ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಕೊತ್ತಳಿಗೆ?"

 ಆ ಸೂಚನೆ ಯೋಗ್ಯವಾಗಿದ್ದರೂ ರಾಮಗೌಡ ಕೇಳಿದ:
"ತೆಂಗಿನ ಮರ ಹತ್ತಿ ಕಾಯಿ ಕೀಳುವ ಚಪಲವೋ ?"
"ಛೆ ! ಛೆ ! ಒಂದು ಕಾಯಿಯೂ ಕೆಳಗೆ ಬೀಳದ ಹಾಗೆ ಕೊತ್ತಳಿಗೆ ಕಡೀತೀವಿ."
" ಸರಿ ಹಾಗಾದರೆ, ತಡಮಾತ್ರ ಮಾಡ್ಭೇಡಿ. ಇನ್ನೊಂದೇ ಘಳಿಗೆ ಪುರಸೊತ್ತು !"
  ಕೊಡಗಿನಿಂದ ಬಂದಿದ್ದ ವೀರರಿಗೆ,ದೂರದ ಹಳ್ಳಿಗಳಿಂದ ಬಂದಿದ್ದವರಿಗೆ ಬೀಳ್ಕೊಡುವ ತೊಂದರೆ ಇರಲಿಲ್ಲ. ಆದರೆ              ಊರಿನವರಿಗೆ  ಹಾಗಲ್ಲ.ತಾಯಂದಿರು ಮಕ್ಕಳನ್ನು, ಹೆಂಡತಿಯರು ಗಂಡಂದಿರನ್ನು,ಬಂಧುಗಳು ಆಪ್ತರನ್ನು, ವಿಯೋಗ ದುಃಖದ  ಕಣ್ಣೀರಿನೊಡನೆ,   ಸಲಹೆ ಸೂಚನೆಗಳೊಡನೆ, ಹಾರೈಕೆಯೊಡನೆ ಕಳುಹಿಕೊಟ್ಟರು.
  ರಾಮಗೌಡನ ಮನೆಯ ಮುಂದಣ ಬಯಲಲ್ಲೆ ಸೈನ್ಯದ ಕೂಚು ನಡೆಯಿತು.ಒಟ್ಟು ಏಳುನೂರನ್ನು ಮೀರಿಸಿತ್ತು ಸಂಖೈ.ಅಷ್ಟು      ಜನರಲ್ಲೂ ಒಬ್ಬೊಬ್ಬರದು ಒಂದೊಂದು ವಿಧದ ಕವಾಯಿತು.
  " ನಾಲ್ಕು ಹೊಡೆತ ಬಿದ್ದಮೇಲೆಯೇ ಈ ಕಬ್ಬಿಣ ಉಕ್ಕಾಗೋದು," ಎಂದ ನಂಜಯ್ಯ.
  ರಾಜ್ಯಪಾಲ ಕಲ್ಯಾಣಸ್ವಾಮಿಯೇ ಸೈನ್ಯವನ್ನು ಉದ್ದೇಶಿಸಿ ಮಾತನಾದಡಿದ; ನೇಮಕಗಳ ವಿವರ ನೀಡಿದ; ಸೈನ್ಯದ ನಿಯಮಗಳನ್ನು ಜಾಹೀರು ಮಾಡಿದ.
  " ಸುಳ್ಯದ ರಾಮಗೌಡರೂ ಕೊಡಗಿನ ಹುಲಿಕುಂದದ ನಂಜಯ್ಯನವರೂ ನಮ್ಮ ಸೈನ್ಯದ ದಂಡನಾಯಕರು. ಅಣ್ಣಿಗೌಡರೇ ಕೋಶಾಧಿಕಾರಿ. ಚೆಟ್ಟಕುಡಿಯ ಮತ್ತು ಕರ್ತುಕುಡಿಯರು ದಳಪತಿಗಳು. ಇವರ ಆಜ್ಞೆಗೆ  ಮೀರಿ ಯಾರೂ ನಡೆಯಬಾರದು.
 " ನಮ್ಮ ಯುಧ್ಧ ಇಂಗ್ಲೀಷಿನೋರ ವಿರುಧ್ಧ ಅನ್ನೋದನ್ನು ನೆನಪಿಡಿ. ನಮ್ಮ ನಾಡ ಬಾಂಧವರು ಯಾರೂ ನಮಗೆ ವೈರಿಗಳಲ್ಲ. ರಾಮಪ್ಪಯ್ಯನಂಥ ವಿಷಜಂತುಗಳಿದ್ದರೆ ಮಾತ್ರ, ಅಂಥವರ ಮೇಲೂ ನಾವು ಖಡ್ಗ ಹಿರಿದೇವು. ಪ್ರತಿಯೊಬ್ಬ ಸೈನಿಕನೂ ಪಾಲಿಸಬೇಕಾದ ಸೂತ್ರಗಳನ್ನು