ಪುಟ:ಸುವರ್ಣಸುಂದರಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಸುವರ್ಣಶೇಖರನು ಒಂದೊಂದು ಗಿಡದ ಸವಿಾಪಕ್ಕೂ ಹೋಗಿ ಕಣ್ಣಿಗೆ ಬಿದ್ದ ಒಂದೊಂದು ಹೂವನ್ನೂ ಕಯಿಂದ ಮುಟ್ಟು ದ್ದನು, ಸುವರ್ಣಶೇಖರನು ಮುಟ್ಟಿದ ಪ್ರತಿಯೊಂದು ಮಗ್ಗ, ಹೂ ಸಹ ಒಳಗಿರುವ ದುಂಬಿಗಳೊಂದಿಗೆ ಚಿನ್ನದ ಪುಷ್ಪಗಳಾಗಿ ಹೋದವು ! ಹೀಗೆ ಸುವರ್ಣಶೇಖರನು ಗಿಡದಿಂದ ಗಿಡಕ್ಕೂ ಒಳ್ಳಿಯಿಂದ ಬಳ್ಳಿಗೂ ಹೋಗುತ್ತಿರುವಾಗ ಪ್ರಾತಃಕಾಲದ ಭೋಜನದ ವೇಳೆ ಯಾಯಿತು ಅದಕ್ಕೆ ತಕ್ಕ ಹಾಗೆ ಸುವರ್ಣ ಶೇಖರನಿಗೂ ಒಳ್ಳೆಯ ತಂಗಾಳಿಯಲ್ಲಿ ಅಲೆದಲೆದು ಹಸಿವೂ ಅಧಿಕವಾಗಿದ್ದಿತು. ಆದುದ ರಿಂದ ಆತನು ಕೂಡಲೆ ಅರಮನೆಗೆ ಹೊರಟನು ನಾಲ್ಕನೆಯ ಪ್ರಕರಣ, ಸುವರ್ಣಶೇಖರನು ಹೋಗುವ ಹೊತ್ತಿಗೆ ಎಲ್ಲವೂ ಬಡಿಸಿ ಸಿದ್ದವಾಗಿದ್ದಿತು ಆತನು ಎಲೆಯ ಮುಂದೆ ಕುಳಿತು ತನ್ನ ಪುತ್ರಿಗಾ ಗಿಯೇ ಇದು ರು ನೋಡುತ್ತಿದ್ದನು ಸುವರ್ಣ ಸ್ಪರ್ಶವನ್ನು ಪಡೆದ ಸುವರ್ಣಶೇಖರನಿಗೆ ಪ್ರತಿ ದಿವಸಕ್ಕಿಂತಲೂ ಆ ದಿನ ಮಗಳ ಮೇಲೆ ಮಮತೆ ಮತ್ತಷ್ಟು ಹೆಚ್ಚಾಗಿದ್ದಿತು ಆ ಹೊತ್ತಿಗೆ ಸರಿಯಾಗಿ ಸುವರ್ಣಸುಂದರಿ ಅಳುತ್ತ ತಂದೆಯ ಸವಿಾಪಕ್ಕೆ ಬಂದಳು. ಇದುವರೆಗೆ ತನ್ನ ಪುತ್ರಿಯು ಅತ್ತುದನ್ನೇ ಕಾಣದ ಸುವರ್ಣ ಶೇಖರನಿಗೆ ಬಹಳ ಆಶ್ಚರ್ಯವಾಯಿತು ಮಗಳು ಒಂದಕೂಡಲೆ ಅವಳನ್ನು ಸಮಾಧಾನಮಾಡಲೆತ್ನಿ ಸಿ, ಅವಳ ಕೈಲಿದ್ದ ಗಾಜಿನ ಬಟ್ಟಲನ್ನು ಮುಟ್ಟಿದನು ಅದು ಕೂಡಲೆ ಚಿನ್ನದ ಬಟ್ಟಲಾಯಿತು | ಏನೇನು ಮಾಡಿದರೂ ಸುವರ್ಣಸುಂದರಿಗೆ ಸಮಾಧಾನ ವಾಗಲಿಲ್ಲ ಆಗ ೨ರಸು, “ ಮಗು, ಇದೇನು ಎಂದೂ ಇಷ್ಟು ಹಟಮಾಡಿದವಳಲ್ಲವಲ್ಲಾ ! ಇದೇಕೆ ಇಷ್ಟು ಅಳುವೆ? " ಎಂದು