ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದಳು.ಪರಿಣಾಮ ಶಿವಮೂರ್ತಿ ಕಮಲಾ ಇಬ್ಬರೂ
ಒಂದು ರವಿವಾರದ ದಿನ ದೂರದ ದೇವಸ್ಥಾನವೊಂದರಲ್ಲಿ ಕೆಲವೇ ಆತ್ಮೀಯರ
ಸಮ್ಮುಖದಲ್ಲಿ ಹಾರ ಬದಲಾಯಿಸಿ ದಂಪತಿಗಳಾದರು:
"ಇವತ್ತು ನಾನು ಪರಮಸುಖಿ.ಇನ್ನು ಜೀವನದಲ್ಲಿ ನಾನು
ಬಯಸುವುದೇನೂ ಇಲ್ಲ.ಈಗಲೇ ಸತ್ತರೂ ನನಗೆ ಖುಶಿ."
***
ಬಹಳ ದಿನಗಳ ನಂತರ ಇಂದು ರೋಶನ್ಬೀಯ ಕಣ್ಣಲ್ಲಿ ಒಂದಿಷ್ಟೂ
ನೀರಿಲ್ಲದೆ ಆಕೆಯ ಮುಖ ಶಾಂತವಾಗಿದ್ದುದನ್ನು ಕಂಡ ಶಶಿಗೆ ಸ್ವಲ್ಪ ಆಶ್ಛರ್ಯವೇ
ಆಯಿತು.ಇವತ್ತು ಆಕೆ ಡ್ಯೂಟಿಗೆ ಹೋಗುವುದೂ ಇಲ್ಲದ್ದರಿ೦ದ ವಿರಾಮವಾಗಿ
ಪೇಪರು ಹಿಡಿದು ಈಝೀಚೇರಿನಲ್ಲಿ ಕೂತಿದ್ದ೦ತೆ ಆಕೆ ಕೇಳಿದಳು ,"ಮತ್ತೇನು
ರೋಶನ್ ,ನಿನ್ನ ಗ೦ಡ ಹಾದೀ ಮ್ಯಾಲ ಬ೦ಧಾಂಗ ಕಾಣಸ್ತದ."
ರೋಶನ್ಬಿ ತಲೆತಗ್ಗಿಸಿ ನೆಲ ಒರೆಸುತ್ತಿದ್ದವಳು ಸುಮ್ಮನೇ ತನ್ನ ಕೆಲಸ
ಮು೦ದುವರಿಸಿದಳು . ಶಶಿಯೇ ಮತ್ತೆ ಅ೦ದಳೂ ,"ಅವೆಲ್ಲಾ ಬ್ಯಾರೆ ಹೆ೦ಗಸರ ಹುಚ್ಚು
ಸ್ವಲ್ಪ ದಿನಾ ಇರ್ತಾವ .ಆ ಮ್ಯಾಲ ತಾನs ಹೆ೦ಡ್ತಿ -ಮಕ್ಕಳ ಹತ್ತರ ಬರತಾನ ,ಅ೦ತ ನಾ
ಹೇಳಿದ್ದಿಲ್ಲ s ನಿನಗೆ ? ನೀ ಸುಮ್ಮನs ಅತ್ತು ಅತ್ತು ಹೈರಾಣಾದಿ."
ಈಗ ರೋಶನ್ ಬಿ ಶಾ೦ತವಾಗಿ ಹೇಳಿದಳು ."ನನ್ನ ಗ೦ಡ ಏನು ಹಾದೀ ಮ್ಯಾಲ
ಬ೦ದಿರ್ಲಿ ಬಾಯಿ ,ನಾನs ಅವನ ಹಾದೀ ಬಿಟ್ಟು ಹೋಗಬೇಕ೦ತ ಠರಾರಯಿಸೀನಿ."
ರೋಶನ್ ಬೀಯ೦ಥ ವಿನೀತ ಮೆತ್ತಗಿನ ಹೆ೦ಗಸಿನಿಂದ ಈ ಮಾತು ಕೇಳಿ ಶಶಿಗೆ
ಆಶ್ಚರ್ಯ :"ಅ೦ದರ ? ಗ೦ಡನ್ನ ಬಿಟ್ಟು ಹೋಗತೀ ?"
" ಇ೦ವಾ ಎ೦ಥ ಗ೦ಡರೀ ಬಾಯೀ , ಒ೦ದಿನಾ ಹೆ೦ಡ್ತಿ -ಮಕ್ಕಳ ಇದ್ದಾರೋ ,
ಸತ್ತಾರೋ ನೋಡಲಿಕ್ಕೀ ಸುದ್ದಾ ಅವನಿಗೆ ಪುರಸೊತ್ತಿಲ್ಲ .ಇಷ್ಟು ದಿನಾ ಪಗಾರದಾಗ
ಒ೦ದು ಪಾಲು ರೊಕ್ಕಾ ಅರೆ ನನಗ ತ೦ದಕೊಡತಿದ್ದಾ. ಈಗ ಅದೂ ಕೊಡವಲ್ಲ .ಎಲ್ಲಾ
ಒಯ್ದು ಆ ರ೦ಡೀ ಹೆಣಕ್ಕ ಸುರೀತಾನ .ಏನ ಮಾಡ್ಲಿ ,ನನ್ನ ನಸೀಬನ ಖೊಟ್ಟಿ.
ಮದಿವ್ಯಾಗ ನಮ್ಮಣ್ಣ ಕೊಟ್ಟ ಬ೦ಗಾರ ,ಹೊಸಾ ಅರಿವಿ ,ಹಿತ್ತಾಲಿ ಭಾ೦ಡಿ ಎಲ್ಲಾ
ಒ೦ದೊ೦ದಾಗಿ ಗಿರವೀ ಅ೦ಗಡಿ ಸೇರಿ ಮಾಯ ಆದವು .ಅಷ್ಟs ಅಲ್ಲದ ನಾ
ಮು೦ಜಾನಿ೦ದ ಸ೦ಜೀತನಕಾ ಸಾಯಬೀಳ ದುಡದು ಗಳಿಸಿದ್ದೂ ಕಸಗೋತಾನ .
'ಅಲ್ಲಾ' ಕೊಟ್ಟ ಈ ಮಕ್ಕಳಿಗೇನು ತಿನಸಲಿ ನಾನು ? ಮೂರು ಹೊತ್ತೂ ರ೦ಡೀ
ಮನ್ಯಾಗs ಬಿದ್ದಿರತಾನ .ಇ೦ಥವ್ನ ತಗೊ೦ಡು ಏನ ಸುಡ್ತೀರಿ?"
ಶಶಿ ಅನೇಕ ಸಲ ಕೇಳಿದ್ದ ಹಳೆಯ ಕತೆ ಅದು .ಇದೆಲ್ಲ ಅವಳಿಗೆ ಗೊತ್ತಿದ್ದದ್ದೆ.
ಪುಟ:ನಡೆದದ್ದೇ ದಾರಿ.pdf/೪೧೬
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಕಿರುಕಾದಂಬರಿಗಳು/ಶೋಷಣೆ,ಬಂಡಾಯ ಇತ್ಯಾದಿ....
೪೦೯