ಪ್ರಸ್ತಾಪಿಸಿದನು. ದತ್ತನು ಕುಮಾರಿಗೆ ಅನುರಾಗವಿಲ್ಲದುದರಿಂದ ಈ
ವಿಚಾರವನ್ನು ಮಾನಸಿಕಮಾಡಬೇಕೆಂದು ತಿಳಿಸಲು ವಿಜಯವರ್ಮನು
ಉತ್ಸಾಹಹೀನನಾಗಿ ಹೊರಟುಹೋದನು. ದತ್ತನೂ ಆ ಯವ್ವನಸ್ಥರೊಡನೆ
ಮಾತನಾಡುತ್ತೆ ಉಪವನಾಭಿಮುಖನಾಗಿ ಹೊರಟುಹೋದನು.
ಆರನೆಯ ಪರಿಚ್ಛೇದ.
ವೈರಾಖಶುದ್ಧ ಪಂಚಮಿಯು ಕಮಲಕುಮಾರಿಯ ಹುಟ್ಟಿದದಿನ.
ಇಂದಿಗೆ ಅವಳು ಜನ್ಮಗ್ರಹಣಮಾಡಿ ಹದಿನೆಂಟುವರ್ಷಗಳಾದುವು. ದತ್ತನ
ಮನೆಯಲ್ಲಿ ಈ ಮಹೋತ್ಸವವು ಬಹು ವಿಜೃಂಭಣೆಯಿಂದ ನಡೆಯಿಸಲ್ಪ
ಟ್ಟಿತು. ದತ್ತನ ಬಂಧುಮಿತ್ರರೆಲ್ಲರೂ ಸಂತೋಷಸಮುದ್ರದಲ್ಲಿ ಮುಳುಗಿ
ತೇಲಾಡುತ್ತಿದ್ದರು. ಕೆಲಮಂದಿ ಫಲಿತಕೇಶಿಯರಾದ ಸ್ತ್ರೀಯರು ಒಂದೆಡೆ
ಯಲ್ಲಿ ಕುಳಿತುಕೊಂಡು ತಂತಮ್ಮ ಯವ್ವನಾವಸ್ಥೆಯಲ್ಲಿ ಅನುಭವಿಸಿದ
ಸಂತೋಷಪರಂಪರೆಗಳನ್ನು ಕುರಿತು ಮಾತನಾಡಿಕೊಳ್ಳುತ್ತಿದ್ದರು. ಮತ್ತೆ
ಕೆಲಮಂದಿ ಮಧ್ಯೆವಯಸ್ಕೆಯರಾದ ಮಾನಿನಿಯರು " ಇಂದಿರೆಗೆ ಬರೀಹೆಣ್ಣು
ಮಕ್ಕಳೇ ಆಗುವುವು " , " ಗೌರಿಯು ಹೆತ್ತ ಮಕ್ಕಳೊಂದೂ ಬದುಕುವುದೇ
ಇಲ್ಲ " , " ಲಕ್ಷ್ಮಿಯ ಗಂಡನು ಅವಳನ್ನು ಹಗಲಿರುಳೂ ಗೋಳಾಡಿಸುವನು '
ಎಂದು ಮುಂತಾಗಿ ಆಡಿಕೊಳ್ಳುತ್ತಿದ್ದರು. ಇನ್ನೂ ಕೆಲಮಂದಿ ಮುಗ್ಧೆ
ಯರು ' ಸರಸ್ವತಿಗೆ ಹದಿನಾಲ್ಕು ವರ್ಷಗಳು ತುಂಬುವುದಕ್ಕೆ ಮೊದಲೇ
ಗಂಡುಮಗುವಾಯಿತು ' , ' ಸಾವಿತ್ರಿಗೆ ಮದುವೆಯಾದ ಎರಡು ವರ್ಷಗಳೊಳ
ಗಾಗಿಯೇ ಸಂತಾನಪ್ರಾಪ್ತಿಯಾಯಿತು ' , 'ಗಂಗೆಯು ಮದುವೆಯಾದಮೇಲೆ
ಯೂ ಪಾಠಶಾಲೆಗೆ ಹೋಗಿ ಓದಿಕೊಳ್ಳುತ್ತಿರುವಳು, ' ಎಂದು ಮೊದಲಾಗಿ
ಚಿತ್ರವಿಚಿತ್ರಗಳಾದ ಪ್ರಸಂಗಗಳನ್ನು ಮಾಡುತ್ತಿದ್ದರು. ಆಕಸ್ಮಿಕವಾಗಿ
ಎಲ್ಲರೂ ಮೌನವನ್ನು ವಹಿಸಿದರು. ಎಲ್ಲರ ದೃಷ್ಟಿಯೂ ಇದಿರಾಗಿದ್ದ