ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಥಮಾಶ್ವಾಸಂ
೨೫

ಕಂ|| ವಿಜಿಗೀಷುವೃತ್ತಿಯಿಂ ಭೂ
      ಭುಜರಂ ಬೆಸಕೆಯಿಸಿ ಕೊಂಡು. ಭೂಮಂಡಲಮಂ||
      ಭುಜದಂಡದೊಳಿರಿಸಿದನೇ
      ನಜಯ್ಯಭುಜಬಲನೋ ವಿಜಯರಥ ನರನಾಥಂ||೧೨೫||

ಆ ನರೇಂದ್ರನ ನಂದನಂ--

ಕಂ|| ಜಿತರಿಪು, ಸುರೇಂದ್ರಮನ್ಯು
      ಕ್ಷಿತಿಪತಿ ರಿಪುನೃಪಕುಲಾಂಗನಾಜನಮನ್ಯೂ||
      ದೃತಬಾಷ್ಪ ಸಲಿಲಧಾರಾ
      ಪ್ರತಾನದಿಂ ಕೀರ್ತಿವಲ್ಲಿಯಂ ಬೆಳೆಯಿಸಿದಂ||೧೩೬||

ಆ ವಿಶದಕೀರ್ತಿಗೆ ಕೀರ್ತಿಶ್ರೀಯೆಂಬಳರಸಿಯಾಗೆ--

ಕಂ|| ಅ೦ದಮದಟಲೆಯೆ ಮನಸಿಜ
      ನಂದಮನಳವಳವಿಗಳೆದು ಕೇಸರಿಯಳವ೦
      ಬೆಂದಗುಳೆ ವಜ್ರಬಾಹು ಪು
      ರಂದರರೆಂಬಿರ್ವರವರ್ಗೆ ನಂದನರಾದರ್||೧೩೭||

      ಕಡಿದು ವಿಪಕ್ಷಮನಿಂದ್ರಂ
      ಕಡಿದಂತೆ ಕುಲಾದ್ರಿಪಕ್ಷಮಂ ತೋಳ್ವಲಮಂ||
      ಪಡೆದಂ| ಪರಪ್ರತಾಪಂ
      ಪೊಡರ್ಪುಗಿಡುವಂತೆ ವಜ್ರಬಾಹು ಕುಮಾರಂ||೧೩೮||

      ಪರಪುರಮನುರಿಪಿ ದೆಸೆಗುರಿ
      ವರಿವಿನೆಗಂ ತನ್ನ ತೇಜಮರಿನೃಪವದನಾಂ
      ಬುರುಹಂ ಕರಿಂಕುವರಿದಿರೆ
      ಪುರಂದರಂ ನೃಪಪುರಂದರಂ ಪೊಗಿಳಿಸಿದಂ||೧೩೯||

      ಮಗನೊರ್ವಂ ತನಗಿರ್ವರ್
      ಮಗಂಗೆ ಸುತರಾಗೆ| ಮೂರುಕಣ್ಣೆನೆ ಮೂರುಂ||
      ಜಗಮಂ ತನಗೆರಗಿಸಿದಂ
      ತ್ರಿಗುಣಿಸೆ ತನ್ನೊಳ್ಮನೋರಥಂ ವಿಜಯರಥಂ||೧೪೦||