ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಮಾಶ್ವಾಸಂ
೧೬೯

ಚ || ಅನಯದಿನಪ್ಪ ಸಂಪದದಿನಿಲ್ಲದೆ ನಾಡೆಯುಮಿಂಬುವುದೆಂ|
ತೆನೆ ಪವನ್ನರಿಲ್ಲ ಧನವಿಲ್ಲದರಂ ದುರಿತಾನುಬಂಧಮಿ ||
ಲ್ಲನಯದಿನಪ್ಪು ವೀಯೆರಡುಮೆಂಬು ದನಿಂಬದಿವೆಯೆಂಬಿರೆಂ |
ತೆನಗಧಿರಾಜ ರಾಜ್ಯಮನಪೂಜ್ಯಮನಕ್ರಮದಿಂದಮಪ್ಪುದಂ || ೧೮ ||

ಎಂದು ಬಿನ್ನವಿಸುವನ್ನೆಗಂ ಕೈಕೆಯುಂ ನೂರ್ವರ್ ಸಾಮಂತರೊಡನೆ ಬರೆ
ಬರ್ಪಳಂ ಕಂಡು-

ಕಂ || ಇದಿರೆಟ್ಟು ಸರಿದು ಕೈಕೆಯ
ಪದಾಂಬುಜಕ್ಕೆ ಆಗೆ ರಾಘವಂ ಹರ್ಷದ ಭಾ ||
ರದಿನುಮ್ಮಳವಾ ಸತಿಗಾ
ದುದು ಮನದೊಳ್ ನೆನೆದು ತನ್ನ ಗೆಯ್ದನ್ನೆಯಮಂ || ೧೯ ||

ಸ್ಥಾನಚ್ಯುತಿ ಮಾಡಿದಳೆಂ
ಬೀ ನೋವಿಲ್ಲೇಕಕುಂಡಲಂ ಕೈಕೆಗೆ ಪಾ ||
ದಾನತನಾದಂ ಪದೆಪಿಂ
ಮಾನ ಕಷಾಯಕ್ಕೆ ತಕ್ಕನೆಡೆಗೊಟ್ಟ ಪನೇ|| ೨೦ ||


ಅಂತು ವಿನಯ ವಿನಮಿತನಾಗಿರ್ದ ಮಗನಂ ತೆಗೆದು ತಟಸಿ ಪಲತೆಜದಿಂ
ಪ್ರಳಾಪಂಗೆಯ್ದ ವಿವೇಕದಿನನ್ನ ಗೆಯ್ಯ ದುರ್ವಿಸಿತಕ್ಕೆ ಸೈರಿಸಿ ಮಗನೆ ರಾಜ್ಯಮಂ
ಕೈಕೊಳ್ವುದು ; ನಿನ್ನ ತಮ್ಮಂದಿರ್ ನಿನಗೆ ಬೆಸಕೆಯ್ತು ಬಾರಿದನುದಾಸೀನಂ
ಗೆಯ್ಯದೆ ಮಗುವಿಗೆ ಬಿಜಯಂಗೆಯ್ಯಂಬುದುನಂಬಿಕೆಗೆ ಮುಕುಳಿತ ಕರಾಂಬುಜಂ
ರಾಮನಿಂತೆಂದಂ-

ಕಂ || ಅಕಲಂಕ ಚರಿತ್ರಂ ಕ್ಷ
ತ್ರ ಕುಲೋದ್ಧ ತನೆರಡನುಸಿರ್ದೊಡೈಹಿಕವಾಮು ||
ತ್ರಿಕನುಗುಂ ಕೇವಲಮಂ
ಬಿಕೆ ಪಾತಕಮನೃತದಿಂದಮಗ್ಗಳಮು೦ಟೇ|| ೨೧||

ಎಂದು ಮತ್ತಮಯ್ಯನ ನನ್ನಿಗೆ ಬನ್ನಮಂ ಪಡೆದು ನಿಮ್ಮೊಳಾದ ವಿನಯಮ
ನತಿ ಕ್ರಮಿಸಿ ತಮ್ಮನಕೈಯ ರಾಜ್ಯ ಮಂ ಕೊಂಡೊಡೆನ್ನ ನುಡಿ 'ಕಿತ್ತಡಮಕ್ಕು ;
ಮಗು೦ತಿ ನುಡಿಯದಿರಿಮೆಂದು ಭರತನುಮನಾಂ ಕುಡಲ್ಪಡೆದ ರಾಜ್ಯಂ ನಿನಗಕ್ರಮ
ಮಣಮಲ್ಕು ವಕ್ರಂಬಂದೊಡೆಮಾ ಕೈಗೆ ತಪ್ಪಿದೆಯೆಂದು ನಿಲೆ ನುಡಿದು-


1. ಕೀಟಿಡ. ಫ