೧೧೧
ಆಗಳಾಪುರೋಹಿತಾದೇಶದಿನನೇಕ ಮಂಗಳಾನಕ ನಿನದ ಮೊದನೆ ರಥವನೇರಿ-
ಕಂ || ರಮಣಿಯರೆರಡುಂ ಕೆಲದೊಳ್
ಚಮರರುಹಮನಿಕ್ಕೆ ಬೀತಿ ಬೆಳ್ಕೊಡೆ ಬೇರೊಂ ||
ದಮೃತಾಂಶುವನಾಕ್ಷಣದೊಳ್
ಹಿಮಾಂಶುಮುಖಿ ಮೆರೆದಳೀಕ್ಷಣಾಕರ್ಷಣಮಂ || ೪೭||
ಆಗಳಾಸ್ಯಂದನನ್ನಂ ಸುತ್ತಿ ಮುತ್ತಿ ಕುಂಚದಡಪದ ಡವಕೆಯ
ಕನ್ನಡಿಯ ಪರಿಚಾರಿಕೆಯರುಮೊಡನಾಡಿಗಳಪ್ಪಯೂ ರ್ವರ್ ಕನ್ನೆಯರುಂ ಮಂಗಳೋಪಕರಣ
ದೃಶ್ಯಂಗಳಂ ಪಿಡಿದು ನಡೆಯೆ-
ಚ || ಮದನ ಪತಾಕೆ ಚುಂಬಿಸೆ ವಿಯನ್ನುಖಮಂ ಸ್ಮರಚಾಪ ಟಂಕೃತಂ ।
ಪುದಿಯೆ ದಿಗಂತಮಂ ಕುಸುಮಸಾಯಕ ಸಾಯಕವುರ್ಚೆ ರಾಜಲೋ ||
ಕದ ಮನಮಂ ಮನೋಜ ವಿಜಯಾಂಗನೆ ಜಾನಕಿ ಪೊಕ್ಕಳಾ ಸಭಾ |
ಸದನ ಸುವರ್ಣ ಗೋಪುರವನೇ ಹಿರಣ್ಮಯಮಂ ವರೂಥಮಂ || ೪೮ ||
ಕಂ || ಕನ್ನೆಯರಖಿಲ ಕಲಾ ಸಂ
ಪನ್ನೆಯರಯೂಶ್ವರಲರ್ದ ತಾವರೆಗಳವೋಲ್ ||
ತನ್ನೊಡವರೆ ಬಂದಳ್ ಸಿರಿ
ಸನ್ನಿದಮಾದಂತೆ ಸೀತೆ ಕನ್ಯಾರತ್ನಂ || ||೪೯||
ಅ೦ತುಬಂದು-
ಚ | ಜನಕಜೆ ವಶ್ಯದೀಪ ಕಲಿಕಾಕೃತಿಯಿಂ ಪುಗೆ ತತ್ಸಭಾ ನಿಕೇ |
ತನ ಕುಸುಮೋಪಹಾರ ಮಣಿರಂಗಮನಂಗಣಮಂ ನರೇಂದ್ರನಂ ||
ದನರ್ಗೆ ಮನೋವಿಕಾರದೊಡನಂಗ ವಿಕಾರವದೇಂ ಪೊದಟ್ಟುದೋ |
ನನೆಕೊನೆಯೇಲುವಂತೆ ವನರಾಜಿ ಮಧು ಪ್ರಥಮ ಪ್ರವೇಶದೊಳ್ || ೫೦ ||
ಕ೦ || ಉದಯಿಸ ಶಶಿಕಳೆ ತೆರೆಮಸ
ಗಿದ ಪಾಲ್ಗಡಲಂತೆ ನೃಪಕುಮಾರ ಕದ೦ಬ೦ ||
ಸುದತಿ ಪುಗೆ ಸಭೆಯನೊಳಕೊ೦
ಡುದು ಮದನ ವಿಕಾರ ಚೇಷ್ಟೆ ಯಂ ಬಹುವಿಧವಂ ||೫೧ ||
ದಿನಲಕ್ಷ್ಮಿಯ ಪುಗಿಲೊಳ್ ಕೋ
ಕನದಾಕರ ನಿಕರಮೊಡನೆಸಲ್ಮಸಗುವವೋಲ್ ||