ತನ್ನ ಪಟ್ಟಣಕ್ಕೆ ಬಂದು ಇಂದುವೆಂಬ ತನ್ನ ಹಿರಿಯ ಮಗನಿಗೆ ರಾಜ್ಯವನ್ನಿತ್ತು ಜಯಂತನೊಡನೆಯೂ ತನ್ನ ಲೋಕಪಾಲರೊಡನೆಯೂ ದೀಕ್ಷೆಗೊಂಡನು.
ಇತ್ತ, ರಾವಣನು ವರುಣನಮೇಲೆ ನಡೆಯಬೇಕೆಂದು ಸಮಸ್ತ ಸಾಮಂತರನ್ನೂ ಬರಿಸಿ ಹನುಮರದ್ವೀಪಕ್ಕೆ ದೂತನನ್ನಟ್ಟಲು ಅವನು ಬಂದು ಪ್ರತಿಸೂರ್ ನನ್ನ ಪವನಂಜಯನನ್ನೂ ಕಂಡು ತಾನು ಬಂದ ವಿಷಯವನ್ನು ತಿಳಿಸಿದನು. ಪವನಂಜಯನು ಮಗನಾದ ಆ೦ಜನೇಯನನ್ನು ಕರೆಯಿಸಲು ಅವನು ತಂದೆಯ ಅಪ್ಪಣೆಯನ್ನು ಪಡೆದು ಅಸಂಖ್ಯಾತ ಬಲ ಸಮೇತನಾಗಿ ಆಕಾಶ ಮಾರ್ಗದಲ್ಲಿ ಹೊರ ಟನು. ರಾವಣನು ಹನುಮನ ಬರವನ್ನು ಕಂಡು ಅವನನ್ನು ಎದುರುಗೊಳ್ಳುವು ದಕ್ಕೆ ಬರಲು ಹನುಮನು ರಾವಣನ ಪಾದಕ್ಕೆರಗಿದನು. ರಾವಣನು ಹನುಮನನ್ನು ಎತ್ತಿ ಆಲಿಂಗಿಸಿ ಇನ್ನು ಶತ್ರುಗಳನ್ನು ಜಯಿಸುವುದು ಸುಲಭಸಾಧ್ಯವಾಯಿತೆಂದು ಹರುಷಪಟ್ಟು ದೊಡ್ಡ ಸೇನೆಯೊಡನೆ ಹೊರಟು ಪಾತಾಳಪುಂಡರೀಕ ಪುರವನ್ನು ಮೂರು ಸುತ್ತಾಗಿ ಬಳಸಿದನು. ಇದನ್ನು ಕಂಡು ವರುಣನ ಮಕ್ಕಳಾದ ನೂರು ಮಂದಿ ಅಸಹಾಯ ಶೂರರು ಬಂದು ಭಯಂಕರವಾಗಿ ಯುದ್ಧ ಮಾಡುತ್ತಿರುವಲ್ಲಿ ಹನುಮನು ಹೊಕ್ಕು ವಾನರ ವಿದ್ಯೆಯನ್ನು ತಳೆದು ವಾನರ ರೂಪನ್ನು ತಾಳಿ ಹಗೆಯ ಬಲವನ್ನು ದೊಡ್ಡ ಕಲ್ಲು ಗುಂಡುಗಳಿ೦ದಲೂ ದೊಡ್ಡ ಮರಗಳ ಸಮೂಹ ದಿ೦ದಲೂ ನಾಶಮಾಡಿ ವರುಣನ ನೂರುಮಂದಿ ಮಕ್ಕಳನ್ನೂ ಸೆರೆ ಹಿಡಿದನು. ಇದನ್ನು ನೋಡಿ ವರುಣನು ಯುದ್ಧಕ್ಕೆ ಬರಲು ಅವನನ್ನು ರಾವಣನು ಹಿಡಿದು ಕುಂಭಕರ್ಣನಿಗೊಪ್ಪಿಸಿ ತರುವಾಯ ಅವನನ್ನು ಬರಿಸಿ ಮನ್ನಿಸಿ ಮೊದಲಿ ನಂತೆಯೇ ರಾಜ್ಯಭಾರ ಮಾಡಿಕೊಂಡಿರೆಂದು ನಿಯಮಿಸಲು ವರುಣನು ಹನುಮನ ಪರಾಕ್ರಮವನ್ನು ಮೆಚ್ಚಿ ರಾವಣನಿಗೆ ಸತ್ಯವತಿಯೆಂಬ ತನ್ನ ಮಗಳನ್ನು ಕೊಟ್ಟು ಮದುವೆಮಾಡಿದನು. ರಾವಣನು ಲಂಕೆಗೆ ಬಂದು ಚಂದ್ರನಖಿಯ ಮಗಳಾದ ಅನಂಗಪುಷ್ಠೆಯನ್ನು ಶ್ರೀಶೈಲನೆಂದೂ ಹೆಸರುಳ್ಳ ಹನುಮನಿಗೆ ಕೊಟ್ಟು ಮದುವೆ ಮಾಡಿ ಕರ್ಣಕುಂಡಲಪುರವನ್ನು ಆತನಿಗೆ ರಾಜ್ಯಾಭಿಷೇಕ ಮಾಡಿಕೊಡಲು ಆತನು ಅಲ್ಲಿ ಸಹಸ್ರ ಮಂದಿ ಅಂತಃಪುರ ಸ್ತ್ರೀಯರಿಗೊಡೆಯನಾಗಿ ಸುಗ್ರೀವನಿಗೂ ಸುತಾರೆಗೂ ಹುಟ್ಟಿದ ಪದ್ಮರಾಗೆಯನ್ನು ಮದುವೆಯಾಗಿ ಸುಖದಿಂದಿದ್ದನು.
ಜಾಂಬವಂತನು ರಾಮಚ೦ದ್ರನ ಅಪ್ಪಣೆಯ ಮೇರೆಗೆ ಈ ವೃತ್ತಾಂತ ವನ್ನು ಹೇಳಿ, “ ಈಗ ರಾವಣನು ಭರತ ಖಂಡಕ್ಕೊಡೆಯನಾಗಿ ತ್ರಿಜಗದ್ದೂಷಣ ಗಜವನ್ನು ಹೊಂದಿ ಚಕ್ರಾಯುಧವನ್ನೂ ಚ೦ದ್ರಹಾಸಾಸಿಯನ್ನೂ ಪಡೆದು ಸಮಸ್ತ ವಿದ್ಯಾಧರ ರಾಜರನ್ನೂ ಆಜ್ಞಾನುವರ್ತಿಗಳನ್ನಾಗಿ ಮಾಡಿ ಅತ್ಯಂತ ಪರಾಕ್ರಮಶಾಲಿ ಯಾಗಿರುವನು. ಭೀಷಣ ಬಲರಾದ ಕುಂಭಕರ್ಣ ವಿಭೀಷಣರು ಅವನೊಡಹುಟ್ಟಿ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
42
ಪ೦ಪರಾಮಾಯಣದ ಕಥೆ