ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶ್ರೀ ಮದನಂತರಾಮಯಣ, ಕಾದ ಕೆಲವು ರಾಜಕುಮಾರರು ಎದ್ದು ಬಂದು, ಧನುಸ್ಸನ್ನಲ್ಲಾಡಿಸಲಾರದೆ, ತಮ್ಮ 'ಕುಮಾರವೆಂಬ ಹೆಸರನ್ನು ಸಾರ್ಥಕ ಮಾಡಿಕೊಂಡು, ನಾಚಿಕೆಯಿಂದ ಹಿಂತಿರುಗಿದರು. ಹೀಗೆ ಸಮಸ್ಮರಾಜರೂ ಕಳೆಗುಂದಿದವರಾದರು. ಅನೇಕ ರುಚಿ ರು ಈ ಅಪಮಾನವನ್ನನುಭವಿಸುವದಕ್ಕಿಂತ ಮರಣ ಹೊಂದುವದು ಲೇಸೆಂದು ಸುಮ್ಮನೆ ತಲೆಗಳನ್ನು ಬಗ್ಗಿಸಿ ಕುಳಿತುಕೊಂಡರು. ಅಷ್ಟರಲ್ಲಿ ಗರ್ವಿಷ್ಟನಾದ ರಾವಣನು ಎದ್ದು ಬಂದು , ನಸುನಗುತ್ತ “ಎಲೈ ಜನಕಮಹಾಂ : ಜನೇ, ಸಮಸ್ಯ ದೇವತೆಗಳನ್ನೂ ಗೆದ್ದ, ಹಾಗು ಕೈಲಾಸಪರ್ವವನ್ನು ಅಲ್ಲಾಡಿಸಿದ ನನ್ನ ಭುಜ ಬಲವನ್ನು ನೋಡು', ಎಂದು ಮಾತನಾಡಿ ಧನುಸ್ಸನ್ನು ಒಂದು ಭುಜದಿಂದ ಎತ್ತಲು ಪ್ರಯತ್ನ ಮಾಡಿದನು. ಆದರೆ ಅದು ನಿಷ್ಪಲವಾಯಿತು. ಮುಂದೆ ತನ್ನ ಭುಜಗಳಲ್ಲಿ ನಾಲ್ಕು, ಐದು ಈ ರೀತಿಯಾಗಿ ಒಂದೊಂದು ಹೆಚ್ಚು ಉಪಯೋಗಿಸಿ ದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಹತ್ತೊಂಬತ್ತು ಭುಜಗಳಿಂದ ಆ ಧನು ಸೃನ್ನು ಎತ್ತುವಾಗ ಅವನಿಗೆ ಬಹು ಶ್ರಮವಾಗುತ್ತ ಬಂತು. ಮುಂದೆ ತಂದು ಭುಜವನ್ನೂ ಅವುಗಳ ಸಹಾಯಕ್ಕಾಗಿ ಉಪಯೋಗಿಸಿದನು. ಅಷ್ಟರೊಳಗೆ ಆ ಧನುಸ್ಸು ಅವನ ಕೈಗಳಿಂದ ಜಾರಿ ಅವನ ಮೈ ಮೇಲೆ ಬಿತ್ತು. ಅಹಹ !!! ಆ ದುರಭಿಮಾನಿಯ ಹೃದಯದ ಮೇಲೆ ಪರ್ವತದಂತೆ ಬಿದ್ದ ಧನುಸ್ಸನ್ನು ನೋಡಿ ಸಭೆ • ಯಲ್ಲಿ ಹಾ! ಹಾ! ಕಾರವು ಉಂಟಾಯಿತು. ರಾವಣನ ಮುಖಗಳಲ್ಲಿ ಬೆವರಿನಿಂದ ತುಂಬಿದವು. ಏಳುವದಕ್ಕೆ ಅಸಾಧ್ಯವಾಯಿತು. ಮುಂದೆ ರಾಸಾಧಿಪನು ಕೈ ಕಾಲುಗಳನ್ನು ಬಡಿಯಲಾರಂಭಿಸಿದನು. ಆದರೂ ಪ್ರಯೋಜನವಾಗಲಿಲ್ಲ. ಇ ಪ್ಯಾಗಲು ರಾವಣನಿಗೆ ಭಯವುಂಟಾಯಿತು. ಮೈಯೊಳಗಿನ ಹೊಲಸುಗಳಿಂದ ವಸ್ತ್ರಗಳು ಮಲಿನವಾದವು. ಆಗಲಾದರೂ ಧನುಸ್ಸನ್ನು ಕೆಳಗಿಳಿಸಿ ಪ್ರಾಣದಾನ ಮಾಡಲು ಯಾರೂ ಮುಂದೆ ಬರಲಿಲ್ಲ. ಆಗ್ಗೆ ಜನಕ ಮಹಾರಾಜನು ಸಭೆಯಕಡೆಗೆ ನೋಡಿ ಇದೇನಾಶ್ಚರ್ಯ ! ಭೂಮಿಯಲ್ಲಿ ಕ್ಷತ್ರಿಯರು ಯಾರೂ ಇಲ್ಲವೇ ಹ್ಯಾಗೆ” ಎಂದು ಮಾತನಾಡಿದನು , ಈ ಮಾತನ್ನು ಕೇಳಿದೊಡನೆ ವಿಶ್ವಾಮಿತ್ರರು ಶ್ರೀ ರಾಮನನ್ನು ನೋಡಿ1 ರಾಮಚಂದ್ರಾ, ನಿನ್ನ ಸಮಕ್ಷವಾಗಿ ಈ ಹತ್ತು ತಲೆಗಳ ಪುನಗ ಇಂಧ ತೊಂದರೆಯುಂಟಾಗಬಾರದು, ಏಳು , ಪ್ರಾಣದಾನಮಾಡು, ಎಲ್ಲ ದಾನ ಗಳಿಗಿಂತಲೂ ಪ್ರಾಣದಾನವೇ ಶ್ರೇಷ್ಠವಾದದ್ದಲ್ಲವೆ?” ಹೀಗೆ ಮಾತನಾಡಲು ಗುರುಗಳ ಈ ಮಾತುಗಳನ್ನು ಕೇಳಿ ದಶರಥನ ಜೈಪ್ರಸುತ್ರನಾದ ಶ್ರೀ ರಾಮನು