ತಿಳಿದು, ಅಲ್ಲಿಗೆ ಬೇಗ ಹೋಗಿ ಅವರನ್ನು ,
ಈರೀತಿ ಏಕೆಮಾಡಿದಿರಿ? ಎಂದರು.
ಅದಕ್ಕೆ ಭಟ್ಟ ಪಾದರು "ಸ್ವಾಮಿ ! ನಾನು ಸೌಗತಮತವಂ ತಿಳಿಯಲಿಚ್ಚಿಸಿ
ಅವರ ಗುರುಗಳ ಬಳಿಗೆ ಹೋಗಿ ಅವರ ಸಿದ್ಧಾಂತವನ್ನು ಕೇಳುತಲಿದ್ದೆನು; ವೇದದೂಷ
ಣಪ್ರಸ್ತಾಪ ಬಂದಾಗ ನನ್ನ ಕಣ್ಣಿನಲ್ಲಿ ನೀರು ಬಂದಿತು; ಆಗ ಅವರು ನನ್ನನ್ನು
ಬ್ರಾಹ್ಮಣನೆಂದು ತಿಳಿದು ಉಪ್ಪರಿಗೆಯ ಮೇಗಣಿಂದ ತಳ್ಳಿಬಿಟ್ಟರು; ನಾನು ಅಲ್ಲಿಂದ
'ಬೀಳುವಾಗ ವೇದಗಳು ಪ್ರಮಾಣವಾಗಿದ್ದರೆ ನನಗೇನೂ ಆಗಬೇಡ ' ಎಂದುಸುರಿದೆನು.
ಅವುಗಳ ಪ್ರಭಾವದಿಂದಲೇ ನಾನು ಅಪಾಯರಹಿತನಾದೆನು 'ಪ್ರಮಾಣವಾಗಿದ್ದರೆ'
ಒಂದು ಸಂದೇಹವನ್ನಾಡಿದ್ದರಿಂದ ನನ್ನ ಒಂದು ಕಣ್ಣು ಕುರುಡಾಯಿತು. ಅಲ್ಲಿಂದ
ಮೊದಲು ನಾನು ನಾಸ್ತಿಕರಿಗೆ ವಿರೋಧಿಯಾಗಿ ರಾಜನ ಮೂಲಕ ಬೌದ್ಧ ಕುಲವನ್ನೇ
ನಾಶಮಾಡಿಬಿಟ್ಟೆನು. ಗುರುದ್ರೋಹಮಾಡಿದ್ದೊಂದುಪಾಪವು; ನಾಸ್ತಿಕರನ್ನು ತಕ್ಕ
ಯುಕ್ತಿಗಳಿಂದ ಖಂಡಿ
ಸಿ, ಜೈಮಿನಿಯ ನ್ಯಾಯಗಳಿಂದ ತರ್ಕಯುಕ್ತಿಗಳನ್ನು ಖಂಡಿ ಸಿದ್ದೊಂದುಪಾಪವು. ಈ ಎರಡು ಪಾಪಗಳ ನಿವೃತ್ಯರ್ಥವಾಗಿ ಈ ವ್ರತವನ್ನು ..
ಕೈಕೊಂಡಿದ್ದೇನೆ. ತಮ್ಮ ದರ್ಶನದಿಂದ ನಾನು ಕೃತಾರ್ಥನಾದೆನು. ನನಗೆ ತಾರಕೋ