ಸರಕಾಂಡ, ೧೫ ತನ್ನ ಆಸನದಿಂದ ಎದ್ದುನಿಂತನು, ಬಳಿಕ ಆತನು ವಿಶ್ವಾಮಿತ್ರರ ಪಾದಗಳಲ್ಲಿ ಮಸ್ತಕವನ್ನಿಟ್ಟು ನಮಸ್ಕರಿಸಿ, ವಸ್ತ್ರವನ್ನು ಟೊಂಕಕ್ಕೆ ಸುತ್ತಿ, ಕಿರೀಟ ವೇ ಮೊದಲಾದ ಭೂಷಣಗಳನ್ನು ಸರಿಮಾಡಿಕೊಂಡು ಮೆಲ್ಲ ಮೆಲ್ಲನೇ ಧೈರ್ಯ ದಿಂದ ಧನುಸಿನ ಸಮೀಪಕ್ಕೆ ಬಂದನು. ಆತ್ಯಾಮಸುಂದರವಾದ ರಾಮನನ್ನು ನೋ ಡಿ ಕೆಲವು ಜನರು-ttರಾವಣನಿಗೂ ಅಪಾಯಕರವಾದ ಧನುಸಿನ ಕತೆಗೇ ಈ ಹುಡುಗನು ಯಾಕೆ ಹೋಗುವನು? ನಿಶ್ಚಯವಾಗಿಯೂ ಈತನ ಆಯುಷ್ಯವು ಈ ದಿವಸಕ್ಕೆ ತೀರಿತು. ಹೀಗೆಮಾತನಾಡುವರು. ಕೆಲವರು ಧನುಸನ್ನು ನೋ ಡುವದಕ್ಕೆ ಈ ಕುಮಾರನು ಹೋಗುವನು ಎಂದರು. ಹೀಗೆ ಶ್ರೀ ರಾಮಚಂದ್ರನು ಧನುಸಿನ ಸಮೀಪಕ್ಕೆ ಹೋಗುವದರೊಳಗೆ ಅನೇಕರು ಅನೇಕ ಅಭಿಪ್ರಾಯಗಳ ನ್ನು ಮನಸಿನಲ್ಲಿ ತಂದರು, ಹೆಚ್ಚಾಗಿ ಹೇಳುವದರಿಂದೇನು? ಜನಕಮಹಾರಾ ಜನೂ ಕೂಡ ಈ ಧನುಸನ್ನು ಬಾಲಕನಾದ ರಾಮನು ಯಾವರೀತಿಯಿಂದ ಸ್ವೀ ಕಾರ ಮಾಡ್ಯಾನು? ನಾವೇನಾದರೂ ನಡುವೆ ಮಾತಾಡಲು ಅವಕಾಶವೇ ಇಲ್ಲ. ಗುರುಗಳಾದ ವಿಶ್ವಾಮಿತ್ರರ ಆಜ್ಞೆಯು ಕ್ರೂರವಾದರು” ಎಂದು ಮನಸಿನಲ್ಲಿ ಆಲೋಚಿಸಲಾರಂಭಿಸಿದನು, -, ಇತ್ಯ ಪರದೆಯ ಹಿಂದಿನಿಂದ ರಂದ್ರಗಳಲ್ಲಿ ಸಭೆಯ ವಿಷಯಗಳನ್ನೆಲ್ಲಾ ನೋಡುತ್ತಿರುವ ರಾಜಸ್ತ್ರೀಯರು-ಶಂಭೋ, ಶಂಕರಾ , ನಾರಾಯಣಾ, ಈ ಮಗುವಿಗೆ ಯಾವ ತೊಂದೆರೆಯೂ ಆಗದಂತೆ ಕಾಪಾಡುವ ಭಾರವು ನಿನ್ನನು ಹೊಂದಿರುವದು ” ಎಂದು ಪ್ರಾರ್ಥನೆ ಮಾಡಲಾರಂಭಿಸಿದರು. ರಾಜಪುತ್ರಿಯಾದ ಸೀತಾದೇವಿಯು ಕಾಮನಂತ ಸುಂದರನಾಗಿದ್ದ ಶ್ರೀ ರಾಮಚಂದ್ರನನ್ನು ನೋ ಡಲು ಎದ್ದು ನಿಲ್ಲುವಳು. ಮುಂದೆ ತನ್ನ ತಂದೆಯ ಪ್ರತಿಜ್ಞೆಯು ಸ್ಮರಣೆಗೆ ಬಂ ದೊಡನೆ, ಬಹುಗ್ರಸ್ತನಾದ ಚಂದ್ರನಂತೆ ಯೋಚನೆಗಳಿಂದ ಕಳೆಗುಂದುವಳು. ದ್ವೇಷಿಯಾದ ನಮ್ಮ ತಂದೆಯು ಇಂಥಾಷಣವನ್ನು ಯಾಕೆಮಾಡಿದ್ದಾನು? ಅಹೋ, ಈ ಮನೋಹರಸ್ವರೂಪವುಳ್ಳ ಸುಕುಮಾರನೆಲ್ಲಿ, ಮತ್ತು ಈ ಪರ್ವತದಂತ ಕಠಿ ಣವಾದ ಧನುಸೆಲ್ಲಿ? ದೀನದಯಾಳೋ ಶಂಭೋ, ಈಗ ನಾನು ಮಾಡುವ ಈ ಪಾಯವೇನು? ಪ್ರಭೋ, ನನ್ನ ಮನೋರಥವನ್ನು ನೀನೇನು ಮಾಡುವೆಯೋ ತಿಳಿ ಯದು, ನಾನಂತು ಈ ಹೃದಯಂಗಮಸ್ವರೂಪವಾದ ರಾಮನನ್ನು ಹೊರಗಿ ಮತ್ತೊಬ್ಬರನ್ನು ಸೃಷ್ಟದಲ್ಲಾದರೂ ನೋಡಲಾರೆನು, ಇಷ್ಟರ ಮೇಲೆ ನನ್ನ ತಂ ದೆಯು ಬಲಾತ್ಕಾರ ಮಾಡಿ ಮತ್ತೊಬ್ಬರಿಗೆ ವಿವಾಹಮಾಡಿ ಕೊಟ್ಟಿದ್ದೇ ಆದರೆ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೫
ಗೋಚರ