೯೮
ವುದುಂ, ಬಿಸಿಲ್ಗು ದುರೆಯಂತೆ ಪೊಳೆದುಚ್ಚೈಶ್ಶ್ರವದಂತೆ ನಭಕ್ಕೆ ನೆಗೆದ ರವಿರಥ
ವಾಜಿಯಂತೆ ಪವನ ಪಥದೊಳ್ ಪರಿವುದುಂ--
ಕಂ||ತ್ರಿದಶಂ ಮೇಣ್ ಖಚರಂ ಮೇಣ್
ಕುದುರೆಯ ರೂಪಿಂದಮರಸನಂ ಮುನ್ನಿನ ಜ||
ನ್ಮದ ಪಗೆವನುಯ್ದನಂತ
ಲ್ಲದೊಡೆ ವಿಯದ್ಗಾಮಿಯಪ್ಪ ಕುದುರೆಗಳೊಳವೇ||೧೨೧||
ಎಂದು ಸಕಳ ಪರಿಜನಂ ವಿಕಳಮಾಗಿಯುಂ ನೈಮಿತ್ತಿಕನಿಂದರಸನ ಬರವ
ನರಿದುಮ್ಮಳಮನುಟದಿರ್ಪುದುಮಿತ್ತಲ್--
ಕಂ||ಎಡೆಯೆಡೆಯ ಬೆಟ್ಟನೆಡೆಯೆಡೆ
ಯಡವಿಯನೆಡೆಯೆಡೆಯ ನಾಡನೆಡೆಯೆಡೆಯೂರಂ||
ಮಿಡಿದನಿತು ಬೇಗದಿಂ ಕಳಿ
ದೊಡರಿಸಿದುದು ನೃಪತಿಗಾಹಯಂ ವಿಸ್ಮಯಮಂ||೧೨೨||
ಚ || ತ್ವರಿತದಿನೆಯ್ದೆವಂದು ಪುರಮಂ ರಥನೂಪುರಚಕ್ರವಾಳಮಂ|
ಪುರ ವನ ವೀಧಿಯೊಳ್ ನಡೆಯೆ ವಾಜಿ ವಿಳಂಬಿತದಿಂ ಧರಾಧಿಪಂ||
ಧರಣಿಗೆ ಪಾಯ್ದು ಕಯ್ಯ ಕರವಾಳಳಿಮಾಳೆ ಸರೋಜ ಕೋಶದೊಳ್|
ಮೊರೆಯದೆ ೧ನೀಳ್ದವೋಲಿರೆ ವಸಂತನನೇಳಿಸಿದಂ ವನಾಂತದೊಳ್||೧೨೩||
ಕಂ || ಇಡಿದಡರೆ ಕಾಯ್ತ ಮಾಮರ
ದಡಿಯೊಳ್ ವಿಶ್ರಮಿಸಿ ಪಥ ಪರಿಮ್ಲಾನತೆಯಂ||
ಕಿಡಿಸಿ ನರೇಂದ್ರಂ ತನ್ನೊಳ್
ನುಡಿದಂ ಸಂಸ್ಕೃತಿಯ ಕರ್ಮ ವಿಷಮ ಸ್ಥಿತಿಯಂ||೧೨೪||
ಅಮೃತಂ ವಿಷಮಕ್ಕುಂ ವ
ಕ್ರಮಾದೊಡಾವಿಷಮುಮಮೃತಮಕ್ಕುಂ ವಿಧಿವ||
ಕ್ರಮನುರಿದೊಡಂತೆ ಹಯಮೆ
ನ್ನುಮನಿಲ್ಲಿಗೆ ತಂದುದಿನ್ನವಘಟತಮೊಳವೇ ||೧೨೫||
ಆನೆಲದಿಂ ಮಾಯಾ ಹಯ
ಮಿಾನೆಲದತ್ತೆನ್ನನೆಳಿದು ತರ್ಪುದುಮಾಕ||
೧. ನಿಂದ.