ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೬

ರಾಮಚಂದ್ರಚರಿತಪುರಾಣಂ

ಉ|| ರಾಗದ ಬಳ್ಳಿ ಚಾದಗೆಗೆ ಕಾಂಚನ ಚ೦ಚಲ ಲಾಸ್ಯ ತರ್ಜನಂ |
ಸೋಗೆನವಿಲೆ ಮೇಖಲೆ ಘನಾಘನಲಕ್ಷ್ಮಿಗೆ ದೀಪಮಾಲೆ ಜಾ ||
ಜಂತ್ರದುರಿಯೆಣ್ಣೆ ವಿಯೋಗಿಜನಕ್ಕೆನಲ್ ನಭೋ |
ಭಾಗಮನೆಯ್ದಿ ಬಿತ್ತರಿಸಿದತ್ತು ತಟಲ್ಲತೆ ಲಾಸ್ಯಲೀಲೆಯಂ || ೧೪೮ ||

ಕಂ|| ಬಿಡೆ ಕೆಮ್ಮನೆ ಗರ್ಜಿಪ ತ
ಕೊಡೆ ತಗದೆಡೆಯೆನ್ನದೇಆಗುವಸ್ಟಿ ರನಪ್ಪಾ ||
ಜಡನಚಿರಪ್ರಭ ನಿಮಿಷದೊ
ಆಡಂಗುಗುಂ ಬೆಳಗದೆಂತುವುದು ಸತ್ಪಥಮಂ || ೧೪೯ ||

ತು || ಸ್ರ|| ಘನಗರ್ಭಾಶಾ ವಧೂ ಪುಂಸವನದೆಸೆವ ತೂರಸ್ವನಂ ಚೂಳಿಕಾ ವ |
ರ್ಧನ ಮಾಂಗಲ್ಯಂ ಬಳಾಕಕ್ಕೆಸೆಯೆ ಪಸರಿಪಾತೋದ್ಯ ಘೋಷಂ ವಿದೂರಾ||
ವನಿಯೊಳ್ ವೈಡೂಲ್ಯರತ್ನಂ ಜನಿಯಿಸೆ ನೆಗಾನಂದ ಭೇರೀ ರವಂ ತಾನೆನೆ |
ರೋಭಾಗದೊಳ್ ಪೂರ್ಣಿಸಿದುದಭಿನವಾಂಭೋದ ಗಂಭೀರ ನಾದಂ ||

ಕಂ || ಘನನಿನದಂ ಭಯರಸಮಂ
ಜನಿಯಿಸೆ ನೆನೆಯಿಸಿದರಂದು ಕಳಹಂಸ ಕುಟುಂ ||
ಬಿನಿಯಂ ಪ್ರಿಯ ವಿರಹಾಲಂ
ಬಿನಿಯರ್ ಮೃದುವೆನಿಪ ಮನದೊಳಂ ಗಮನದೊಳಂ || ೧೫೧ ||

ಮು || ಉಗುಳುತ್ತು೦ ಸಿಡಿಲೆಂಬ ತೋರಕಿಡಿಯಂ ಕಾಲೂ ಆ ಭೂಭಾಗದೊಳ್ |
ಗಗನಾಭೋಗವನೆಯ ನೀಳ ಘನವೇಣೀ ಬಂಧಮಂ ಬಿರ್ಚಿ ಮಿ೦ ||
ಚುಗಳೆ೦ಬುಳ್ಳು ವದಾಡೆಗಳ್ ಪೊಳೆಯೆ ಚಂದ್ರಾದಿತ್ಯರಂ ನುಂಗಿ ಬೇ |
ಸಗೆಯಂ ಬೆರ್ಚಿಸಿ ಗರ್ಜಿಸುತ್ತು ಮೊಗೆದಂ ಕಾರೆಂಬ ಕಾಳಾಸುರಂ || ೧೫೨ ||

ಚ || ಮದ ಮದಿರಾ ಪ್ರಮಜನತಾಶಯದಂತೆ ಜಡಾಶಯಂ ಕಲಂ |
ಕಿದುದು ಮನೋಜ ದೀಪ ಕಳಿಕಾನನದಂತಿರೆ ಕಾನನಂ ಕಅ೦ ||
ಗಿದುದು ವಿರೋಧಿ ವಾಹಿನಿಗಳ೦ತಿರೆ ವಾಹಿನಿಗಳ್ ಕಡಂಗಿ ಮಿಾ |
ಅದುವನುಕೂಲಮಾರ್ಗಮನಿದೇಂ ಮಟತೆಗಾಲಮಳುಂಬಮಾದುದೋ ||

ನವವಿಧಮಪ್ಪ ಕಣೋಳೆಪು ರಂಜಿಸೆ ಸಂಚಳಿತಾಂಗ ಹಾರದಿಂ |
ವಿವಿಧ ಘನಸ್ವನಕ್ಕೆ ನವಿಲಾಡೆ ಘನಾಘನಲಕ್ಷ್ಮಿ ಕೇತಕೀ ||
ಧವಳ ಕಟಾಕ್ಷೆ ಕಂಡು ರಸಮಗ್ನತೆಯಿಂ ಪುಳಕಾಂಕುರಂಗಳ |
ತ್ಯವಿರಳಮಾಗೆ ಕೊಟ್ಟಳಚಿರಪ್ರಭೆಯೆಂಬ ಸುವರ್ಣ ಮಾಲೆಯಂ || ೧೫೪ ||


1. ಭಾಗದೊಳಂದು. ಕ. ಘ. ಚ.