ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨
ರಾಮಚಂದ್ರಚರಿತಪುರಾಣಂ

     ಕ೦।। ಎನ್ನೊಡವಂದಂತಕನಂ
          ಬೆನ್ನಟ್ಟಲೊಡರ್ಚಿದಂ ಜಿತಾತ್ಮಂ ಸೆಡೆದಂ||
          ದೆನ್ನ ಜಸಮಳಿಗುಮೆನಗದೆ
          ಬನ್ನಂ ಬನ್ನಕ್ಕೆ ಬೇರೆ ಕೋಡೆರಡೊಳವೇ||೨೪||

     ಎಂದುದಯಸುಂದರನುಂ ಪರಿಚ್ಛೇದಿಸಿ ತನ್ನೊಡನೆ ತಪಕ್ಕೆ ತರಿಸಂದಿರ್ಪತ್ತು ಮೂವರರಸುಮಕ್ಕಳ್ ವೆರಸು ತಪೋನಿಧಿಯ ಸನ್ನಿಧಿಯೊಳ್ ಜಾತರೂಪಧರನಪ್ಪುದುಂ-
     
     ಕಂ|| ಅಗ್ರಜನೊಳಾದ ಜಿನದೀ
           ಕ್ಷಾಗ್ರಹಣಮನನುಜೆ ಕೇಳ್ದು ತಾನುಂ ಜಿನದೀ||
           ಕ್ಷಾಗ್ರಹಮಂ ಪಡೆದಳ್ ಲ
           ಬ್ದಿಗ್ರಹಣದಿಕೊಳ್ಪುವಡೆವುದೊಂದಚ್ಚರಿಯೇ||೨೫||

     ಅ೦ತು ಗುಣೋದೆಯುಂ ನಿರ್ಭರ ತಪೋಭರಮಂ ತಳೆದಳಿತ್ತಲ್ ವಿಜಯರಥ
ಮಹೀನಾಥಂ ತನ್ನ ಮೊಮ್ಮನಪ್ಪ ವಜ್ರಬಾಹುಕುಮಾರನ ತಪಃಪ್ರಪಂಚಮಂ ತಿಳಿದು-

ಚಂ|| ಮದುವೆಗೆ ಪೋಪುದೆತ್ತಗಿರಿಕಂದರದೊಳ್ ಮುನಿಯಂ ಮನಸ್ವಿ ಕ|
      ಟ್ಟಿದಿರೊಳೆ ಕಾಣ್ಬುದೆತ್ತದುವೆ ಕಾರಣಮಾಗೆ ಕಡಂಗಿ ಮೋಹಪಾ||
      ಶದ ತೊಡರಂ ಬಿದಿರ್ಚಿ ದೆಸೆಯಂ ತುವರಂ ನಿಜಕೀರ್ತಿಯಂ ನಿಮಿ
      ರ್ಚಿದನೆನೆ ವಜ ಬಾಹುವ ನೆಗಳ್ತೆ ಪೊಗಳ್ತೆಗಳುಳುಂಬಮಾಗದೇ||೨೬||

      ಕಂ|| ಯುವರಾಜ೦ ನವಯೌವನ
            ನವಯವದಿಂ ದೀಕ್ಷೆಗೊಡ್ಡಿದಂ ತನುವನಿದೇ||
            ನವಿಚಲನೊ ಕುಮಾರ೦ ಪೋ
            ಹವಿಷಾಹಿಯ ಕಾಲಕೂಟ ರದಮಂ ಕಳ್ತಂ||೨೭||
   
            ಕಿರುಗೂಸು ವಿಷಯ ಸುಖಮಂ
            ತೋರೆದು ತಪಂಬಟ್ಟನಿನ್ನೆವರಮಳಿಪಿಂದಾಂ||
            ಮರೆದಿರ್ದೆನೆಂದು ತಂದಂ
            ತರಿಸಲವಂ ತನ್ನ ಚಿತ್ತದೊಳ್ ವಿಜಯರಥಂ||೨೮||

      ಅ೦ತು ವಿಜಯರಥನರೇಂದ್ರಂ ನಿಜತನೂಜನಪ್ಪ ಸುರೇಂದ್ರ ಮನ್ಯುವೆರಸು


೧. ಯಿಂಟು. ಗ.
೨. ನವಕಲನೊ.ಚ.