ಪುಟ:ಸುವರ್ಣಸುಂದರಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುವರ್ಣಶೇಖರನು ತಲೆದೂಗಿದನು ಆ ದೈವಾಂಶ ಪುರುಷನು ಆತನನ್ನು ಕುರಿತು, < ಹಾಗಾದರೆ ನಿನಗೆ ಏತರಿಂದ ತೃಪ್ತಿಯಾಗು ವುದು ? ಎಲ್ಲಿ, ನೋಡೋಣ, ತಮಾಷೆಗಾದರೂ ಹೇಳು?' ಎಂದನು. ಸುವರ್ಣಶೇಖರನು ಹೇಳುವುದಕ್ಕೆ ಮನಸ್ಸು ಬಾರದೆ ಸ್ವಲ್ಪ ಕಾಲ ಸುಮ್ಮನಿದ್ದನು ಆದರೆ ಬಂದಿರುವ ಮಹಾತ್ಮನು ತನ್ನನ್ನು ಅನುಗ್ರಹಿಸುವುದಕ್ಕಾಗಿಯೇ ಹೀಗೆ ಹೇಳುತ್ತಿರಬಹು ದಂದು ಭಾವಿಸಿ, ಕಾಲಹರಣಮಾಡಿದರೆ ಸಮಯವು ತಪ್ಪಿ ಹೋದೀತೆಂದು ಚಿಂತಿಸುತ್ತ, ಕೇಳಲೇ, ಬೇಡವೇ ? ಹೇಗೆ ಕೇಳು ವುದು ? ಎಷ್ಟು ಬೇಕೆಂದು ಹೇಳುವುದು ? ಎಂದು ಸುವರ್ಣ ಶೇಖರನು ಡೋಲಾಯಮಾನಮಾನಸನಾಗಿದ್ದನು ಕಡೆಗೆ ಒಂದು ಒಳ್ಳೆಯ ಯೋಚನೆಯು ಆತನ ಮನಸ್ಸಿಗೆ ಹೊಳೆದು «ಇದಾದರೆ ಸರಿ, ಇದನ್ನೇ ಹೇಗಾದರೂ ಕೇಳಬೇಕು ಎಂದುಕೊಂಡು, ತಲೆಯನ್ನು ಎತ್ತಿ, ಅಪರಿಚಯಕ್ಷನ ಮುಖವನ್ನೇ ನೋಡಲಾ ರಂಭಿಸಿದನು. ಆಗ ಆ ಮಹಾಪುರುಷನು ಸುವರ್ಣಶೇಖರನನ್ನು ಕುರಿತು, : ಏನಯ್ಯಾ, ಅರಸೆ, ಕಡೆಗೆ ಏನೋ ಒಂದು ತೃಪ್ತಿ ಕರವಾದ ತೀರ್ಮಾನವನ್ನೆ ಮಾಡಿದಂತಿರುವೆ, ಅದೇನು ? ನಿನ್ನ ಇಷ್ಟವನ್ನು ತಿಳಿಸು, ಎಂದನು ಅದಕ್ಕೆ ಸುವರ್ಣಶೇಖರನು ಎಲೈ ಮಹಾತ್ಮನ, ವಿಶೇಷವೇನೂ ಇಲ್ಲ ಇಷ್ಟೊಂದು ಕಷ್ಟ ಪಟ್ಟುಕೊಂಡು ಈ ಚಿನ್ನವನ್ನು ಕೂಡಿಹಾಕುವುದು ನನಗೆ ಒಹು ಬೇಸರವಾಗಿದೆ. ಇಷ್ಟಾಗಿಯೂ ಕೂಡಿಹಾಕಿರುವ ರಾಶಿಯೂ ಸ್ವಲ್ಪ.. ನಾನು ಮುಟ್ಟಿದುದೆಲ್ಲವೂ ಚಿನ್ನವಾಗುತ್ತ ಹೋದರೆ ಸಾಕು” ಎಂದನು. ಇದನ್ನು ಕೇಳಿ ಆ ಮಹಾತ್ಮನು ಮುಗುಳುನಗೆ ನಕ್ಕು, « ಸುವರ್ಣಸ್ಪರ್ಶವೆ : ಶಹಬಾಸ್ , ಸುವರ್ಣಶೇಖ ರನೆ, ಶಹಬಾಸ್ ! ಒಳ್ಳೆಯ ಯೋಚನೆಯನ್ನೇ ಮಾಡಿದೆ ಇಂತಹ ಯೋಚನೆಯ ಹೊಳೆದುದು ಅಸಾಧಾರಣವೇ ಸರಿ.