ಪುಟ:ಪ್ರೇಮ ಮಂದಿರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, +- , + + +++ ++ ಭೈರವಿಯು ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಗಂಭೀರಸ್ವರದಿಂದ ಮಾತನಾಡಿ ದಳು. ಈ ವತ್ತೇ, ಹಾಗಾದರೆ ಆ ಸಂಗತಿಯನ್ನು ಹೇಳಿದ ಹೊರತು ಗತ್ಯಂತರವೇ ಇಲ್ಲ ದಾಯಿತು. ನಾನು ನಿನ್ನಿನ ರಾತ್ರಿಯನ್ನೆಲ್ಲ ನಿನ್ನ ಸಂಬಂಧದ ಗಣಿತವನ್ನು ಮಾಡುವುದ ರಲ್ಲಿಯೇ ಕಳೆದೆನು. ” ಲಲಿತೆಯು ಉತ್ಸುಕತೆಯಿಂದ ನಡುವೆ ಮಾತನಾಡಿದಳು. ( ತಾಯಿ ನನ್ನ ಮೇಲೆ ತಮ್ಮ ಉಪಕಾರವು ಬಹಳವಾಯಿತು ! ” ಭೈರವಿಯು ಸ್ನೇಹಭರದಿಂದ ಮಾತನಾಡಿದಳು. “ ಲಲಿತೇ, ಇದರಲ್ಲಿ ನನ್ನ ಉಪ ಕಾರವೇನು? ನಿನ್ನಂತಹ ಸದ್ದು ಣಿಯಾದ ಸುವರ್ಣಲಕ್ಷ್ಮಿಯ ಮೇಲೆ ಯಾರ ಪ್ರೇಮವು ತಾನೆ ಕೂಡ್ರಲಿಕ್ಕಿಲ್ಲ ? ?” ಲಲಿತೆಯು ಸ್ವಲ್ಪ ನಾಚಿದಳು. ಮತ್ತು ಇಂತು ಮಾತಾಡಿದಳು. ( ತಾಯಿಯ ಪರೇ, ಇರಲಿ; ಮೊದಲು ತಮ್ಮ ಗಣಿತದ ಫಲಿತಾಂಶವನ್ನು ನನಗೆ ಹೇಳಿರಿ. ? « ಲಲಿತೇ ! ಕರುಣಸಿಂಹಲಲಿತೆಯರ ಪ್ರೇಮಮಿಲನವು ಕೊನೆಯಲ್ಲಿ ಆಗತಕ್ಕ ದ್ದೆಂದೇ ನನಗೆ ಕಂಡುಬಂತು- ?? ರಾಜಕನೆಯು ಆನಂದದಿಂದ ಮಾತನಾಡಿದಳು. “ ಹೀಗೆಯೋ ? ಹಾಗಾದರೆ ಇದನ್ನು ಹೇಳುವುದಕ್ಕೆ ತಾವು ಇಷ್ಟೊಂದು ಹಿಂದೆಮುಂದೆ ಯಾಕೆ ನೋಡುತ್ತಿದ್ದಿರಿ? ” ಭೈರವಿಯು ಗಂಭೀರಸ್ವರದಿಂದ ಮಾತನಾಡಿದಳು. “ ಅಷ್ಟೊಂದು ತ್ವರಾಯುತ ಳಾಗಬೇಡ. ನಾವು ಹೇಳುವುದನ್ನೆಲ್ಲ ಮೊದಲು ಲಕ್ಷಗೊಟ್ಟು ಕೇಳು. ನಿಮ್ಮಿಬ್ಬರ ಮಿಲನವಾಗುವುದೇನೋ ನಿಜ. ಆದರೆ ಅದರ ಪರಿಣಾಮವು ಸುಖಕರವಾದೀತೆಂಬಂತೆ ತೋರುವುದಿಲ್ಲ! ?” ಭೈರವಿಯ ಈ ಭವಿಷ್ಯವಾಣಿಯಿಂದ ಲಲಿತೆಯ ಹೃದಯಕ್ಕೆ ಪೆಟ್ಟು ತಗಲಿತು. ಆದರೆ ಅವಳು ಇಂತಹ ಆಘಾತವನ್ನು ಸಹಿಸಲು ಮೊದಲಿನಿಂದಲೂ ತನ್ನ ಮನಸ್ಸನ್ನು ಗಟ್ಟಿ ಮಾಡಿದ್ದಳು. ಆಕೆಯು ಭೈರವಿಯನ್ನು ಕೇಳಿದಳು. “ ಹಾಗಾದರೆ ತಾಯಿ, ಪರಿ ಣಾಮವು ಹೇಗಾಗುವುದು ? ” ” « ಹೇಗಾಗುವುದೆಂಬುದನ್ನು ನಾನೂ ಹೇಳಲಾರೆನು. ಆದರೆ ನಿಮ್ಮಿಬ್ಬರ ಮೇಲನ ದಿಂದ ಆವುದೋ ಒಂದು ಅಶುಭವು ಸಂಘಟಿಸುವುದರಲ್ಲಿ ಸಂದೇಹವಿಲ್ಲ !” ಲಲಿತೆಯು ಒಂದು ದೀರ್ಘನಿಶ್ವಾಸವನ್ನು ಬಿಟ್ಟಳು. ಕೆಲಹೊತ್ತಿನವರೆಗೆ ಅವರಿ ಬ್ಬರೂ ತಮ್ಮ ತಮ್ಮ ವಿಚಾರದಲ್ಲಿ ಮಗ್ನರಾಗಿದ್ದರು. ಅನಂತರ ರಾಜಕನ್ಯಯು ಮಾತ ನಾಡಿದಳು, « ತಾಯಿ, ತಮಗೆ ಇನ್ನೂ ಏನಾದರೂ ಹೆಚ್ಚಾಗಿ ತಿಳಿದುಬಂದಿತೋ? ”