ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸುಶೀಲೆ

ಮಯೂರಿಯ ಮಾತಿಗೆ ವಿನೋದನು ಭಯದಿಂದ ಬೆದರಿ ನೋಡುತ್ತೆ - ಏನು? ಪೋಲೀಸರು ನನ್ನನ್ನು ಹಿಡಿಯಲು? ಹಾ - ಪೋಲಿಸರೆ?” ಎಂದು ಹೇಳುತಿದ್ದಂತೆಯೇ ಹಿಂದುಮುಂದು ನೋಡದೆ ಹಿತ್ತಿಲ ಕದವನ್ನು ತೆರೆದು ಹೊರಬಿದ್ದು ತಲೆತಪ್ಪಿಸಿಕೊಂಡು ಬಿಟ್ಟನು. ಮಯೂರಿ, ಓಡಿದನು - ಹಿತ್ತಲ ಕಡೆಯಿಂದ ಓಡಿದನು - ಹಿಡಿಯಿರಿ! - ಹಿಡಿಯಿರಿ!” ಎಂದು ಕೂಗಿ ಹೇಳಿ ಸುಶೀಲೆಯನ್ನು ಪಚರಿಸಲುದ್ಯುಕ್ತೆಯಾದಳು.

ಪೊಲೀಸ್ ಇನ್ಸ್ಪೆಕ್ಟರನ ಆಜ್ಞೆಯಂತೆ ಪೋಲಿಸು ಜವಾನರೂ ವಿನೋದನ ಬೆನ್ನಟ್ಟಿ ಹೋದರು.

ಆರ್ಯಭ್ರಾತ್ರುಗಳೇ!

ವಿನೋದನಂತಹ ಸುಖಬಾಹಿರರು ಎಷ್ಟೋ ಮಂದಿ ಈಗಲೂ ಇರಬೇಕಲ್ಲವೆ? ಅಂಥವರನ್ನು ಆವ ಧನ್ಯವಾದದಿಂದ ಸಂಸ್ತುತಿಸಿ ಧನ್ಯರಾಗು? ಹೋಗಲಿ, ಉಳಿದವರಾದರೂ ತಮ್ಮ ತಮ್ಮ ಸತೀಮಣಿಯರಲ್ಲಿ ಮುಳಿದು ಮನಬಂದಂತೆ ಮಾಡುವ ಕೆಟ್ಟ ಕೆಲಸಗಳನ್ನು ಬಿಟ್ಟು ಬಿಡಬಹುದಷ್ಟೆ? (ಹಾಗಾಗಲಿ)

——