ವಾದ ವಾನರದ್ವೀಪದೊಳಿರುವಂತೆ ಆತನನ್ನೊಡಂಬಡಿಸಲು, ಆತನು ಒಂದು ದಿನ ಆ ದ್ವೀಪವನ್ನು ನೋಡುವ ನಿಮಿತ್ತವಾಗಿ ಬರುತ್ತ ಒಂದೆಡೆಯಲ್ಲಿ ವಾನರಗಳನ್ನು ಕಂಡು ಅವನ್ನು ತನ್ನ ಬಳಿಗೆ ಬರಮಾಡಿಕೊಂಡು ಕಿಕ್ಕಿಂಧಗಿರಿಯಮೇಲೆ ಹದಿ ನಾಲ್ಕು ಯೋಜನ ವಿಸ್ತಾರದ ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಕಿಷ್ಕಂಧಪುರವೆಂಬ ಹೆಸ ರನ್ನಿಟ್ಟು ಅಲ್ಲಿ ಹಲವು ಕಾಲ ರಾಜ್ಯಭಾರ ಮಾಡುತ್ತಿದ್ದನು. ಹೀಗಿರಲು, ಶ್ರೀಕಂಠನು ಒಂದು ದಿನ ನಂದೀಶ್ವರ ಪೂಜೆಗೆ ಅಚ್ಯುತೇಂದ್ರನೊಡನೆ ಹೋಗುತ್ತ, ಮಾನುಷೋ ತರ ದ್ವೀಪದಿಂದತ್ತ ಕಡೆಗೆ ಮನುಷ್ಯರಿಗೆ ಪ್ರವೇಶವಿಲ್ಲದುದರಿಂದ ತನ್ನ ವಿಮಾನವು ಹೋಗದಿರಲು ಹಿಂದಿರುಗಿ ಬಂದು ಅದೇ ನಿರ್ವರ .ಕಾರಣವಾಗಿ ತನ್ನ ಮಗ ನಾದ ವಜ್ರಕಂಠನಿಗೆ ರಾಜ್ಯವನ್ನು ಕೊಟ್ಟು ತಪಸ್ಸಿಗೆ ಹೋದನು. ಈತನೂ ಕೆಲವು ಕಾಲ ರಾಜ್ಯಭಾರ ಮಾಡಿ ತನ್ನ ಮಗನಾದ ಇಂದ್ರಾಯುಧನಿಗೆ ಪಟ್ಟ ಕಟ್ಟಿ ದೀಕ್ಷೆಗೊ೦ಡನು.
ಆ ಕಪಿಕುಲದ ಕಿಷ್ಕಂಧಾಧಿಪರಲ್ಲಿ ಅಪ್ರತಿಹತನಾದ ಅಮರಪ್ರಭನು ಹುಟ್ಟಿದನು. ಅತ್ತ, ಲಂಕಾಧಿಪನಾದ ಧವಳಕೀರ್ತಿಯ ಕುಲದಲ್ಲಿ ಅನೇಕರು ಹುಟ್ಟಿ ರಾಜ್ಯಭಾರ ಮಾಡಿದ ಮೇಲೆ ತ್ರಿಕೂಟನೆಂಬುವನು ದೊರೆಯಾದನು. ಆತನ ಮಗಳಾದ ಗುಣವತಿಯನ್ನು ಅವರ ಪ್ರಭನಿಗೆ ಮದುವೆಮಾಡಲೆಂದು ಕಿಷ್ಠಿ೦ಧ ಪುರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಆಕೆಯು ವಿವಾಹವೇದಿಕೆಯಲ್ಲಿ ಸಂಚರತ್ನ ವರ್ಣ ಚೂರ್ಣದಿಂದ ಬರೆದ ಲತೆಗಳಲ್ಲಿ ವಾನರಗಳನ್ನು ನೋಡಿ ಹೆದರಿ ಕೊಳ್ಳಲು ಇದನ್ನು ಬರೆದವರು ಯಾರೆಂದು ದೊರೆಯು ಕೇಳಿದ್ದಕ್ಕೆ ಗೃಹಮಹತ್ತರನು ದೊರೆಯ ಪೂರ್ವಜನಾದ ಶ್ರೀ ಕಂಠನು ಕಪಿಗಳನ್ನು ಕೊಂಡಾಡಿದನಾದುದರಿಂದ ಆ ಕುಲದಲ್ಲಿ ಉತ್ಸವಗಳಲ್ಲಿ ಹಾಗೆ ಬರೆಯುವರೆಂದು ತಿಳಿಸಿದನು. ಅದನ್ನು ಕೇಳಿ ದೊರೆಯು ಸವಾಹಿತ ಚಿತ್ತನಾಗಿ, ಮೆಟ್ಟುವ ಸ್ಥಳದಲ್ಲಿ ಏಕೆ ಬರೆದಿರೆ೦ದಾಕ್ಷೇಪಿಸಿ, ಪತಾಕೆಗಳಲ್ಲಿಯೂ ಕಿರೀಟಗಳಲ್ಲಿಯೂ ಚಿನ್ನದಿಂದಲೂ ರತ್ನಗಳಿಂದಲೂ ವಾನರ ಗಳನ್ನು ವಿರಚಿಸಿ ಕೊ೦ಡಾಡಿ, ತನ್ನ ಕುಲದವರನ್ನು ವಾನರಧ್ವಜರೆಂದೂ ವಾನರ ಕುಲದವರೆಂದೂ ರೂಢಿ ಮಾಡಿ ತನ್ನ ಮಗನಾದ ಕಪಿಕೇತುವಿಗೆ ರಾಜ್ಯವನ್ನು ಕೊಟ್ಟು ಸಂನ್ಯಾಸವನ್ನು ವಹಿಸಿದನು. ಈ ಕುಲದಲ್ಲಿ ಹುಟ್ಟಿದ ಕಿಷ್ಕಂಧ ಅಂದ್ರಕರೆಂಬಿಬ್ಬರು ಅಣ್ಣ ತಮ್ಮಂದಿರು ದೊರೆಗಳಾದರು. ವಿದ್ಯುತೇಶನ ತರುವಾಯ ಆತನ ಮಗನಾದ ಸುಕೇಶನು ಲ೦ಕೆಗೆ ದೊರೆಯಾದನು. ಆ ಕಾಲದಲ್ಲಿ ವಿಜಯಾರ್ಧ ನಗೋಪತ್ಯ ಕದ ಆದಿತ್ಯನಗರವನ್ನಾಳುವ ವ೦ದರಮಾಲಿಯ ಮಗಳಾದ ಶ್ರೀಮಾಲೆಯು ಸೌಂದಯ್ಯ ದಲ್ಲಿ ರತಿಯನ್ನು ಮಾರಿಸಿ ಪ್ರಾಪ್ತ ವಯಸ್ಕಳಾಗಲು ಆ ಕನ್ನೆಯ ಸ್ವಯಂ ವರಕ್ಕೆ ನಾನಾ ದಿಕ್ಕುಗಳ ಖಚರ ಕುಮಾರರೂ ವಿದ್ಯಾಧರ ಚಕ್ರವರ್ತಿಯಾದ ಅಶನಿ ವೇಗನ ಮಗನಾದ ವಿಜಯಸಿಂಹನೂ ಕಪಿಕೇತುಗಳಾದ ಕಿಷ್ಠಿ೦ಧಾಂಧಕರೂ ಲಂಕಾಧಿಪನಾದ ಸುಕೇಶನೂ ಮೊದಲಾದ ಹಲವರು ನಿಯಚೂರಾಧಿರಾಜರು
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಪ೦ಪ ರಾಮಾಯಣದ ಕಥೆ
33