ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ರಾಮಚಂದ್ರಚರಿತಪುರಾಣಂ

ಕಂ|| ಅನತಿಶಯವಾದುದಾ ತ್ರಿಭು
      ವನ ಲಕ್ಷ್ಮಿಗೆ ಮಧ್ಯಮೆನಿಸೆ ಮಧ್ಯಮ ಲೋಕ೦ ||
      ಜನಹೃದಯ ಹಾರಿ ಗಂಭೀ
      ರ ನಾಭಿಮಂಡಲಮಿದೆನಿಸಿ ಜಂಬೂದ್ವೀಪಂ ||೪೩||

ಆ ಜಂಬೂದ್ವೀಪದ ನಟ್ಟನಡುವೆ -
 
ಕಂ|| ಮುಟ್ಟದುದು ಮೊದಲ ದಿವಮಂ
      ಮೆಟ್ಟಿದುದೆರಡನೆಯ ನಿಯಂ ಮೇಖಲೆಯಿ೦ ||
      ದಿಟ್ಟಗೆ ಪೊಲನಾದುದು ಪೊಂ
      ಬೆಟ್ಟಂ ಜಿನ ಜನ್ಮಸವನ ಮಣಿಮಯ' ಪಟ್ಟಂ ||೪೪||
 
      ಆ ಕೋಣೀಧರ ವಲ್ಲಭ
      ದಕ್ಷಿಣ ದಿಬ್ಬುಖದೊಳೆಸೆದು ಶಶಿಖಂಡದವೋ ||
      ಲೀಕ್ಷಣ ಸುಖಮಯಮಿರ್ಪುದು
      ದಕ್ಷಿಣ ಭರತ ತ್ರಿಖಂಡಧಾರಾಖಂಡಂ ||೪೫ ||

ಅಲ್ಲಿ ವರ್ತಿಸುವುತ್ವರ್ಪಣಾವಸರ್ಪಣ ಯುಗಸ್ವರೂಪ ನಿರೂಪಣ ವಿವಕ್ಷಯಿಂ
ವ್ಯ ವ್ಯವಹಾರ ನಯದೊಳುಭಯಾತ್ಮಕ ಮನಿಪ್ಪ ಕಾಲಸ್ವರೂಪಮೆಂತೆನೆ -

ಕಂ|| ಜೀವಾಜೀವ ದ್ರವ್ಯ ಪ
      ರಾವರ್ತನ ಹೇತುವರ್ತನಾ ಲಕ್ಷಣ ಸ ||
      ದ್ಭಾವಂ ನಿತ್ಯಮಮೂರ್ತ೦
      ಕೇವಲ ಗಮ್ಯಂ ಸದಾನುದ್ದೀಯಂ ಕಾಲಂ ||೪೬||

      ಧಾರಾ ಹತಿಯಿಂ ಖಂಡಿಸ
      ದಾರಂ ಜಿನನಾಥನುಲಿಯಲುಬಿದರನೇಕಾ
      ಕಾರಂ ಲೋಕಾಕಾರದೋ
      ಳೋರಗಲಮೆನಿಪ್ಪ ಕಾಲಚಕ್ರಮಮೋಘಂ ||೪೭||

     ವ್ಯವಹಾರ ಕಾಲ ಭೇದಮ
     ಇವರಿವರೆತ್ತ ಜವರಾಪ್ತರಲ್ಲರ್‌ ಜಿನಪು೦ ||
     ಗವರಲ್ಲದಣುವನಣು ದಾಂ
     ಟುವ ಪೊಂ ಸಮಯವೆಂದು ಪೇವನಾವಂ ||೪೮||


1. 1.ಪ್ರೀರ೦