೪೮
ಕೊಂಡು ಲೆಪ್ಪದರಸನಂ ಕರುಮಾಡದೆರಡನೆಯ ನೆಲೆಯೊಳಿರಿಸಿ ಪರಿಜನಮುಂ
ತಾನುಮೋಲಗಿಸುತ್ತಿರೆ---
ಕಂ|| ಜನಕನ ಮಂತ್ರಿಯುಮೀ ಕ್ರಮ
ದಿನನುಷ್ಥಿಸಿ ಕಳಿಪೆ ಜನಕನುಂ ದಶರಥನುಂ||
ದಿನಕರನುಂ ಹಿಮಕರನುಂ
ಘನಾಘನಾ೦ತರಿತರಾದರೆನೆ ತಲೆಗರೆದರ್||೨೭||
ಅನ್ನೆಗಮಿತ್ತ ವಿಭೀಷಣಾದೇಶದಿಂ ಬಂದ ತೀಕ್ಷ್ಣ ಪುರುಷರ್ ಪುರಮಂಪೊಕ್ಕು ಕರುಮಾಡಮಂ ಪುಗಲ್ಪಡೆಯದೆ ತಡೆದಿರ್ಪುದುಂ---
ಉ|| ಅಟ್ಟಿದ ಜಟ್ಟಿಗರ್ತಡೆದುದರ್ಕೆ ಕನಲ್ದು ವಿಭೀಷಣಂ ಮುಗಿ|
ಲ್ವಟ್ಟೆಯಿನಟ್ಟ ತಿ೦ಬ ಜವನಂ೧ತಿರಯೋಧ್ಯೆಗೆ ಬಂದು ಪೊಕ್ಕು ಪೊ೦||
ಬೆಟ್ಟ ಮೆನಿಪ್ಪ ಪೊನ್ನ ಕರುನಾಡಮನ೦ದಿರುಳಲ್ಲಿ ಕಂಡು ಕ|
ಣ್ಮುಟ್ಟಿನೊಳಿರ್ದ ಲೆಪ್ಪದರಸಂ ಕೊಲವೇಳಿ ನಸಾರ ಚೇತನಂ||೨೮||
ಅಂತುಪೇಳ್ವುದುಂ---
ಕಂ|| ಬೆಸನಂ ವಿದ್ಯುದ್ದ್ವಿಳಸಿತ
ವೆಸರ ವಿಯಚ್ಚರ ಭಟೋತ್ತಮಂ ಪಡೆದು ಜವಂ||
ಮಸಗಿದನೆನೆ ಕಾಪಿನವ
ರ್ದೆಸೆಗಿಡೆ ಪೊಕ್ಕಿಳಿದು ಕೊ೦ದು ತಲೆಯಂ ತಂದಂ||೨೯||
ಆ ಸಮಯದೊಳ್---
ಕಂ||ಪರಿಜನದ ಭೂಪನಂತಃ
ಪುರದಬಳಾಜನದ ನೆಗೆದ ಹಾಹಾರವಮೆ||
ಯ್ತರೆ ಕಿವಿಗೆ ಕೇಳ್ದು ನಲಿದ೦|
ಕರುಣಾರಸ ರಹಿತನಾವನಾಖಚರನವೋಲ್||||೩೦||
ಕ೦||ಕೊಲಲೆಂದು ಬಂದು ಲೆಪ್ಪದ
ತಲೆಯಂ ಕೊಂಡುಯ್ದನಾ ವಿಭೀಷಣನಾರುಂ||
ಕೊಲಲಾರ್ಪರೆ ಸಾಯದರಂ|
ಲಲಾಟದೊಳ್ ವಿಧಿಯ ಬರೆದ ಲಿಪಿ ಜಲಲಿಪಿಯೇ||೩೧||
೧. ತೆವಿನೀತೆಗೆ. ಗ.