ಪುಟ:ಇಂದ್ರವಜ್ರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೇಳನೆಯ ಪ್ರತಿಮೆಯು ಈ ಕೆಳಗಣ ಕಥೆಯನ್ನು ವಿಸ್ತರಿಸಿತು. (ಒಬ್ಬ ರಾಜನು ವಿಕ್ರಮನಿಗಿಂತಲೂ ಐಶ್ವರ್ಯಶಾಲಿಯಾಗ ಬೇಕೆಂದೂ, ಅದರಿಂದ ಪರೋಪಕಾರಮಾಡಿ ವಿಕ್ರಮನಿಗಿಂತಲೂ ಕಿರ್ತಿಶಾಲಿಯಾಗಬೇಕೆಂದೂ ಬಯಸಿ, ಒಬ್ಬ ದೇವತೆಯನ್ನು ಉ ಪಾಸನೆ ಮಾಡುತ್ತಿದ್ದನು. ಎಷ್ಟು ದಿನವಾದರೂ ಅವನ ಕೋರಿಕೆ ಯು ಕೈಗೂಡಲಿಲ್ಲ. ವಿಕ್ರಮನು' ಇದನ್ನರಿತು ಪಶ್ಚಾತ್ತಾಪಗೊಂ ಡು ಆ ರಾಜನಿದ್ದೆಡೆಗೆ ಬಂದು, ತಾನೇ ಆ ದೇವತೆಗೆ ಆಹುತಿಯಾ ಗಿ ಅಗ್ನಿ ಕುಂಡದೊಳಕ್ಕೆ ಇಳಿದನು ಕೂಡಲೆ ದೇವಿಯಕಣ್ಣಿದಿ ರಿಗೆ ಬಂದ'ಎಲೈಮಹಾಪುರುಷನೆ, ನಿನಗೇನು ಬೇಕು? ಎಂ ದಳು, ವಿಕ್ರಮನು ತಾಯಿ, ಈ ರಾಜನಿಗೆ ಪ್ರತಿನಿತ್ಯವೂ ಏಳು ಕೊಪ್ಪರಿಗೆಯಷ್ಟು ಧನವನ್ನು ಅನುಗ್ರಹಿಸು, ಎಂದು ಬೇಡಿದ ನು, ದೇವಿಯು ಅದಕ್ಕೆ ಸಮ್ಮತಿಸಿ ವಿಕ್ರಮನನ್ನು ಆಶೀರ್ವದಿಸಿ ಅಂತರ್ಧಾನವಾದಳು.' - ಭೋಹನು ಆಸ್ಥಳದಿಂದ ತೆರಳಿದನು. ಹದಿನೆಂಟನೆಯ ಸಾರಿ ಭೋಜನು ವಿಕ್ರಮಪೀಠದ ಬಳಿ ಸೇರಲು ಮತ್ತೊಂದು ಸಾಲಭಂಜಿಕೆಯು ಹೀಗೆಂದಿತು:- 'ವಿಕ್ರಮರಾಜನು ಒಂದಾವರ್ತಿ ಒಬ್ಬ ದೇಶಸಂಚಾರಿಯನ್ನು ಕಂದು ಅವನು ನೋಡಿದ ವಿಶೇಷಗಳನೆಂದು ಕೇಳಿದನು, ಅವ ನು ಹೀಗೆ ಬಿನ್ಮಯಿಸಿದನು: “ಉದಯ ಪರ್ವ ತದಲ್ಲಿ ಸೂರ್ಯ ನ ಅರಮನೆಯಿದೆ.ಅದರ ಪಕ್ಕದ ದೇವಗಂಗಾನದಿಯುಹರಿಯು