ವಿಷಯಕ್ಕೆ ಹೋಗು

ಪುಟ:ಸಂತಾಪಕ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೬೦
ಕರ್ಣಾಟಕ ಚ೦ದ್ರಿಕೆ.

ವುಂಟಾಯಿತು. ಸೆರೆಮನೆಯ ಬಳಿಗೆ ಹೋದನು. ಅಲ್ಲಿ ಯಾರೂ
ಇರಲಿಲ್ಲ. ಅಲ್ಲಿಂದ ಪೂರ್ವಾಭಿಮುಖವಾಗಿ ಹೊರಟನು. ಎಲ್ಲಿಗೆ ಹೋಗ
ಬೇಕೋ ಏನು ಮಾಡಬೇಕೋ ತೋರಲಿಲ್ಲ. ಮುಂದೆ ಮುಂದೆ
ಹೋದನು. ಉಭಯಪಾರ್ಶ್ವಗಳಲ್ಲಿಯೂ ತಮಾಲವೃಕ್ಷಗಳು ಸಾಂದ್ರ
ವಾಗಿ ಬೆಳೆದಿದ್ದುವು. ಸಂತಾಪಕನು ಆ ಮರಗಳ ಮಧ್ಯದಲ್ಲಿ ಪ್ರವೇಶಿಸಿ
ಸ್ವಲ್ಪ ದೂರ ಹೋಗುವುದರೊಳಗಾಗಿ ಯಾರೋ ಹಿಂದಣಿಂದ ಬಂದು
ಸಂತಾಪಕನ ಬೆನ್ನಮೇಲೆ ಬಲವಾಗಿ ಹೊಡೆದರು. ಸಂತಾಪಕನು ತನ್ನ
ಜನ್ಮದಲ್ಲಿ ಪ್ರತ್ಯರ್ಥಿಯಿಂದ ಪೆಟ್ಟು ತಿಂದುದು ಇದೇ ಮೊದಲು. ಅವನಿಗೆ
ಬಹುಕೋಪವುಂಟಾಯಿತು. ತತ್‌ಕ್ಷಣವೇ ಸಮೀಪದಲ್ಲಿದ್ದ ಈಟಿಯನ್ನು
ಹೊರಕ್ಕೆ ತೆಗೆದು ಆಗಂತುಕನ ಎದೆಗೆ ತಿವಿದನು. ಈಟಿಯು ಎದೆ
ಯಿಂದ ಹೊರಟು ಬೆನ್ನನ್ನು ಭೇದಿಸಿಕೊಂಡು ಹೋಯಿತು. ಆಗಂತು
ಕನು " ಹಾ ಸಂತಾಪಕ ! ಮಿತ್ರ " ಎಂದು ಕೂಗಿ ನೆಲಕ್ಕೆ ಬಿದ್ದನು.
ಸಂತಾಪಕನಿಗೆ ಎದೆಯು ನಡುಗಿತು. ಪಾಠಕಮಹಾಶಯ ! ಈ ಅಪರಿ
ಚಿತನು ಯಾರೆಂಬುದು ನಿಮಗೆ ತಿಳಿಯದೇನೋ ? ಸಂತಾಪಕನಿಗೇನೋ
ತಿಳಿದುಹೋಯಿತು. ಅವನ ಕಂಠಸ್ವರವು ಚಿರಪರಿಚಿತವಾದುದಾಗಿ
ದ್ದಿತು. ಆಕಾರವೂ ಮಾತುಗಳೂ ಅವನೇ ನಂದಕುಮಾರ ಮಿತ್ರ
ನೆಂದು ಸ್ಪಷ್ಟೀಕರಿಸಿದುವು. ಸಂತಾಪಕನನ್ನು ಸೆರೆಯಿಂದ ಬಿಡಿಸಿದ ಮೇಲೆ
ನಂದಕುಮಾರನು ಸಂತೋಷಪ್ರದರ್ಶನಾರ್ಥವಾಗಿ ಸುರಾದೇವಿಯ ಅರ್ಚನೆ
ಯನ್ನು ಮಾಡಿ ಅವಳ ಅನುಗ್ರಹಕ್ಕೆ ಪಾತ್ರನಾದನು. ಸುರಾದೇವಿಯು
ನಂದಕುಮಾರ ಮಿತ್ರನ ಮನಸ್ಸನ್ನು ಸೂರೆಗೊಂಡಿದ್ದಳು. ಆದುದರಿಂದಲೇ
ಅವನು ಸಂತಾಪಕನನ್ನು ಒಬ್ಬ ಪಥಿಕನೆಂದು ಭ್ರಮಿಸಿ ಅವನನ್ನು ತಡೆದು
ಪೆಟ್ಟುತಿಂದು ನೆಲಕ್ಕೆ ಬಿದ್ದನು. ಸುರಾದೇವತೆಯು ತನ್ನ ಕಾರ್ಯ ಕೈ
ಗೂಡಿತೆಂದು ನಿಶ್ಚಯಿಸಿ ನಂದಕುಮಾರಮಿತ್ರನನ್ನು ಬಿಟ್ಟಳು ಅವನ
ಹೃದಯವನ್ನು ಬಿಟ್ಟು ಮೇಲೆ ಬರುವಾಗ ಅವನ ಪ್ರಾಣವಾಯುವನ್ನೂ
ಹೃದಯಪಂಜರದಿಂದ ಹೊರಕ್ಕೆ ತಂದಳು. ನಂದಕುಮಾರನ ಈ ಅವಸ್ಥೆ
ಯನ್ನು ನೋಡಿ ಸಂತಾಪಕನು ಅವನನ್ನು ಕಿಂಶುಕಾಟವಿಗೆ ಎತ್ತಿಕೊಂಡು
ಹೋಗಬೇಕೆ೦ದಾಲೋಚಿಸುತ್ತಿದ್ದನು. ನಂದಕುಮಾರನ ಪ್ರಜ್ಞಾಶಕ್ತಿಯು