೨೧೪ ರಾಮಚಂದ್ರಚರಿತಪುರಾಣಂ ಮತಲವರ್ಗಪಾಯಮಂ ಬಗೆದ ಬೇಡಂ ವಿಗತಾಸು ದುರಂತ ದುರ್ಗತಿ ಯೊಳ್ ತೊಅಲ್ವೆಂತಾನುಂ ಮನುಷ್ಯ ಗತಿವೆತ್ತು ತಾಪಸನಾಗಿ ಸತ್ತಾತಂ ಜ್ಯೋತಿ ರ್ಲೋಕದೊಳಗ್ನಿ ಪ್ರಭನೆಂಬ ದೇವನಾದನಿತ್ತ ಭರತಕ್ಷೇತ್ರದಂಷ್ಟ ಪುರಮನಾಳ್ವ ಪ್ರಿಯ ವ್ರತಮಹೀಭುಜಂಗೆ ಪದ್ಮಾವತಿಯುಂ ಕನಕಾಭ್ಯುಮೆಂಬರಿರ್ವರರಸಿಯರಾದರಲ್ಲಿ ಪದ್ಮಾವತಿಗೆ ಮುನ್ನ ಮಮರಗತಿವಡೆದುದಿತಾನುದಿತರಿರ್ವರುಂ ಬಂದು ರತ್ನರಥ ವಿಚಿತ್ರರಥರೆಂಬ ತನಯರಾದರಾ ಜ್ಯೋತಿ ಹೈನಲ್ಲಿಂ ಬಂದು ಕನಕಾಭೆಗೆ ತನೂಭವ ನನುಂದರನೆಂಬನಾದನಾ ಪ್ರಿಯವ್ರತನುಂ ತನ್ನ ಮಕ್ಕಳ್ಳರಸುತನಮಂ ಕೊಟ್ಟು ತೊರೆದಾಯುದಿವಸಂ ಸಂನ್ಯಸನಂಗೆಯ್ದು ಸಮಾಧಿ ಮರಣದಿಂ ಸ್ವರ್ಗಕ್ಕೆ ಪೋದನಿತ್ತ ಲರಸುಮಗನೊರ್ವ೦ ನಿಜತನೂಭವಯಂ ಶ್ರೀ ಪ್ರಭೆಯಂ ರತ್ನರಥಂಗೆ ಮದುವೆ ಮಾಚ್ಛೆನೆಂದಿರ್ಪುದುಮಾಕೆಯನನುಂದರಂ ತನಗೆ ಬೇಡಿ ಪಡೆಯದೆ ಕೂಸುಗುಡ ದಾತನಮೇಲೆತ್ತಿ ಬರ್ಪುದುಂ ರತ್ನರಥನುಂ ವಿಚಿತ್ರರಥನುಂ ಕೇಳು ಮುಳಿದು ದಾಳಿಯಿಟ್ಟು ಸುತ್ತಿ ಮುತ್ತಿ ಕಂ| ಪಿಡಿದು ಪರಿಭವಿಸಿ ಕೊಲ್ಲದೆ ಕಡಂಗಿ ಪೊಅಮಡಿಸಿ ಕಳೆದು ನಾಡಿಂ ದೈನ೦ || ಬಡಿಸಿದೊಡನುಂದರಂ ಬ ಿಡಿದೇವದನುಗ್ರಕೋಪಿ ತಾಪಸನಾದಂ 11 ೫೬ || ಇತ್ತಲಾ ರತ್ನರಥ ವಿಚಿತ್ರರಥ ಚಿರಕಾಲಮರಸುಗೆಯುತಿರ್ದು ವೈರಾಗ್ಯದಿಂ ತೊಳೆದು ತಪಂಗೆಯ್ದು ಶರೀರಭಾರಮನಿಸಿಪಿ ನಾಕಲೋಕ ಸುಖಮನನುಭವಿಸಿ ಬಂದು ಸಿದ್ದಾರ್ಥನಗರಮನಾಳ ಕ್ಷೇಮಂಕರ ನರೇಂದ್ರಂಗಂ ವಿಮಲಾದೇವಿಗಂ ದೇಶಭೂಷಣ ಕುಲಭೂಷಣರೆಂಬ ತನಯರಾಗಿರ್ಪುದುಮೆಮ್ಮನೆಮ್ಮ ತಂದೆ ವಿದ್ಯಾ ಭ್ಯಾಸ ನಿಮಿತ್ತಂ ಮತ್ತೊಂದು ಪುರದೊಳಿರಿಸೆ ಸಕಲವಿದ್ಯೆಗಳುಮಂ ಸಾಗರಘೋಷ ರೆಂಬುಪಾಧ್ಯಾಯ ಕಲಿಸೆ ಕಲ್ಲು ಗುರುಗೃಹಾಗಮನ ಪೂಜಾನಂತರಂ ಮಹಾ ವಿಭೂತಿಯಿನೆಮ್ಮ ಪುರಮಂ ಪುಗುವ ಸಮಯದೊಳ್ ಕೈಗೆಯು ಕರುನಾಡದ ಮೇಲಿರ್ದ ಕನ್ನೆಯಂ ಕಂಡೆಮಗೆ ಪರಿಣಯನಕ್ಕೆ ತಂದರಸುಮಗಳೆಂದು ಬಗೆದು ಬಯಸಿ ನೋಡುತ್ತರಮನೆಯಂ ಪೊಕ್ಕೆ ಮೊಡವುಟ್ಟ ದಳೆಂದ ಅದು ಪೊಲ್ಲದಂ ಬಗೆದೆ ವೆಂದು ಅದುವೆ ನಿರ್ವಗ ನಿಮಿತ್ತವಾಗೆ ತೋಜಿದು ತಪಂಬಟ್ಟು ಚಾರಣ ಖುದ್ದಿ ವಡೆದು ಪೋಗಿಡಮೆಮಗೆ ಅ೦ಜನ್ಮದೊಳಂ ಜನಕನಾದ ನಿರತಿ ಶಯ ಪ್ರೇಮಾನುಬಂಧದಿಂ ಕ್ಷೇಮಂಕರ ಮಹಾರಾಜನೆಮ್ಮದಿಗೆ ಸೈರಿಸಲಾರದೆ 1. ಬಲ್ವಿಡಿದೇವಮನುಗ್ರಕೋಪಿ. ಘ. ; ಬಲ್ವಡಿದೇವನುದಗ್ರ, ಈ, ಬಲ್ವಿಡಿದಿವಮನುಜಗ್ರ, ಚ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೪
ಗೋಚರ