ಒಂದು ದಿನ ಈ ಮೂವರೂ ಆಸ್ಥಾನದಲ್ಲಿ ನಾಯಕ ರತ್ನಗಳ೦ತಿರುವಾಗ, ವೈಶ್ರವಣನು ಬಹಳ ವೈಭವದಿಂದ ತೃಣೀಕೃತ ತ್ರಿಭುವನನಾಗಿ ಆಕಾಶದಲ್ಲಿ ಹೋಗು ತಿರಲು, ಇಷ್ಟು ವೈಭವದಿಂದ ಹೋಗುತ್ತಿರುವನಾರೆಂದು ದಶಗ್ರೀವನು ಕೇಳಿದುದಕ್ಕೆ ಕೈಕಸಿಯು, “ ಈತನು ನಮ್ಮ ಅಕ್ಕನ ಮಗನಾದ ವೈಶ್ರವಣನು, ಉಭಯ ಶ್ರೇಣಿಗರಸನಪ್ಪ ಇಂದ್ರನೆಂಬ ವಿದ್ಯಾಧರ ಚಕ್ರವರ್ತಿಯು ನಿಮ್ಮ ಹಿರಿಯ ಮುತ್ತಪ್ಪ ನಾದ ಮಾಲಿಯನ್ನು ಕೊಂದು ನನ್ನ ವಂಶಕ್ಕೆ ಬಂದ ಲಂಕೆಯನ್ನು ವೈಶ್ರವಣನಿಗೆ ಕೊಡಲು, ಇವನು ಅದನ್ನಾಳುತ್ತಿರುವನು. ನಾವು ಇವನಿಗೆ ಭೀತರಾಗಿರುವೆವು” ಎಂದು ಹೇಳಿ ವ್ಯಸನಪಡಲು, “ ದಶವದನನು ನಿನ್ನ ಹಗೆಯನ್ನು ತೀರಿಸಿ ನಿಮಗೆ ಸಂತೋಷಮಾಡುವನು” ಎಂದು ಹೇಳಿ ವಿಭೀಷಣನು, ಅದುವರೆಗೂ ತಮ್ಮ ಕುಲಕ್ಕೆ ತಕ್ಕ ವಿದ್ಯೆಗಳನ್ನು ಸಾಧಿಸುವೆವೆಂದು ತಾಯಿಗೆ ಬಿನ್ನವಿಸಿ, ಶುಭ ದಿನ ಮುಹೂರ್ತ ದಲ್ಲಿ ತಾಯಿತಂದೆಗಳಿಗೆರಗಿ ಅಪ್ಪಣೆ ಪಡೆದು ಮೂವರೂ ಅತ್ಯದ್ಭುತವಾದ ಅರಣ್ಯವನ್ನು ಹೊಕ್ಕು ದಶಕೋಟ ಮಂತ್ರದಲ್ಲಿ ಕೂಡಿದ ಷೋಡಶಾಕ್ಷರ ಮಹಾವಿದ್ಯೆ ಯನ್ನು ಸಾಧಿಸುವುದಕ್ಕಾಗಿ ತಪಸ್ಸಿಗೆ ನಿಂತರು. ಇದನ್ನು ಕ೦ಡು ಜ೦ಬೂದ್ವೀಪಾಧಿ ಪತಿಯಾದ ಅನಾದೃತನೆಂಬ ದೇವನು ಅವರ ವಿದ್ಯಾಸಾಧನೆಗೆ ವಿಘ್ನ ಹೇತು ಗಳಾದ ಅನೇಕ ತೊಂದರೆಗಳನ್ನು ಮಾಡಿದರೂ ಅವರು ಮಂದರ ಪರ್ವತದಂತೆ ಅಚಲಿತ ಧೈರ್ಯರಾಗಿದ್ದು ವಿದ್ಯೆಗಳನ್ನು ಸಾಧಿಸಿ ಪಂಚ ಪರಮೇಷ್ಠಿಗಳನ್ನು ಪೂಜಿಸಿ ದರು. ರಾವಣನು ಚಂದ್ರಹಾಸವನ್ನು ಸಾಧಿಸಿ ವಿದ್ಯೆಯಿಂದ ಸ್ವಯಂಪ್ರಭವೆ೦ಬ ಪಟ್ಟಣವನ್ನು ಮಾಡಿ ತನ್ನ ಬಂಧುಜನರನ್ನೂ ಪರಿಜನರನ್ನೂ ಬರಿಸಿ ಸುಖದಿಂದಿದ್ದನು.
ಹೀಗಿರುವಲ್ಲಿ, ಸುರಸಂಗೀತಕ ಪುರದರಸನಾದ ಮಯನು ತನ್ನ ಮಗಳಾದ ಮಂಡೋದರಿಯನ್ನು ನೈಮಿತ್ತಕರ ಅನುಜ್ಞೆಯಿಂದ ಸ್ವಯಂಪ್ರಭನಗರಕ್ಕೆ ಕರೆ ತಂದು ರಾವಣನಿಗೆ ಮದುವೆ ಮಾಡಿಕೊಟ್ಟನು. ರಾವಣನು ವಿಹಾರಾರ್ಥವಾಗಿ ಹೋಗುತ್ತ ಸುರಸುಂದರನೆಂಬ ದೊರೆಯ ಮಕ್ಕಳಾದ ಐನೂರು ಮಂದಿ ಬಾಲೆಯರು ಒಂದು ಕಮಲ ಸರೋವರದಲ್ಲಿ ನೀರಾಟವಾಡುತ್ತಿರುವುದನ್ನು ಕಂಡು ಅವರ ನ್ನು ಮೋಹಿಸಲು, ಮೇಲೆತ್ತಿ ಬಂದ ಅವರ ತಂದೆಯನ್ನು ಸೋಲಿಸಿ ಆ ದೊರೆಯ ಅನು ಮತಿಯಿ೦ದ ಅವರನ್ನು ಮದುವೆಯಾಗಿ ತನ್ನ ಪಟ್ಟಣಕ್ಕೆ ಬಂದನು. ತರುವಾಯ ಭಾನುಕರ್ಣನಿಗೆ ಕುಂಭಪುರದ ಮಹೋದರನ ಮಗಳಾದ ವಿದ್ಯುಗೆಯನ್ನು ಮದುವೆಮಾಡಿದನು. ಆತನು ಆಕೆಯೊಡನೆ ಬಹಳ ಪ್ರೀತಿಯಿಂದಿರುತ್ತ ಕುಂಭ ಪುರದ ಮಾತುಗಳನ್ನು ಯಾವಾಗಲೂ ಮೆಚ್ಚಿ ಕೇಳುತಿದ್ದುದರಿಂದ ಆತನಿಗೆ ಕುಂಭ ಕರ್ಣನೆಂಬ ಹೆಸರಾಯಿತು. ವಿಭೀಷಣನಿಗೆ ಜ್ಯೋತಿಃಪ್ರಭ ಪುರವನ್ನಾಳುವ ಶುದ್ದ ಕಮಲನ ಮಗಳಾದ ರಾಜೀವಸರಸೆಯನ್ನು ಕೊಟ್ಟು ಮದುವೆಯಾಯಿತು. ಮಂಡೋ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
36
ಪ೦ಪರಾಮಾಯಣದ ಕಥೆ