ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ಪರಿಸ್ಥಿತಿಯೂ (ಇಂಫರ್ ಫೋರೇಟ್ ಏನಸ್) ಒಂದಿದೆ. ಮಗು ಜನಿಸಿದ ಕೆಲವು ತಾಸುಗಳಾದರು ಮಲವಿಸರ್ಜನೆ ಮಾಡದಿದ್ದರೆ, ಗುದದ್ವಾರವನ್ನು ಸರಿಯಾಗಿ ಪರೀಕ್ಷಿಸಬೇಕು. ಕೆಲಸಾರಿ ಸೂಜಿಮೊನೆ ಗಾತ್ರದ ರಂಧ್ರವಿರಬಹುದು, ಇಲ್ಲವೇ ಆ ಭಾಗ ಜರ್ಮದ ಪೊರೆಯಿಂದ ಮುಚ್ಚಿಕೊಂಡಿರಬಹುದು. ಈ ಪರಿಸ್ಥಿತಿಯಲ್ಲಿ ಹಲವು ನಮೂನೆಯವಿದ್ದು, ವಿವಿಧ ಹಂತಗಳಲ್ಲ ಶಸ್ತ್ರಜಿಕಿತ್ಸೆ ಜರುಗಿಸಿ ಅವನ್ನು ಸರಿಪಡಿಸಬಹುದು.

   ವಯಸ್ಕರಲ್ಲಿ : ಕರುಳಿನ ಭಿತ್ತಿಯ ಹೊರವಲಯದಲ್ಲಿ ಕೆಲವು ಗೆಡ್ಡೆ ಅಥವಾ ಇನ್ನಾವುದೇ ತರಹೆಯ ಒತ್ತಡ ಉಂಟುಮಾಡಿದಾಗ, ಅದರ ಒಳಾವರಣ ಭಾಗಶಃ ಇಲ್ಲವೆ ಪೂರ್ತಿಯಾಗಿ ಮುಚ್ಚಿಕೊಳ್ಳಬಹುದು. ಇದರಿಂದ ಆಹಾರದ ಶಿಲುಕು ಮುಂದುವರಿಯುದಕ್ಕಾಗದೆ ಕರುಳು- ತಡೆಯ ಲಕ್ಷಣಗಳು ಪ್ರಕಟವಾಗಬಹುದು.ಕರುಳಿನ ಒಂದು ಸುರುಳಿ ಮತ್ತು ಅದರ ಲಗತ್ತಿನ ನಡು - ಪರೆ ಅವುಗಳ ಸಹಜ ತಿರುವಿನ ವಿರುದ್ಧ ದಿಕ್ಕಿಗೆ ಅಕಸ್ಮಾತ್ತಾಗಿ ಒಂದೆರೆಡು ಸುತ್ತು ತಿರುವಿಕೊಳ್ಳುವುದುoಟು.ಈ ಪರಿಸ್ಥಿತಿಗೆ "ಸುರುಳ್ಗರಳು"(ವಾಲ್ವೊಲೋಸ್) ಎಂದು ಹೆಸರು. (ಚಿತ್ರ ೨೦) ಕರುಳ್ನಡು ಪರೆ ತಿರುವಿಕೊಂಡಾಗ ಅದರ