೧೨ ೬ - ಮಜಿನವ ರಾಮಯಣ. ಯಿತು ಆತನು ಒಡನೆ ಸ ರೋಹಿತರು, ಮಂತ್ರಿಗಳು ಅವರುಗಳಿಂದ ಸಮೇತ ನಾಗಿ ಗಾಧಿತನಯನ ಸಂದರ್ಶನಕೊಸ್ಕರ ಹೊರಟನು, ಆ ಕಾಲದಲ್ಲಿ ವಿ ಶ್ವಾಮಿತ್ರರ ಒಬ್ಬ ಸಿಸ್ಮವನ್ನು ಜನಕಮಹಾರಾಜನು ಕಂಡು, ವಂದನೆಮಾಡಿ ದನು, ಆ ಶಿಷ್ಯನೂ ಕೂಡ ಮಹಾರಾಜನನ್ನು ಏಕಾಂತದಲ್ಲಿ ಕರೆದುಕೊಂಡು ಹೋಗಿ ತಮ್ಮ ಗುರುಗಳ ನಿರೂಪವನ್ನೂ ಸವಿಸ್ತಾರವಾಗಿ ಹೇಳಲುದುಕನಾ ದನು- ಓ ಜನಕಮಹಾರಾಜನೇ, ನಮ್ಮ ಗುರುಗಳು ದಶರಥಮಹಾರಾಜನ ಮಕ್ಕ ಳಾದ ರಾಮ-ಲಕ್ಷಣರಿಬ್ಬರನ್ನು ಜೊತೆಗೆ ಕರೆತಂದಿರುವರು. ಅವರು ಬಹು ಸ ರಾಕ್ರಮಿಗಳು, ಆ ರಾಜಕುಮಾರರನ್ನು ನೀನು ಸತ್ತರಪೂರ್ವಕ ನಗರ ಪ್ರ ವೇಶ ಮಾಡಿಸಬೇಕು , ನಿನ್ನ ರುವ ಹರಧನುಸ್ಸನ್ನು ಇವರಲ್ಲಿ ದೊಡ್ಡವನಾದ ಶ್ರೀ ರಾಮನು ಅಯಾಸವಿಲ್ಲದೆ ಮುರಿಯುವನು. ಈ ವಿಷಯವು ಗುಪ್ತವಾಗಿ ರಲಿ” ಎಂದು ನುಡಿದು ಜನಕಮಹಾರಾಜನ ಆಜ್ಞೆಯನ್ನು ಪಡೆದು ಗುರುಗಳ ಸನ್ನಿಧಿ ಗೆ ಪ್ರಯಾಣ ಮಾಡಿದನು. ಇತ್ತ ವಿದೇಹಾಧಿಪತಿಯು ಚತುರಂಗ ಸೇನೆಯೊಡನೆ, ವಿಶ್ವಾಮಿತ್ರರು ವಾಸ ಮಾಡಿರುವ ಉಪವನಕ್ಕೆ ಪ್ರಯಾಣಮಾಡಿ, ಋಷಿಗಳನ್ನೂ ರಾಜಸ:ತ್ರರನ್ನೂ ಯಥಾಯೋಗ್ಯ ಸನ್ಮಾನದಿಂದ ಸಂತೋಷಗೊಳಿಸಿ, ರಾಮ-ಲಕ್ಷ್ಮಣರನ್ನು ಆನೆಯ ಮೇಲೆ ಕುಳ್ಳಿರಿಸಿ, ಮಹದುತ್ಸವದಿಂದ ಸುರಪ್ರವೇಶ ಮಾಡಿಸಿದನು. ಮಿಥಿಲಾನ ಗರದಲ್ಲಿರುವ ಜನರು ಅಮಲ್ಯಗಳಾದ ವಸ್ತ್ರಾಭರಣಗಳಿಂದ ಭೂಷಿತರಾದ 8ಾ ಮುಲಕಣರನ್ನು ನೋಡಿ-ಬಾಲಕರು ಯಾವ ರಾಜನ ಮಕ್ಕಳಿರಬಹುದು? ಬಹು ಸುಂದರರಾಗಿರುವರು. ಈ ದೊಡ್ಡ ವರನು ನಮ್ಮ ರಾಜಪುತ್ರಿಯಾದ ನೀ ತೆಗೆ ಅನುರೂಪನಾಗಿರುವನು, ಎರಡನೇ ಕುವರನು ಊರ್ಮಿಳೆಗೆ ಪತಿಯಾದರೆ, ನಮಗೆ ಬಹಳ ಸಂತೋಷಕರಣ ಎಂದು ಮಾತುಗಳನ್ನಾಡುತ್ತಿದ್ದರು. ಅಲ್ಲಿ ಸ್ವಯಂ ವರಕ್ಕೆ ಬಂದ ರಾಜರು ಈ ಮಹಾತೇಜಸ್ವಿಗಳಾದ ರಾಮ-ಲಕ್ಷಣರನ್ನೂ, ಅವಂಗ ಜನಕ ಮಹಾರಾಜನು ಮೂಡುತ್ತಿರುವ ಸತ್ಕಾರಗಳನ್ನೂ ನೋಡಿ, ನಮಗೆ ಖಂಡಿತವಾಗಿಯೂ ಸೀತಾದೇವಿಯ ಲಾಭವಾಗಲಾರದು, ಎಂದು ಮನಸ್ಸಿ ನಲ್ಲಿ ಬಹುವಿಧವಾಗಿ ನೈರತ್ಯವನ್ನು ಹೊಂದಿದರು. ಮುಂದೆ ರಾಮ-ಲಕ್ಷ್ಮಣರು ಕುಳಿತಿರುವ ಆನೆಯು ವಿದೇಹರಾಜನ ಸಭಾಮಂಟಪಡ ಬಳಿಗೆ ಬಂದು ಸೇರಿತು, ಅಲ್ಲಿ ರಾಮ-ಲಕ್ಷ್ಮಣರು ಆನೆಯಿಂದ ಇಳಿದು ಸಭಾಪ್ರವೇಶ ಮಾಡಿದರು. ಆ ಕಾ ಲದಲ್ಲಿ ನಾನಾವಿಧವಾದ ವಾದ್ಯಗಳು ಧ್ವನಿಮಾಡಿದವು ಪತೃಗಳ ಮಳೆ ೨”
ಪುಟ:ಶ್ರೀ ಮದಾನಂದ ರಾಮಾಯಣ.djvu/೨೨
ಗೋಚರ