ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಷ್ಟಮಾಶ್ವಾಸಂ
೨೦೯



ಪುತ್ರನೊರ್ವ೦ ಕನ್ಯಾರ್ಥಿ ಬಂದನೆಂದು ನಿಮ್ಮರಸಂಗರೆಪೆಂದು ಪಡಿಯರನ
ನಟ್ಟುವುದುಮವಂ ಬಂದು ಬಿನ್ನವಿಸೆ ಬರವೇನೆಂಬುದುಂ_
ಕಂ|| ಸಿರಿಯ ಹರಿನೀಲ ವೇದಿಯ
ನುರಸ್ಥಲಂ ಬೀರಸಿರಿಯ ಮರಕತ ಮಣಿವಿ ||
ಷ್ಟರಮಂ ಭುಜದ್ವಯಂ ಪೋ
ಲ್ತಿರೆ ಪೊಕ್ಕಂ ರಾಜಸಭೆಯನಭಯನುಪೇಂದ್ರಂ||೩೮||

ಅಂತಂಜನ ದಿಕ್ಕುಂಜರದಂತೆ ಬರುತಿರ್ಪುದುಂ_
ಚ|| ತನು ಶುಭಲಕ್ಷಣಕ್ಕೆ ತವರಾದುದು ನೀಲನೆ ಕಂತುರಾಜನೀ |
ತನ ತೇಜದಿಂದಮಿಾತನೆ ಪೊಡರ್ಪಿನ ಶಕ್ತಿಗೆ ದರ್ಪಭಂಗಮಂ ||
ಜನಿಯಿಸಲಾರ್ಪನೆನ್ನಸುತೆಗೀತನೆ ವಲ್ಲಭನಕ್ಕುಮೆಂದು ಕ |
ಣ್ಮನದೊಡನೆಕ್ಕೆಯಿಂ ಪರಿಯೆ ನೋಡಿದನಾ ನೃಸನಬ್ಬ ನಾಭನಂ || ೩೯ ||

ಅಂತು ಬಂದು ನೃಪನ ಕೆಲದೊಳಿರ್ದ ಕನ್ಯಾರತ್ನಕ್ಕೆ ಮನಮೆಗೆಯು
ಮಾತಂಗೆ ಆಗದೆ ತನಗಿಕ್ಕಿದ ಮಣಿಮಯಾಸನದೊಳ್ ಕುಳ್ಳಿರ್ಪುದುಂ ಕುಮಾರನ
ನಿರುಪಮಾಕಾರಮಂ ನೋಡಿ ಕನ್ನೆ ಕಣ್ವೇಟಂಗೊಂಡು-

ಕಂ||ಜಿತಪದ್ಮ ಕಂತುಶರ ಪೀ
ಡಿತ ಚೇತಃಪದ್ಮ ಜನಕ ಶಸ್ತ್ರಾಹತಿಯಿ೦ ||
ಹತನಾದೊಡೀತನೀತನ
ಗತಿ ಗತಿಯೆನಗೆಂದು ಚಿತ್ತದೊಳ್ ತಳಿ ಸಂದಭ್ || || ೪೦ ||
ಆ ಸಮಯದೊಳ್ ಶತ್ರುಂದಮಂ ಸೌಮಿತ್ರಿಗಿಂತೆಂದಂ:-ನಿನ್ನ ಸಕಲಭುವ ನಾದೇಯಮಪ್ಪ ರೂಪಂ ನೋಡಿ ಮೊಗಂ ನೋಡದಮೋಘಶಕ್ತಿಯಿಂದಿಡಲೆನಗೆ ಬಗೆ ಬಂದಪುದಿಲ್ಲ; ನೀನೀ ಕನ್ನೆಯಾಸೆಯನುಟಿದು ಮಗು ಬಿಜಯಂಗೆಯ್ವುದೆನೆ_

ಕಂ||ನಿನ್ನಿಡುವ ಶಕ್ತಿಯಳವುದು
ನೆನ್ನಳವುಮನೀಗಳಿ೦ತೆ ತೋರ್ಪೆಂ ಬೇಗಂ ||
ತನ್ನಿ ಮೆನೆ ದೃಷ್ಟಿ ವಿಷಫಣಿ
ಸನ್ನಿಭಮಂ ಶಸ್ತ್ರಶಾಲೆಯಿಂದಂ ತಂದರ್ || ೪೧ ||

ಅಂತು ತಂದು ವಿವಿಧಾರ್ಚನೆಯಿನರ್ಚಿಸಿ ಮಂತ್ರಪೂತಂ ಮಾಡಿ ಶಸ್ರ್ರಮಂ
ಪಿಡಿದು ಸಮಾಹಿತಮತಿಯಾಗೆಂದನತಿದೂರದೊಳಿರಿಸಿ ಸರ್ವಶಕ್ತಿಯಿನಿಡುವುದುಂ-
____________________________________________________ 1. ಡೀತನಲ್ಲದೆ ಗತಿಯಿಲ್ಲೆನಗೆಂದು ಘ.

14