ದ್ವಾದಶಾಶ್ವಾಸಂ ೩೭೫ ಅಂತು ' ಸಮುದ್ರಮಂ ದಾಂಟ ಲಂಕಾಭಿಮುಖರಾಗಿ ಪಯಣಂಬೋಗಿ ವಿಂಶತಿ ಯೋಜನ ವಿಸ್ತಾರಮುಂ ತ್ರಿಂಶದ್ರೋಜನಾಯಾಮಮುಮಪ್ಪ ರಣಭೂಮಿ ಯಂ ಕೈಕೊಂಡಿರ್ಪುದುಂ ಕಂ || ಅವರವರ್ಗೆ ತಕ್ಕ ಮಣಿಮಯ ಭವನಮನಧಿರಾಜ ರಾಜಗೃಹಮಂ ಕಡೆಪ || ವರ್ಗೊಳಗಾಗಿರೆ ಸಂಧಿ ವಿದ್ಯೆಯಿಂ ಸ್ಥಪತಿ ಮಾಡಿ ಕೊಟ್ಟಂ ಬೀಡಂ || ೯೭ || ಗೃಹ ದೀರ್ಘಕೆಯಂ ಧಾರಾ ಗೃಹಮಂ ಗೃಹವನಮನುಪವನಂಗಳನಾರ್ಗ೦ || ಸ್ಪೃಹಣೀಯಮಾಗೆ ಪಲವಂ ಬಹುವಿದ್ಯಾ ಗೃಹಮಹತ್ತರರ್ ಸಮೆದಿತ್ತ || ೯೮ || ಅಂತು ಬೀಡಂಬಿಟ್ಟ ರಾಮಲಕ್ಷ್ಮಣರ ರಾಜಭವನಮಂ ಬಳಸಿ ಸುಗ್ರೀವ ಪ್ರಭಾಮಂಡಲ ಪ್ರಮುಖ ನಿಖಿಲ ಖಚರ' ಪರಿಬ್ಬಢರುಮಖಿಲ ಸೇನೆಯುಮನುರೂಪ ಭವನಂಗಳೊಳೆಡೆಯಅದು ಬೀಡಂಬಿಟ್ಟಿ ರ್ಪುದುಂ ಚ | ದಿವಿಜ ನದೀ ತರಂಗ ಧವಲಂ ನಿಜ ನಿರ್ಮಲಕೀರ್ತಿ ವಲ್ಲಿ ಭೂ | ಭುವನಮನಾವಗಂ ಪುದಿವಿನಂ ವಿಬುಧಾವಳಿಗಪ್ಪಿನಂ ಮಹೋ || ತೃವಮಧಿರಾಜ ಪೂಜ್ಯನಭಿರಾಮ ತೆಯಂ ತಳೆದಂ ಸರಸ್ವತೀ | ಶ್ರವಣ ವಿಭೂಷಣ ಪ್ರಥಿತ ವಾಗ್ವಿಭವಂ ಕವಿತಾಮನೋಹರಂ ೯೯ || ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖ ಕಿರಣ ಚಂದ್ರಿಕಾಚಕೋರ ಭಾರತಿ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರಚರಿತಪುರಾಣದೊಳ್ ಲಂಕಾದಿಗ್ವಿಜಯಪ್ರಯಾಣ ವರ್ಣನಂ ದ್ವಾದಶಾಶ್ವಾಸಂ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೫
ಗೋಚರ